ಮಂಜುಳಾ, ಮಾಲಾಶ್ರೀ ನೆನಪಿಸುವ ಉಗ್ರಾವತಾರ – ಉಪೇಂದ್ರ
’ಉಗ್ರಾವತಾರ’ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ’ಹಂಗೆ ಬರ‍್ತೋಳ್ ನೋಡೋ’ ಗೀತೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿ ಸಿದ್ದಿ ಸಹೋದರಿಯರ ಕಂಠದಲ್ಲಿ ಮ್ಯಾಜಿಕ್ ಇದೆ. ’ಸಲಗ’ದಲ್ಲಿ ಧೂಳ್ ಎಬ್ಬಿಸಿದ್ದೀರಾ. ಇದರಲ್ಲಿ ಪ್ರಿಯಾಂಕ ಅವರೊಂದಿಗೆ ಹೆಜ್ಜೆ ಹಾಕಿದ್ದೀರಾ. ಸಾಂಗ್ ನೋಡಿದರೆ ಏನೋ ಒಂಥರ ಪಾಸಿಟೀವ್ ವೈಬ್‌ರೇಷನ್ ಕಾಣುತ್ತದೆ. ಬಹಳ ವರ್ಷಗಳ ನಂತರ ಮಹಿಳಾ ಪ್ರಧಾನ ಆಕ್ಷನ್ ಚಿತ್ರವು ಬರುತ್ತಿದೆ. ಸಾಹಸ ಚಿತ್ರದಲ್ಲಿ ಮಾಲಾಶ್ರೀ, ಅದರ ಹಿಂದೆ ಮಂಜುಳಾ ಮಾಡ್ತಾ ಇದ್ದರು. ಸದ್ಯ ಫಿಮೇಲ್ ಸಿನಿಮಾಗಳು ಕಡಿಮೆಯಾಗುತ್ತಿದೆ. ಈ ಪಾತ್ರವು ಇವರಿಗೆ ಸೂಟ್ ಆಗಿದೆ. ಆದಷ್ಟು ಬೇಗನೆ ಚಿತ್ರ ತೋರಿಸಿ. ಆಹ್ವಾನದಲ್ಲೇ ಸೂಪರ್ ಆಗಿದೆ. ಜನ ಚಿತ್ರಮಂದಿರಕ್ಕೆ ಹಂಗೇ ಬರ‍್ತಾರೋ ನೋಡೋ ಅನ್ನುವ ಆಗಿದೆ. ಅದೇ ಪ್ರೀತಿಯಿಂದ ಖಂಡಿತ ಜನರು ನೋಡುತ್ತಾರೆ. ನಿರ್ಮಾಪಕರು ಎಲ್ಲೂ ರಾಜಿಯಾಗದೆ ಇರುವುದರಿಂದ ದೃಶ್ಯಗಳು ಚೆನ್ನಾಗಿ ಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ನಾಯಕಿ ಪ್ರಿಯಾಂಕಉಪೇಂದ್ರ ಮಾತನಾಡಿ ಈ ಪಾತ್ರವನ್ನು ನನ್ನಿಂದ ಮಾಡಲು ಸಾಧ್ಯನಾ ಎಂಬ ಪ್ರಶ್ನೆ ಕಾಡಿತು. ಛಾಲೆಂಜ್ ಆಗಿ ತೆಗೆದುಕೊಂಡಿದ್ದಕ್ಕೆ ಸಾದ್ಯವಾಯಿತು. ಡ್ಯೂಪ್ ಬಳಸದೆ ಫೈಟ್ ಮಾಡಿದ್ದೇನೆ. ಅದಕ್ಕಾಗಿ ತರಭೇತಿ ಪಡೆದುಕೊಂಡಿದ್ದೆ. ತುಂಬಾ ಸ್ವಾಭಾವಿಕ ಇರಬಾರದೆಂದು, ಮಹಿಳಾ ಅಧಿಕಾರಿಗಳು ಹೇಗೆ ಫೈಟ್ ಮಾಡುತ್ತಾರೆ ಎಂಬುದನ್ನು ನೋಡಿಕೊಂಡು ಅದೇ ರೀತಿ ಕ್ಯಾಮಾರ ಮುಂದೆ ಅಭಿನಯಸಿದ್ದೇನೆ. ಸಮಾಜದಲ್ಲಿ ಶೋಷಣೆಗೆ ಒಳಗಾಗಿ, ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರುಗಳಿಗೆ ಸಹಕಾರಿಯಾಗಿ ಪೋಲೀಸ್ ಇರುತ್ತಾರೆ ಎಂಬುದನ್ನು ಹೇಳಲಾಗಿದೆ. ಕೋವಿಡ್‌ನಿಂದ ಸ್ವಲ್ಪ ತಡವಾಗಿದೆ. ಸಿದ್ದ ಸಹೋದರಿಯರೊಂದಿಗೆ ಸಾಂಗ್ ರೆರ್ಕಾಡಿಂಗ್ ಸಮಯದಲ್ಲೆ ಒಂದರೆಡು ಹೆಜ್ಜೆ ಹಾಕಿದ್ದೆ. ಅದು ಚಿತ್ರೀಕರಣದಲ್ಲಿ ಸುಲಭವಾಯಿತು. ಉಪೇಂದ್ರ ಅವರಿಗೆ ಇಷ್ಟವಾದರೆ ಎಲ್ಲರಿಗೂ ಇಷ್ಟವಾದಂತೆ ಅಂತ ಖುಷಿ ಹಂಚಿಕೊಂಡರು.
ಕಥೆ ಕೇಳಿ ಅದಕ್ಕೆತಕ್ಕಂತೆ ಸಾಹಿತ್ಯ ಬರೆಯಲಾಗಿದೆ. ಮೇಡಂ ಜತೆಗೆ ಡ್ಯಾನ್ಸ್ ಮಾಡಿದ್ದು ತೃಪ್ತಿ ತಂದುಕೊಟ್ಟಿದೆ. ’ಸಲಗ’ದ ನಂತರ ಎರಡನೇ ಅವಕಾಶ ಸಿಕ್ಕಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯನ್ನು ಬಳಸಲಾಗಿದೆ. ನಿಮಗೆಲ್ಲಾ ಇಷ್ಟವಾಗುತ್ತದೆಂದು ಅಂತ ನಂಬಿರುವೆನೆಂದು ಸಿದ್ದಿ ಸಹೋದರಿಯಲ್ಲಿ ಒಬ್ಬರಾದ ಗಿರಿಜಾ ಹೇಳಿದರು.
ನಿರ್ದೇಶಕ ಗುರುಮೂರ್ತಿ, ನಿರ್ಮಾಪಕ ಸತೀಶ್, ಸಂಭಾಷಣೆ ಬರೆದಿರುವ ಕಿನ್ನಾಳ್‌ರಾಜ್, ಛಾಯಾಗ್ರಾಹಕ ನಂದಕುಮಾರ್ ಅನುಭವಗಳನ್ನು ಹೇಳಿಕೊಂಡರು.