“ಉದಯ ಸಂಕ್ರಾಂತಿ ಉತ್ಸವ” – ಜನವರಿ 15 (ಮಂಗಳವಾರ) ಮಧ್ಯಾಹ್ನ 1ಗಂಟೆಗೆ

Published on

341 Views

ಉದಯ ಟಿವಿ ಎರಡು ದಶಕಗಳಿಂದ ಕನ್ನಡಿಗರ ನಾಡಿಗಳಲ್ಲಿ ಬೆರೆತಿರುವ ಮನರಂಜನಾ ವಾಹಿನಿ… ಇಲ್ಲಿ ಬಿತ್ತರವಾಗುವ ಧಾರಾವಾಹಿಗಳು ರಿಯಾಲಿಟಿ ಶೋಗಳು ಜನಜನಿತ… ಜನರಿಗೆ ಹತ್ತಿರವಾಗಲು ಧಾರಾವಾಹಿಯ ನಟ ನಟಿಯರು ಕರ್ನಾಟಕದಾದ್ಯಂತ ವೀಕ್ಷಕರನ್ನು ಭೇಟಿ ಮಾಡುವುದು ಅವರೊಂದಿಗೆ ಸಂವಾದ ಮಾಡುವುದು ಸರ್ವೆ ಸಾಮಾನ್ಯ…

ಉದಯ ಟಿವಿಯಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಧಾರಾವಾಹಿಗಳ ಕಲಾವಿದರ ಜೊತೆ ಕನ್ನಡದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ಅನುರಾಧ ಭಟ್ ತಮ್ಮ ಹಾಡುಗಳ ಮೂಲಕ ಚಿತ್ರದುರ್ಗದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ಒಟ್ಟಾರೆ ವೀಕ್ಷಕರಿಗೆ ಉದಯ ಸಂಕ್ರಾಂತಿ ಉತ್ಸವ ಮನರಂಜನೆಯ ಮಹಾಪೂರವನ್ನೇ ಹರಿಸಲಿದೆ .ಉದಯ ಟಿವಿಯಲ್ಲಿ ಇದೇ ಮಂಗಳವಾರ ಸಂಕ್ರಾಂತಿಯಂದು ಮದ್ಯಾಹ್ನ 1 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.


ಅಂದು ಸಂಜೆ 4ಗಂಟೆಗೆ ಸಿರೀಯಲ್ ನಟನಟಿಯರ ಜೊತೆ ನಡೆದ ವಿಶೇಷ ಕಾರ್ಯಕ್ರಮ “ಉದಯ ಸಿರೀಯಲ್ ಸಂಕ್ರಾಂತಿ” ಪ್ರಸಾರವಾಗಲಿದೆ.

ಇದರ ಜೊತೆ ಕಾಮಿಡಿ ಕಿಂಗ್ ಶರಣ್ ಅಭಿನಯದ ಬ್ಲಾಕ್‍ಬಸ್ಟರ್ ಪ್ರೀಮಿಯರ್ ಮೂವಿ ವಿಕ್ಟರಿ 2 ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ.
ಹಾಗೆ ಸಂಕ್ರಾಂತಿ ಹಬ್ಬದ ವಿಶೇಷವಾಗಿ ನಂದಿನಿ ಧಾರಾವಾಹಿಯ ಮಹಾಸಂಚಿಕೆ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.
ಈ ಸಂಕ್ರಾಂತಿ ಹಬ್ಬಕ್ಕೆ ಉದಯ ಟಿವಿ ನಾನ್ ಸ್ಟಾಪ್ ಮನರಂಜನೆಯನ್ನು ಕರುನಾಡ ಜನೆತೆಗೆ ನೀಡಲಿದೆ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com