ನವ ವಸಂತದ ಹೆಜ್ಜೆಯಲ್ಲಿ “ಉದಯ ಕಾಮಿಡಿ” ಚಿತ್ರರಂಗದಿಂದ ಹಾರೈಕೆಯ ಮಹಾಪೂರ

Published on

365 Views

udaya comedy ನವ ವಸಂತದ ಹೆಜ್ಜೆಯಲ್ಲಿ “ಉದಯ ಕಾಮಿಡಿ ”
ಚಿತ್ರರಂಗದಿಂದ ಹಾರೈಕೆಯ ಮಹಾಪೂರ

ವೀಕ್ಷಕರಲ್ಲಿದ್ದ ಟೆನ್ಶನ್ನನ್ನು ಕಡಿಮೆ ಮಾಡಲು ನಾನ್ ಸ್ಟಾಪ್ ನಗುವನ್ನು ನೀಡಲು 2009 ರಲ್ಲಿ ಬಂದ ಕರುನಾಡಿನ ಏಕೈಕ ಕಾಮಿಡಿ ಚಾನಲ್ “ಉದಯ ಕಾಮಿಡಿ”. ವಿಭಿನ್ನ ರೀತಿಯ ನಗುವಿನ ಕಾರ್ಯಕ್ರಮಗಳ ಸರಮಾಲೆಯನ್ನು ಅಲಂಕರಿಸಿಕೊಂಡು ಈಗ ಒಂಬತ್ತು ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.

ರಾಜ್ಯದ ಏಕೈಕ ಹಾಸ್ಯ ವಾಹಿನಿ “ಉದಯ ಕಾಮಿಡಿ” ರಾಜ್ಯಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ತನ್ನ ಕಾಮಿಡಿ ಕಮಾಲ್ ಮೂಲಕವೇ ಅತೀ ಹೆಚ್ಚು ಪ್ರೇಕ್ಷಕರನ್ನು ತಲುಪಿದ ಹಿರಿಮೆ ವಾಹಿನಿಯದು. ನಗರ ಪ್ರದೇಶದಲ್ಲಾಗಲಿ ಗ್ರಾಮಾಂತರ ಪ್ರದೇಶದಲ್ಲಾಗಲಿ ಉದಯ ಕಾಮಿಡಿಗೆ ತನ್ನದೇಯಾದ ಪ್ರೇಕ್ಷಕರಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಉದಯ ಕಾಮಿಡಿಗೆ ಅತಿ ಹೆಚ್ಚು ಪ್ರೇಕ್ಷಕರಿದ್ದು, ಪ್ರೇಕ್ಷಕರ ಪಟ್ಟಿಯಲ್ಲಿ ಉದಯ ಕಾಮಿಡಿ ಉನ್ನತ ಸ್ಥಾನದಲ್ಲಿದೆ.
ಕಳೆದ ಒಂಭತ್ತು ವರ್ಷದಿಂದ ವಿವಿಧ ಹಾಸ್ಯ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಜನತೆಯನ್ನು ನಗಿಸುತ್ತಾ ಸಂತೋಷವಾಗಿಡುತ್ತಿರುವ “ಉದಯ ಕಾಮಿಡಿ” ‘ದಕ್ಷಿಣ ಭಾರತದ ನಂಬರ್ ಒನ್ ಕಾಮಿಡಿ ಚಾನಲ್’ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಅಂಕಿ ಸಂಖ್ಯೆಯ ಅನುಗುಣವಾಗಿಯೂ 2015ರಲ್ಲಿ 55 ಜಿ.ಆರ್.ಪಿ ಇಂದ 2018ರ ಹೊತ್ತಿಗೆ 120 ಜಿ.ಆರ್.ಪಿಯನ್ನು ಪಡೆದಿರುವುದನ್ನು ನೋಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚು ವೀಕ್ಷರಿಗೆ ಹತ್ತಿರವಾಗಿಸಿಕೊಂಡಿದೆ.ಇದಕ್ಕೆ ಕಾರಣ ಇದರಲ್ಲಿ ಬಿತ್ತಾರವಾಗುತ್ತಿರುವ ವಿಭಿನ್ನ ಕಾರ್ಯಕ್ರಮಗಳು.

ಬ್ರೇಕ್ ಇಲ್ಲ್ಲದೆ 30ನಿಮಿಷದ “ನಾನ್ ಸ್ಟಾಪ್ ನಗು” ಶೋ ಬಹು ಯಶಸ್ವಿಯ ಕಾರ್ಯಕ್ರಮವಾಗಿದೆ. “ಟಾಪ್ 10 @ 9”, “ಬ್ಲಾಕ್ ಬಸ್ಟರ್ ಮಿಡ್ ಡೇ ಟಾಕೀಸ್”, “ ನಗಲೇಬೇಕು”, ಸಿಕ್ಕಾಪಟ್ಟೆ ನಕ್ಕುಬಿಡಿ”, “ ಕಿರಿಕ್ ಗ್ಯಾಂಗ್”, “ಸೂಪರ್ ಸುಬ್ಬಲಕ್ಷ್ಮೀ”, “ಸೆಲ್ಫಿ ಸೀನ್” ನಂತಹ ಹಾಸ್ಯ ಕಾರ್ಯಕ್ರಮಗಳು ಈಗ “ಉದಯ ಕಾಮಿಡಿ”ಯಲ್ಲಿ ಪ್ರಸಾರವಾಗುತ್ತಿವೆ.

“ಉದಯ ಕಾಮಿಡಿ”À ಯಶಸ್ವಿ ಕಾರ್ಯಕ್ರಮಗಳಲ್ಲಿ “ಹಳ್ಳಿಹಬ್ಬ” ಸಹ ಒಂದು. ಹಳ್ಳಿಯ ಸೊಗಡು ಹಾಗೂ ಅಲ್ಲಿನ ಸಂಸ್ಕøತಿಯನ್ನು ಬಿಂಬಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಗ್ರಾಮೀಣ ಸೊಗಡನ್ನು ಬಿಂಬಿಸುವುದರ ಜೊತೆಗೆ ಅಲ್ಲಿನ ಜನರನ್ನು ಮೋಜು ಮಸ್ತಿನಲ್ಲಿ ತೊಡಗಿಸಿ ನಕ್ಕುನಲಿಸುವಲ್ಲೂ ಯಶಸ್ವಿಯಾಗಿದೆ. ಅಲ್ಲದೆ ಪ್ರತಿ ಭಾನುವಾರ ಬೆಳಗ್ಗೆ 8 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮವು ಜನಪ್ರಿಯ ಕಾರ್ಯಕ್ರಮವಾಗಿ ರಾಜ್ಯದ ಜನರ ಜನಮಾನಸದಲ್ಲೂ ಸ್ಥಾನಪಡೆದಿದೆ.

“ಹಳ್ಳಿಹಬ್ಬ” ಕಾರ್ಯಕ್ರಮ ಈವರೆಗೆ ಹಾಸನ, ತುಮಕೂರು, ಬೆಳಗಾವಿ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ರಾಮನಗರ, ಚಿಕ್ಕಮಗಳೂರು ಜಿಲ್ಲೆಗಳ ಹಳ್ಳಿಗಳಲ್ಲಿ ನಡೆಸಿ ಯಶಸ್ವಿಯಾಗಿದೆ. ಈ ಹಳ್ಳಿ ಸೊಗಡಿನ ಕಾರ್ಯಕ್ರಮಕ್ಕೆ “ಉದಯ ಟಿವಿ” ಕಣ್ಮಣಿ, ಬ್ರಹ್ಮಾಸ್ತ್ರ, ಧಾರಾವಾಹಿ ತಂಡದವರೂ ಸಹ ಭಾಗವಹಿಸಿ ಜನರನ್ನು ರಂಜಿಸಿದ್ದಾರೆ.

ಉದಯ ಕಾಮಿಡಿ ಒಂಬತ್ತು ವರ್ಷವನ್ನು ಮುಗಿಸಿ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಚಿತ್ರ ಪ್ರೇಕ್ಷಕರು ಕಾಮಿಡಿಯನ್ನು ಎಷ್ಟು ಇಷ್ಟ ಪಡುತ್ತಾರೆ ಇದರಿಂದ ತಿಳಿಯುತ್ತದೆ ಎಂದು ಕರ್ನಾಟಕದ ಕುಳ್ಳ ಎಂತಲೇ ಪ್ರಸಿದ್ಧಿಯಾದ ನಟ, ನಿರ್ದೇಶಕ ದ್ವಾರಕೀಶ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಇರೋ ಒಂದೇ ಕಾಮಿಡಿ ಚಾನೆಲ್ ಅದು ಉದಯ ಕಾಮಿಡಿ, ನಾನು ಅದರ ಅಭಿಮಾನಿ ಎಂದು ನವರಸ ನಾಯಕ ಜಗ್ಗೇಶ್ ತಮ್ಮ ಅಭಿüಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹಾಸ್ಯ ನಟ, ಸಂಗೀತ ನಿರ್ದೇಶಕ ಕೋಕಿಲ ಸಾಧು ಮಾತನಾಡಿ ನಾನು ಯಾವದೇ ಊರಿಗೆ ಹೋಗ್ಲಿ, ಪ್ರತಿಯೊಬ್ಬ ಅಭಿಮಾನಿ ಹೇಳೋದು ಒಂದೇ ಮಾತು, ನಾವು ಮಲಗುವ ಮುಂಚೆ ಉದಯ ಕಾಮಿಡಿಯಲ್ಲಿ ನಿಮ್ಮ ಕಾಮಿಡಿ ನೋಡೇ ಮಲಗೋದು ಎಂದಿದ್ದಾರೆ.

ಕೆಲಸಕ್ಕೆ ಹೋಗಿ ಬೇಜಾರಾಗಿ ಬಂದಾಗ, ಯಾವುದೇ ಖರ್ಚಿಲ್ಲದೆ ಮನೋರಂಜನೆ ಕೊಡೋದು ಉದಯ ಕಾಮಿಡಿ ಒಂದೇ ಎಂದು ಹೇಳಿದ್ದು ರಾಕ್‍ಲೈನ್ ವೆಂಕಟೇಶ್.
ಚಿಂತೆ ಮರೆಯೋಕೆ ಒಂದೇ ಒಂದು ಸಾಧನೆ ಅದು ಉದಯ ಕಾಮಿಡಿ ಇದು ದೊಡ್ಡಣ್ಣ ಅವರ ಅನಿಸಿಕೆ. ಆರೋಗ್ಯಕರವಾದ ಕಾರ್ಯಕ್ರಮ ನೀಡುತ್ತಿರೋ ಉದಯ ಕಾಮಿಡಿಗೆ ಕರ್ನಾಟಕದ ಎಲ್ಲಾ ಜನತೆಯ ಪರವಾಗಿ ನನ್ನ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ಅಭಿüಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹಾಗೆ ಹಿರಿಯನಟಿ ಲಕ್ಷ್ಮೀದೇವಿ, ಉಮೇಶ್, ಡಿಂಗ್ರಿ ನಾಗರಾಜ, ಟೆನ್ನಿಸ್ ಕೃಷ್ಣ, ರೇಖಾದಾಸ್,ಚಿಕ್ಕಣ್ಣ, ಬಿರಾದರ್, ಬ್ಯಾಂಕ್ ಜನಾರ್ದನ್,ಸೃಜನ್ ಲೋಕೇಶ್, ಮಂಡ್ಯ ರಮೇಶ್,ಕುರಿ ಪ್ರತಾಪ್ “ಉದಯ ಕಾಮಿಡಿ”ಗೆ ಶುಭ ಹಾರೈಸಿದ್ದಾರೆ.
ಇನ್ನು ಈ ವಾಹಿನಿಯಲ್ಲಿ ನಿರೂಪಕರಾಗಿದ್ದವರು ಈಗ ಚಲನಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರುಗಳ ಸಾಲಿನಲ್ಲಿ ಹಾಸ್ಯ ನಟ ಚಿಕ್ಕಣ್ಣ, ಕುರಿ ಪ್ರತಾಪ್ ಮುಂಚುಣಿಯಲ್ಲಿದ್ದವರು.ಇನ್ನು ಕೆಂಪೇಗೌಡ 70 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹರೀಷ್ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದು “ಉದಯ ಕಾಮಿಡಿ”ಯ ಹೆಮ್ಮೆ ಎಂದು ಹೇಳಬಹುದು.

ಈ 9 ವರ್ಷ ಯಶಸ್ವಿಯನ್ನು ಕಾಣಲು ಕಾರಣರಾದ ಎಲ್ಲ ತಂಡದವರಿಗೆ, ನಟ ನಟಿಯರಿಗೆ, ನಿರ್ಮಾಪಕ, ನಿರ್ದೇಶಕರಿಗೆ, ಮಾದ್ಯಮದ ಮಿತ್ರರಿಗೆ, ಸಹೋದ್ಯೋಗಿಗಳಿಗೆ “ಉದಯ ಕಾಮಿಡಿ” ತಂಡ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಜನ ಎಷ್ಟೇ ಟೆನ್ಷನ್ ಹಾಗೂ ಗಡಿಬಿಡಿಯಲ್ಲಿ ಮನೆಗೆ ಬಂದಿದ್ದರೂ ಅವರಿಗೆ ನಿರಾಸೆ ಮೂಡಿಸದೆ ಮನಸ್ಸಿಗೆ ಮಂದಹಾಸ ಮೂಡಿಸುವುದು “ಉದಯ ಕಾಮಿಡಿ”ಯ ಉದ್ದೇಶ. ಸತತವಾಗಿ ಜನರನ್ನು ರಂಜಿಸುವಲ್ಲಿ ಯಶಸ್ವಿಯಾದ “ಉದಯ ಕಾಮಿಡಿ” ಈಗ 9ನೇ ವರ್ಷದ ಕಡೆಗೆ ಹೆಜ್ಜೆ ಹಾಕಿದ್ದು ಬಹಳ ಸಂತೋಷವಾಗಿದೆ. ಈಗ ಹೊಸ ಹುರುಪಿನೊಂದಿಗೆ ಮತ್ತಷ್ಟು ಹೊಸ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರನ್ನು ರಂಜಿಸಲು ಈಗ ಮುಂದಾಗಿದೆ. ಈ ವರ್ಷದಲ್ಲಿ ಮತ್ತಷ್ಟು ಹೊಸ ಕಾರ್ಯಕ್ರಮಗಳ ಮೂಲಕ ಜನರನ್ನು ಮತ್ತಷ್ಟು ನಗೆಗಡಲಲ್ಲಿ ತೇಲಿಸಲು ಸನ್ನದ್ಧವಾಗಿದ್ದೇವೆ ಎಂದು ವಾಹಿನಿಯ ಮೂಖ್ಯಸ್ಥರು ಹೆಳಿದ್ದಾರೆ

9ವರ್ಷ ಪೂರ್ಣಗೋಳಿಸಿದ “ಉದಯ ಕಾಮಿಡಿ” ಇನ್ನಷ್ಟು ಮನರಂಜನೆಯನ್ನು ನೀಡಿ ಕರುನಾಡ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿ ಎಂದು ಹಾರೈಸೋಣ.

More Buzz

Trailers 3 months ago

Rudra Garuda Purana Official Teaser Starring Rishi, Priyanka

Trailers 3 months ago

Pepe Kannada Movie Trailer Starring Vinay Rajkumar

BuzzKollywood Buzz 3 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 3 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 3 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 3 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 4 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 4 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 4 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 4 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 4 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

BuzzShort Films 4 months ago

Kanjoos Kubera Short Film Official Video: ಕಂಜ್ಯೂಸ್ ಕುಬೇರ ಕನ್ನಡ ಕಿರುಚಿತ್ರ ನೋಡಿ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com