ಉದಯ ಸಿಂಗರ್ ಜೂನೀಯರ್ಸ್ “ಗ್ರ್ಯಾಂಡ್ ಫಿನಾಲೆ”

Published on

540 Views

ಉದಯ ಸಿಂಗರ್ ಜೂನೀಯರ್ಸ್ “ಗ್ರ್ಯಾಂಡ್ ಫಿನಾಲೆ”
ನಟ ಶರಣರ ಹಾಡಿನ ಮೋಡಿ
ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಮನೋ ಅವರ ಸಾರಥ್ಯದಲ್ಲಿ ನಡೆದ ಉದಯ ಸಿಂಗರ್ ಜೂನೀಯರ್ಸ್ ಈ ಕೊನೆಯ ಘಟ್ಟಕ್ಕೆ ತಲುಪಿದೆ. ಇದೆ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯಟಿವಿಯಲ್ಲಿ ಉದಯ ಸಿಂಗರ್ ಜೂನೀಯರ್ಸ್ ಪಿನಾಲೆ ಪ್ರಸಾರವಾಗಲಿದೆ.


16 ಮಕ್ಕಳಿದ್ದ ಸಿಂಗಿಂಗ್ ಶೋ ಫಿನಾಲೆಯ ಹೊತ್ತಿಗೆ 5 ಮಕ್ಕಳಿಂದ ಕೂಡಿದ್ದು ಅದರಲ್ಲಿ ಒಬ್ಬರನ್ನು “ಉದಯ ಸಿಂಗರ್ ಜೂನೀಯರ್” ಎಂದು ಘೋಷಿಸಲಾಗುವುದು. ಸುಮಾರು ದಿನಗಳಿಂದ ನಡೆದು ಬಂದ ಶೋನಲ್ಲಿ ವಿಭಿನ್ನರೀತಿಯ ಸಂಚಿಕೆಗಳು ಪ್ರಸಾರವಾದವು.ಅಲ್ಲದೆ ಚಿತ್ರರಂಗದ ಹೆಸರಾಂತ ನಟ ನಟಿಯರಾದ ಮಾಲಾಶ್ರೀ, ಪ್ರೇಮಾ, ಚೇತನ್, ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್,ಕಾರುಣ್ಯಾ ರಾಮ್ ಮತ್ತು ಸಂಗೀತಕ್ಷೇತ್ರದ ಅರ್ಚನಾ ಉಡುಪಾ,ಪ್ರವೀಣ್.ಡಿ ರಾವ್,ಪೂರ್ಣಚಂದ್ರ ತೇಜಸ್ವಿ.ಕೆ.ಕಲ್ಯಾಣ್,ಅನುರಾಧಾ ಭಟ್,ಶ್ರೀಧರ್ ಸಂಭ್ರಮ್,ಹೆಸರಾಂತ ನಿರ್ದೇಶಕರುಗಳಾದ ಭಾರ್ಗವ ಮತ್ತು ಯೋಗರಾಜ್ ಭಟ್ ಭಾಗವಹಿಸಿ ಮಕ್ಕಳಿಗೆ ಶುಭಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೀಗೆ ನಡೆದುಕೊಂಡು ಈ ಸಿಂಗಿಂಗ್ ರಿಯಾಲಿಟಿ ಶೋ ಈಗ ಫೈನಲ್ ಹಂತ ತಲುಪಿದ್ದು ಗುರುಕಿರಣ್,ತನುಶ್‍ರಾಜ್,ನಿಹಾರಿಕಾ,ಸಿರಿ ಮತ್ತು ವಿಕ್ಸ್‍ನ್ ಪಿನಾಲೆ ಲಿಸ್ಟ್‍ನಲ್ಲಿದ್ದಾರೆ. ಈ ಫಿನಾಲೆಯ ನಿಯಮದ ಪ್ರಕಾರ ಶಾಸ್ತ್ರೀಯ ಸಂಗೀತ, ಹೆಸರಾಂತ ನಿರ್ದೇಶಕ ಪುಟ್ಟಣ್ಣಾ ಕಣಗಾಲ್ ಮತ್ತು ಡಾ.ರಾಜಕುಮಾರ್ ಹಿಟ್ಸ್ ಎಂದು 3 ಸುತ್ತಗಳಿದ್ದು ಪ್ರತಿಯೊಂದು ಸುತ್ತಿನಲ್ಲಿ ಒಬ್ಬಬ್ಬರು ಎಲಿಮಿನೆಟ್ ಅಗುತ್ತಾರೆ.ಆದರೆ ಇಲ್ಲಿ ರವಿಚಂದ್ರನ್ ಮತ್ತೊಂದು ಸುತ್ತಾಗಿ ಜುಗಲ್‍ಬಂದಿಯನ್ನು ಆಯ್ಕೆ ಮಾಡುತ್ತಾರೆ ಅದು ಯಾಕೆ ? ಎಂಬುದನ್ನು ಕಾದು ನೋಡಬೆಕಾಗಿದೆ.ಹಾಗಾದರೆ ಈ ಐವರಲ್ಲಿ ಯಾರಿಗೆ ದೊರೆಯುತ್ತದೆ ಉದಯ ಸಿಂಗರ್?


ಈ ಗ್ರ್ಯಾಂಡ್ ಫಿನಾಲೆಯಲ್ಲಿ ವಿಕ್ಟರಿ ಸ್ಟಾರ್ ಶರಣ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.ರ್ಯಾಂಬೋ ಚಿತ್ರದ ‘ಕಣ್ಣಾ ಮುಚ್ಚೆ ಕಾಡೆ ಗುಡೆ” ಹಾಡಿ ಎಲ್ಲರನ್ನು ರಂಜಿಸಿದ್ದಾರೆ.

ಉದಯ ಸಿಂಗರ್ ಜೂನೀಯರ್ಸ್ ಗ್ರ್ಯಾಂಡ್ ಫಿನಾಲೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com