ತಾಯಂದಿರಿಂದ ಎಂಎಂಸಿಹೆಚ್ ಹಾಡುಗಳ ಅನಾವರಣ
ದಶಕದ ನಂತರ ಮುಸ್ಸಂಜೆ ಮಾತು ಚಿತ್ರದ ಯಶಸ್ವೀ ಜೋಡಿ ನಿರ್ದೇಶಕ ಮುಸ್ಸಂಜೆ ಮಹೇಶ್ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಮತ್ತೊಂದು ಮ್ಯೂಸಿಕಲ್ ಹಿಟ್ ಚಿತ್ರವನ್ನು ಪ್ರೇಕ್ಷಕರಿಗೆ ನೀಡಲು ಅಣಿಯಾಗಿದ್ದಾರೆ. ಎಂಎಂಸಿಹೆಚ್ ಎಂಬ ವಿಷೇಶ ಶೀರ್ಷಿಕೆ ಹೊಂದಿರುವ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಪಂಚತಾರಾ ಹೋಟೆಲೊಂದರಲ್ಲಿ ನಡೆಯಿತು. ವಿಷೇಶವಾಗಿ ಈ ಚಿತ್ರದಲ್ಲಿ ಅಭಿನಯಿಸಿದ ನಾಲ್ವರು ನಾಯಕಿಯರ ತಾಯಂದಿರ ಕೈನಲ್ಲೇ ಈ ಚಿತ್ರದ ಹಾಡುಗಳ ಮೇಕಿಂಗ್‍ನ್ನು ಲೋಕಾರ್ಪಣೆ ಮಾಡಲಾಯಿತು. ಈ ಆಡಿಯೋ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಫಿಲಂ ಚೇಂಬರ್ ಅಧ್ಯಕ್ಷರಾದ ಸಾ.ರಾ. ಗೋವಿಂದು, ಉಮೇಶ್ ಬಣಕಾರ್ ಸೇರಿದಂತೆ ಹಲವರು ಗಣ್ಯರು ಆಗಮಿಸಿದ್ದರು.
ಇನ್ನು ಈ ಚಿತ್ರವನ್ನು ಎಸ್. ಪುರುಷೋತ್ತಮ್, ಜÁನಕಿರಾಮ್ ಹಾಗೂ ಅರವಿಂದ್ ಈ ಮೂವರೂ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ರಜನಿಕಾಂತ್ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಜÁನಿ ಎಂಬ ಚಿತ್ರವನ್ನು ನಿರ್ಮಿಸಿದ್ದ ಈ ತಂಡ ಈಗ ತಮ್ಮ ಬ್ಯಾನರ್ ಮೂಲಕ ಎರಡನೇ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಲು ಅಣಿಯಾಗಿದೆ. ಇದೇ ಮೊದಲಬಾರಿಗೆ ಕನ್ನಡ ಚಿತ್ರರಂಗದ ನಾಲ್ವರು ಹಿರಿಯ ಕಲಾವಿದೆಯರ ಪುತ್ರಿಯರು ಈ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬರುವ ಪ್ಯಾಥೋಸಾಂಗ್ ಒಂದನ್ನು ಇಂಡಿಯನ್ ರೈಲ್ವೇಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ ದಯಾನಂದ್ ಅವರು ಹಾಡಿದ್ದಾರೆ. ಸಾಹಿತಿ ಗೌಸ್ ಪೀರ್ ರಚಿಸಿದ ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ ಎಂಬ ಶೋಕಗೀತೆಗೆ ದಯಾನಂದ್ ಅವರು ದನಿಯಾಗಿದ್ದಾರೆ. ಈವರೆಗೆ ಹಲವಾರು ಭಾವಗೀತೆಗಳು ಭಕ್ತಿಗೀತೆಗೆಳನ್ನು ಹಾಡಿರುವ ಇವರು ಚಲನಚಿತ್ರಕ್ಕೆ ಹಾಡಿರುವುದು ಫಸ್ಟ್ ಟೈಮ್.
ಹಿರಿಯನಟಿ ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾರಾಜ್, ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್, ಸುದಾ ಬೆಳವಾಡಿ ಅವರ ಪುತ್ರಿ ಸಂಯುಕ್ತಾ ಹೊರನಾಡು ಹಾಗೂ ಸುಮಿತ್ರಮ್ಮ ಅವರ ಪುತ್ರಿ ನಕ್ಷತ್ರ ಎಂ.ಎಂ.ಸಿ.ಹೆಚ್. ಚಿತ್ರದ ನಾಲ್ಕು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವರ ಜೊತೆ ನಟಿ ರಾಗಿಣಿ ದ್ವಿವೇದಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬ ಪೆÇೀಲೀಸ್ ಕಾಪ್ ಗೆಟಪ್‍ನಲ್ಲಿ ಅವರು ಮಿಂಚಿದ್ದಾರೆ. ಈ ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಶ್ರೇಯಾ ಘೋಷಾಲ್, ವಿಜಯ ಪ್ರಕಾಶ್‍ರಂಥ ಪ್ರಮುಖ ಗಾಯಕರು ಹಾಡಿದ್ದಾರೆ.