ನಾಗರಹೊಳೆ ಆದಿವಾಸಿಗಳ ಮನೆಗಳಿಗೆ ಟಾರ್ಪಲ್ ಹೊದಿಕೆ ಹಾಕಿದ ಉಸಿರು ತಂಡ

ಸಂಚಾರಿ ವಿಜಯ್ ಸ್ಮರಣಾರ್ಥ
ನಾಗರಹೊಳೆ ಕಾಡಂಚಿನ ಆದಿವಾಸಿಗಳ ಮನೆಗಳಿಗೆ ಟಾರ್ಪಲ್ ಹೊದಿಕೆ ಹಾಕುವ ಕಾರ್ಯಕ್ರಮ ಮಾಡಿದ್ದಾರೆ ಉಸಿರು ತಂಡದವರು. ಚಿತ್ರ ಸಾಹಿತಿ ಕವಿರಾಜ್ ನೇತೃತ್ವದಲ್ಲಿ ಕೋವಿಡ್ ಕಷ್ಟಕಾಲದಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡುತ್ತಾ, ಎಲ್ಲರ ಗಮನ ಸೆಳೆದು ಪ್ರಶಂಸೆಗೆಗೊಳಗಾಗಿದ್ದ ಉಸಿರು ತಂಡ, ಇದೀಗ ಸಂಚಾರಿ ವಿಜಯ್ ಅವರ ನೆನಪಲ್ಲಿ ಅವರ ಕನಸನ್ನು ನನಸು ಮಾಡಿದ್ದಾರೆ.
ನಾಗರಹೊಳೆ ಭಾಗದ ಕಾಡಂಚಿನ ಆದಿವಾಸಿಗಳ ಮನೆಗಳಿಗೆ ಸರಿಯಾದ ಸೂರಿಲ್ಲ ಎಂಬುದನ್ನ ಆರಿತು ತಂಡ ಇಂಥದೊಂದು ಮಹತ್ತರ ಕಾರ್ಯಕ್ಕೆ ಮುಂದಾಗಿದ್ದು, 60 ಮನೆಗಳಿಗೆ ಟಾರ್ಪಲ್ ಹೊದಿಸಿ ಬಂದಿದ್ದಾರೆ. ಇವರ ಕಾರ್ಯಕ್ಕೆ ನಮ್ ಕಡೆಯಿಂದನೂ ಸಹ ಮೆಚ್ಚುಗೆ ಇದ್ದು, ಅವರು ಮಾಡುವ ಪ್ರತಿಯೊಂದು ಸಮಾಜಮುಖಿ ಕಾರ್ಯಕ್ಕೆ ಶುಭವಾಗಲಿ.