ಉದಯ ಯುಗಾದಿ ವಿಶೇಷ

Published on

540 Views

ಹೊಸ ವರುಷಕೆ ಹೊಸ ಹರುಷವು ಮರಳಿ ಬಂದಿದೆ, ಸಡಗರ, ಸಂಭ್ರಮದೊಂದಿಗೆ ಯುಗಾದಿ. ನಿಮ್ಮ ನೆಚ್ಚಿನ ಉದಯ ಟಿವಿ ಈ ಯುಗಾದಿ ಹಬ್ಬವನ್ನು ವಾರವಿಡೀ ವಿಶೇಷ ಸಂಚಿಕೆಗಳೊಂದಿಗೆ ಆಚರಿಸುತ್ತಿದೆ.
ಎಪ್ರಿಲ್ 1, ಸೋಮವಾರದಂದು ಕ್ಯೂಟ್ ಲವ್ ಸ್ಟೋರಿ ‘ಸೇವಂತಿʼ ಮಹಾಸಂಚಿಕೆ. ಮದುವೆಯೇ ಆಗಬಾರದೆಂದಿರುವ ನಾಯಕ ಅರ್ಜುನನಿಗೆ ಮನೆಯವರ ಒತ್ತಾಯಕ್ಕೆ ಬಂದ ಮದುವೆ ಪ್ರಸ್ತಾಪದಿಂದ ತಪ್ಪಿಸಿಕೊಳ್ಳಲು ಉಪಾಯ ಹುಡುಕುತ್ತಿರುತ್ತಾನೆ. ಅದೇ ಸಮಯದಲ್ಲಿ ಸಂಕಷ್ಟದಲ್ಲಿರುವ ನಾಯಕಿ ಸೇವಂತಿ ಅವನ ಬಳಿ ಸಹಾಯ ಬೇಡಿ ಬರುತ್ತಾಳೆ. ಇದೇ ಸಂದರ್ಭವನ್ನು ಬಳಸಿಕೊಳ್ಳುವ ಅರ್ಜುನ್, ಸಹಾಯ ಮಾಡುವ ನೆಪದಲ್ಲಿ ಅವಳನ್ನೇ ತನ್ನ ಜೊತೆ ಒಂದು ವರ್ಷಕ್ಕೆ ಒಪ್ಪಂದದ ಮದುವೆಯಾಗುವಂತೆ ಪ್ರಸ್ತಾಪಿಸುತ್ತಾನೆ. ಯುಗಾದಿ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಂಡಿದ್ದಾಗ ಅರ್ಜುನ್ನನ್ನು ವೈಯಕ್ತಿಕವಾಗಿ ದ್ವೇಷಿಸುತ್ತಿರುವ ಸೇವಂತಿ ದ್ವಂದ್ವ ಮನಸ್ಥಿತಿಯಲ್ಲಿರುತ್ತಾಳೆ. ಹಬ್ಬದ ದಿನದಂದು ಸೇವಂತಿಗೆ ಅರ್ಜುನ್ ಮದುವೆ ವಿಷಯದಲ್ಲಿ ಒಂದು ಗಟ್ಟಿ ನಿರ್ಧಾರ ತೆಗದುಕೊಳ್ಳುವ ಸಂದರ್ಭ ಬರುತ್ತದೆ. ಅರ್ಜುನನ ಜೊತೆ ಒಪ್ಪಂದದ ಮದುವೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಯಾವುದು ಎಂಬ ಕುತೂಹಲ ಹೊತ್ತು ತರುತ್ತಿದೆ, ಈ ಯುಗಾದಿ ವಿಶೇಷದ ʼಸೇವಂತಿʼ ಮಹಾಸಂಚಿಕೆ ಇದೇ ಸೋಮವಾರ ರಾತ್ರಿ 7:30ರಿಂದ 8:30ಕ್ಕೆ ಪ್ರಸಾರವಾಗಲಿದೆ.

ಎಪ್ರಿಲ್ 2, ಮಂಗಳವಾರದಂದು ಎಲ್ಲರ ಮನಗೆದ್ದ ಕೌಟುಂಬಿಕ ಧಾರಾವಾಹಿ ʼದೇವಯಾನಿʼ ಮಹಾಸಂಚಿಕೆ. ಈ ಯುಗಾದಿ ಹಬ್ಬವು ದೇವಯಾನಿ-ಶ್ರೀವತ್ಸ ಮನೆಯಲ್ಲಿ ಬಾಡಿಹೋಗಿರುವ ಹಳೆಯ ಸಂಬಂಧಗಳನ್ನು ಮತ್ತೆ ಚಿಗುರುವಂತೆ ಮಾಡಲಿದೆ. ಗಂಡನ ಮನೆ ಬಿಟ್ಟು ತವರಿಗೆ ಬಂದ ನಾದಿನಿ ಶಾಂಭವಿಯನ್ನು ಅವಳ ಗಂಡ ಸಂದೇಶ್ನೊಂದಿಗೆ ಜೊತೆಗೂಡಿಸಲು ದೇವಯಾನಿ ನಿರ್ಧರಿಸುತ್ತಾಳೆ. ಹಬ್ಬದ ಸಂಪ್ರದಾಯಗಳನ್ನು ಪಾಲಿಸಿಕೊಂಡು ಸಂಭ್ರಮ-ಸಡಗರದ ಜೊತೆ ಒಂದಿಷ್ಟು ತುಂಟಾಟ ಮಾಡುತ್ತಾ ಹಬ್ಬದ ಆಚರಣೆ ನಡೆಯುವುದರ ಜೊತೆ ದೇವಯಾನಿಗೆ ಶಾಂಭವಿ- ಸಂದೇಶರ 8 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ವಿಷಯ ತಿಳಿದು, ದೇವಯಾನಿ ಸಂದೇಶ್ ನನ್ನು ಮನೆಗೆ ಕರೆಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾಳೆ. ಅಂದು ಬೇರೆಯಾದ ದಂಪತಿಗಳನ್ನು ದೇವಯಾನಿ ಒಂದು ಮಾಡುವುದರಲ್ಲಿ ಯಶಸ್ವಿಯಾಗುತ್ತಾಳಾ ಎಂಬ ಕುತೂಹಲದೊಂದಿಗೆ ʼದೇವಯಾನಿʼ ಮಹಾಸಂಚಿಕೆ ಇದೇ ಮಂಗಳವಾರ ರಾತ್ರಿ 7:00ರಿಂದ 8:00ಕ್ಕೆ ಪ್ರಸಾರವಾಗಲಿದೆ

ಎಪ್ರಿಲ್ 3, ಬುಧವಾರದಂದು ಕರುಳ ಬಳ್ಳಿಯ ವಾತ್ಸಲ್ಯದ ಕತೆ ʼಜೋ ಜೋ ಲಾಲಿʼ ಮಹಾಸಂಚಿಕೆ. ಖಾಯಿಲೆಯಿಂದ ನರಳುತ್ತಿರುವ ರುಕ್ಮಿಣಿ, ತಾನು ಸಾಯುವ ಮುಂಚೆ ತನ್ನ ಗಂಡ ಮಾಧವನಿಗೆ ಮರುಮದುವೆ ಮಾಡಿಸಿ ಅವನ ಹಾಗೂ ತನ್ನ ಮಗುವಿನ ಜೀವನ ಸುಭದ್ರಗೊಳಿಸಬೇಕೆಂದು ಹೆಣಗಾಡುತ್ತಿರುತ್ತಾಳೆ. ಯುಗಾದಿಯ ದಿನ, ಮಾಧವನ ಹುಟ್ಟುಹಬ್ಬವೂ ಇರುವುದರಿಂದ ಆ ಸಂಭ್ರಮದ ನಡುವೆ ಈ ಸತ್ಯ ತಿಳಿದ ಮಾಧವನ ಮನಸಿನ ಹೊರಳಾಟ ಮನೆಯವರಿಗೆ ತಿಳಿದು, ಅದರಿಂದ ರುಕ್ಮಿಣಿಯ ಖಾಯಿಲೆ ವಿಚಾರವೂ ಎಲ್ಲರಿಗೂ ತಿಳಿದುಬಿಡುತ್ತದೆಯೇ ಎಂಬ ಕುತೂಹಲದಿಂದ ಕತೆ ಸಾಗುವ ʼಜೋಜೋ ಲಾಲಿʼ ಮಹಾಸಂಚಿಕೆ ಇದೇ ಬುಧವಾರ ಸಂಜೆ 6:30 ರಿಂದ 7:30ಕ್ಕೆ ಪ್ರಸಾರವಾಗಲಿದೆ

ಎಪ್ರಿಲ್ 4, ಗುರುವಾರದಂದು ಸ್ನೇಹ-ದ್ವೇಷ, ತಂತ್ರ-ಮಂತ್ರಗಳಿಂದ ತನ್ನ ಮಾಯಾಜಾಲಕ್ಕೆ ನೋಡುಗರನ್ನು ಸೆಳೆದ ʼನಂದಿನಿʼ ಧಾರಾವಾಹಿಯ ಮಹಾಸಂಚಿಕೆ. ಹಬ್ಬದ ದಿನ ಶ್ರೀಮಂತ ಉದ್ಯಮಿಯಾದ ನಾಯಕ ವಿರಾಟ್ನ ಹುಟ್ಟುಹಬ್ಬವೂ ಇರುವುದರಿಂದ ನಗರದ ಎಲ್ಲಾ ಪ್ರಮುಖ ಮುಖಂಡರು, ಪ್ರಖ್ಯಾತ ವ್ಯಕ್ತಿಗಳೆಲ್ಲರನ್ನೂ ಸಂಜೆ ಅದ್ದೂರಿ ರಸದೌತಣಕ್ಕೆ ಆಗಮಿಸಿರುತ್ತಾರೆ. ಈ ಔತಣಕೂಟದಲ್ಲಿ ಜನನಿ ಕುಟುಂಬ ಮತ್ತು ನೀಲಿ ಕುಟುಂಬವೂ ಭಾಗವಹಿಸುತ್ತದೆ. ಎಲ್ಲಾ ಸಂಭ್ರಮದ ಆಚರಣೆಯ ನಡುವೆ ನೀಲಿ ವಿರಾಟ್ನ ಪ್ರೀತಿ ಬಯಸಿದರೆ ಅವನ ಮನಸ್ಸು ಜನನಿಗೆ ಸೋಲುತ್ತದೆ. ಇದನ್ನು ತಿಳಿದ ನೀಲಿ ಜನನಿಯ ಮೇಲೆ ಕಿಡಿಕಾರಿ ಅವಳಿಗೆ ಶಿಕ್ಷಿಸುವ ಪಣ ತೊಡುತ್ತಾಳೆ. ಈ ನಿಟ್ಟಿನಲ್ಲಿ ಅವಳ ಯೋಜನೆ ಏನು ಮತ್ತು ಅದು ಫಲಿಸಿದಲ್ಲಿ ಜನನಿಗಾಗುವ ಅನಾಹುತವನ್ನು ವಿರಾಟ್ನಿಂದ ತಪ್ಪಿಸಲಾಗುತ್ತದೆಯೇ ಎಂಬ ಕುತೂಹಲ ಹೊತ್ತು ತರಲಿದೆ ʼನಂದಿನಿʼ ಮಹಾಸಂಚಿಕೆ, ಇದೇ ಗುರುವಾರ ರಾತ್ರಿ 8:30ರಿಂದ 9:30ಕ್ಕೆ.

ಎಪ್ರಿಲ್ 5, ಶುಕ್ರವಾರದಂದು ಮನುಜನ ಸಹಜ ಮನಸುಗಳ ದ್ವಂದ್ವಗಳನ್ನೆತ್ತಿ ಹಿಡಿದ ʼಮಾನಸ ಸರೋವರʼ ಮಹಾಸಂಚಿಕೆ. ಚಿಂತನ್ನ ಪಡೆಯಲು ಎಲ್ಲಾ ಕೆಟ್ಟ ಮಾರ್ಗಗಳನ್ನೂ ಹಿಡಿದು ಕಡೆಗೂ ಸೋತು ಹತಾಶಳಾದ ಶರಧಿಗೆ, ತನ್ನ ಮನದ ಆಸೆಯನ್ನು ಕಡೆಗೂ ಪೂರೈಸಿಕೊಳ್ಳಲು ಕೈಜೋಡಿಸಿದ್ದು ʼನ್ಯೂರಲ್ ಬ್ರೇಕ್ಡೌನ್ʼ ಎಂಬ ಮನೋರೋಗ. ತನ್ನ ಭ್ರಮೆಯಲ್ಲಿ ಚಿಂತನ್ನನ್ನು ಮದುವೆಯಾಗಿದ್ದೇನೆಂದು ಭ್ರಮಿಸಿ ತನಗೆ ತಾನೇ ತಾಳಿಕಟ್ಟಿಕೊಂಡು ಬಂದ ಈಕೆಯ ಮನಸ್ಥಿತಿಗೆ ತಕ್ಕಂತೆ ಮನೆಯವರಿಗೆಲ್ಲಾ ನಾಟಕವಾಡಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ. ಇಂತಹ ಸಮಯದಲ್ಲಿ ಯುಗಾದಿ ಹಬ್ಬ ಬಂದಾಗ ಚಿಂತನ್-ಸುನಿಧಿ ಜೊತೆಯಾಗಿ ಹಬ್ಬ ಆಚರಿಸಬೇಕೆಂಬ ವಾಸಂತಿಯ ಹಂಬಲಕ್ಕೆ ಶರಧಿ ಮುಳ್ಳಾಗಬಾರದೆಂದು ಎಲ್ಲರೂ ನಿರ್ಧರಿಸಿ ಅವಳ ಕಣ್ತಪ್ಪಿಸಿ ಹಬ್ಬ ಆಚರಿಸುವ ನಿರ್ಧಾರ ಕೈಗೊಳ್ಳುತ್ತಾರೆ. ಅಂತೆಯೇ ಶರಧಿಗೆ ತಿಳಿಯದಂತೆ ಚಿಂತನ್-ಸುನಿಧಿ ಜೊತೆಯಾಗಿ ಪೂಜೆ ಮಾಡುತ್ತಾರೆಯೇ? ಶರಧಿಗೆ ತಿಳಿದು ಬಂದಲ್ಲಿ ಆಗುವ ಅನಾಹುತಗಳೇನು ಎಂಬ ಕುತೂಹಲದೊಂದಿಗೆ ಇದೇ ಶುಕ್ರವಾರ ರಾತ್ರಿ 9:30 ರಿಂದ 10:30 ಕ್ಕೆ ತಪ್ಪದೇ ನೋಡಿ ʼಮಾನಸ ಸರೋವರʼ ಮಹಾಸಂಚಿಕೆ.

ಈ ಯುಗಾದಿ ಹಬ್ಬದಂದು ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ವಾರವಿಡೀ ಮನರಂಜನೆಯ ಸಂಭ್ರಮಾಚರಣೆ. ಸೋಮವಾರದಿಂದ ಶುಕ್ರವಾರದವರೆಗೆ ನೀವೂ ಪಾಲ್ಗೊಳ್ಳಿ.

More Buzz

Trailers 4 months ago

Rudra Garuda Purana Official Teaser Starring Rishi, Priyanka

Trailers 4 months ago

Pepe Kannada Movie Trailer Starring Vinay Rajkumar

BuzzKollywood Buzz 4 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 4 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 4 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 4 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 4 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 4 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 4 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 5 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 5 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

BuzzShort Films 5 months ago

Kanjoos Kubera Short Film Official Video: ಕಂಜ್ಯೂಸ್ ಕುಬೇರ ಕನ್ನಡ ಕಿರುಚಿತ್ರ ನೋಡಿ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com