ಉದಯ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಚಲನಚಿತ್ರ “ಮಹಾಬಲಿ ಭೈರವ” ಭಾನುವಾರ ಸಂಜೆ 6.30ಕ್ಕೆ
ಮಹಾಬಲಿ ಭೈರವಾ 2009 ರ ಭಾರತೀಯ ಫ್ಯಾಂಟಸಿ ಆಕ್ಷನ್ ಚಿತ್ರವಾಗಿದ್ದು, ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರ ಕಥೆ ಬರೆದಿದ್ದಾರೆ ಮತ್ತು ಎಸ್.ಎಸ್.ರಾಜಮೌಳಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ಮತ್ತು ಕಾಜಲ್ ಅಗರ್ವಾಲ್ ಮುಖ್ಯ ಪಾತ್ರದಲ್ಲಿ ಅಬಿನಯಿಸಿದ್ದಾರೆ. ದೇವ್ ಗಿಲ್ ಮತ್ತು ಶ್ರೀಹಾರಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಗೀತಾ ಆರ್ಟ್ಸ್ ನ ಅಲ್ಲು ಅರವಿಂದ್ ನಿರ್ಮಿಸಿದ್ದಾರೆ.
ಪುನರ್ಜನ್ಮ ವಿಷಯವೇಈ ಚಿತ್ರದ ಕಥಾವಸ್ತು. ಇದು ನಾಲ್ಕು ಜನರ ಸುತ್ತ ಸುತ್ತುತ್ತದೆ. ರಾಜಕುಮಾರಿಯ ಸುರಕ್ಷತೆಯ ಉಸ್ತುವಾರಿ ಹೊಂದಿರುವ ಒಬ್ಬ ಧೀರ ಯೋಧ, ಅವನನ್ನು ಪ್ರೀತಿಸುವ ರಾಜಕುಮಾರಿ, ರಾಜಕುಮಾರಿಯನ್ನು ಮೋಹಿಸುವ ಸೈನ್ಯದ ಸೇನಾಧಿಪತಿ ಮತ್ತು ಚಕ್ರವರ್ತಿ ಇವರು ಈ ಚಲನ ಚಿತ್ರದ ಮೂಲ ವ್ಯಕ್ತಿಗಳು. ಅವರ ಆಸೆಗಳನ್ನು ಈಡೇರಿಸುವ ಮೊದಲು ಅವರೆಲ್ಲರೂ ಸಾಯುತ್ತಾರೆ, ನಂತರ 400 ವರ್ಷಗಳ ಬಳಿಕ ಆ ಯೋಧನ ಪುನರ್ಜನ್ಮವು ಹಾಗೆ ಅವರುಗಳ ಆಕಸ್ಮಿಕ ಮುಖಾಮುಖಿಯು ಅವರ ಹಿಂದಿನ ಜೀವನವನ್ನು ನೆನಪಿಸಿಕೊಡುತ್ತದೆ.
ಉದಯ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಚಲನಚಿತ್ರ “ಮಹಾಬಲಿ ಭೈರವ” ಭಾನುವಾರ (06.12.2020) ಸಂಜೆ 6.30ಕ್ಕೆ ಪ್ರಸಾರವಾಗಲಿದೆ.