“UNLOCK” ಕಿರುಚಿತ್ರದ ಫಸ್ಟ್ ಲುಕ್ ಬಿಡುಗಡೆ
“UNLOCK” ಕಿರುಚಿತ್ರದ ಫಸ್ಟ್ ಲುಕ್ ಬಿಡುಗಡೆ
ಪೂರ್ಣಪ್ರಮಾಣದ ಚಿತ್ರಗಳಿಗೆ ಪೈಪೆÇೀಟಿ ನೀಡುವಷ್ಠರಮಟ್ಟಿಗೆ ಕಿರುಚಿತ್ರಗಳು ತಯಾರಾಗುತ್ತಿವೆ. ಗುಣಮಟ್ಟದ ವಿಚಾರದಲ್ಲಿಯೂ ರಾಜಿ ಮಾಡಿಕೊಳ್ಳದೆ ಪ್ರೇಕ್ಷಕರಗಮನ ಸೆಳೆಯುತ್ತಿದೆ. ಇತ್ತೀಚೆಗೆ ತನ್ನ ಫಸ್ಟ್ ಲುಕ್ ಬಿಡುಗಡೆ ಮಾಡಿಕೊಂಡಿರುವ “UNLOCK” ಕಿರುಚಿತ್ರ ತಂಡ ಪೆÇೀಸ್ಟ್ ಪೆÇ್ರಡಕ್ಷನ್ ಹಂತ ತಲುಪಿದ್ದು, ಜುಲೈ ತಿಂಗಳಲ್ಲಿ ಟೀಸರ್ ಬಿಡುಗಡೆಗೆ ರೆಡಿಯಾಗ್ತಿದೆ. ಅಮರೇಶ್ ನಿರ್ಮಾಣದ ಈ ಚೊಚ್ಚಲ ಕಿರುಚಿತ್ರಕ್ಕೆ ನಿರ್ದೇಶಕ ಶ್ರೀಧರ್ ಶಾಸ್ತ್ರಿ ಆಕ್ಷನ್-ಕಟ್ ಹೇಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಜನಪ್ರಿಯ ಧಾರವಾಹಿಯ ಸಹೋದರ ಪಾತ್ರದ ಅಖಿಲ್ ಎಂದೇ ಖ್ಯಾತಿಯಾಗಿರುವ ರಾಜೇಶ್ ಧ್ರುವ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಯುವ ಜನತೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ಮೊಬೈಲ್ ಬಹಳ ಮುಖ್ಯ, ನಾವು ಎಷ್ಠರ ಮಟ್ಟಿಗೆ ಮೊಬೈಲ್ಗಳಿಗೆ ಅಡಿಟ್ ಆಗಿದ್ದೇವೆ ಎಂಬ ವಿಷಯವನ್ನೇ ಮುಖ್ಯವಾಗಿ ಇಟ್ಟುಕೊಂಡು ತಯಾರಾಗಿರುವ ಈ ಕಿರುಚಿತ್ರದಲ್ಲಿ ಮೂರು ಮುಖ್ಯ ಪಾತ್ರಗಳಿವೆ.
ಪ್ರತಿನಿತ್ಯದ ಜೀವನದಲ್ಲಿ ಮೊಬೈಲ್ನಿಂದ ಉಂಟಾಗುವ ಅನುಕೂಲ ಹಾಗೂ ಅನಾನುಕೂಲಗಳ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು. ಈ ಕಿರು ಚಿತ್ರದ ವಿಶೇಷ ಪಾತ್ರದಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ, ಪದ್ಮಶ್ರೀ ಜೈನ್ ಹಾಗೂ ಬಾಲ ಪ್ರತಿಭೆಯಾಗಿ ಸಮರ್ಥ ಜೋಷಿ ನಟಿಸಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಮೊಬೈಲ್ ಅತ್ಯವಾಶ್ಯಕವಾದರೂ ಅದೊಂದು ಪ್ರತಿನಿತ್ಯದ ಜೀವನ ಅರ್ಧ ಭಾಗವಾಗಿದೆ. ಈ ವಿಷಯದ ಬಗ್ಗೇಯೇ ಸಂಶೋಧನೆಗಿಳಿದ ನಿರ್ದೇಶಕರಿಗೆ ಮೊಬೈಲ್ ಬಗ್ಗೆ ಅದೇನೋ ಒಂಥರಾ ಕೂತೂಹಲ, ಈ ಕುತೂಹಲ ಹಾಗೂ ಸಾಮಾಜಿಕವಾದ ಸಂದೇಶದ ಉದ್ದೇಶವೇ “Uಓಐಔಅಏ” ಈ ಕಿರುಚಿತ್ರದಲ್ಲಿ ಮೂರು ವಿಶೇಷ ಪಾತ್ರಗಳಲ್ಲಿ ಸಮಾಜಿಕ ಸಂದೇಶ ಸಾರುವುದರೊಂದಿಗೆ ಪ್ರೇಕ್ಷಕನನ್ನು ಜಾಗೃತಗೊಳಿಸುವುದೇ ನಿರ್ದೇಶಕರ ಆಶಯ. ಅತ್ಯುತ್ಸಾಹವುಳ್ಳ ತಂಡದದೊಂದಿಗೆ ನೂತನ ಪಯತ್ನಕ್ಕೆ ಮುಂದಾಗಿದ್ದಾರೆ ನಿರ್ದೇಶಕ ಶ್ರೀಧರ್ ಶಾಸ್ತ್ರಿ.