ಅಮೃತ್ ಅಪಾರ್ಟ್ಮೆಂಮೆಂಟ್ಸ್’ ಗೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್…

Published on

347 Views

ಜಿ-9 ಕಮ್ಯುನಿಕೇಷನ್ ಮೀಡಿಯಾ ಆಂಡ್ ಎಂಟರ್ಟೆನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಅಮೃತ ಅಪಾರ್ಟ್ಮಮೆಂಟ್ಸ್” ಚಿತ್ರವನ್ನು ಇತ್ತೀಚಿಗೆ ಸೆನ್ಸಾರ್ ಮಂಡಳಿಯು, ಚಾಮುಂಡೇಶ್ವರಿ ಸ್ಟುಡೀಯೊದಲ್ಲಿ ವೀಕ್ಷಿಸಿ U/A ಸರ್ಟಿಫಿಕೇಟ್ ನೀಡಿದ್ದಾರೆ. ಇಡೀ ಚಿತ್ರ ತಾಜಾತನದಿಂದ ಕೂಡಿದ್ದು, ತುಂಬಾ ಮನರಂಜನೆಕಾರಿಯಾಗಿತ್ತು ಎಂದು ಮಂಡಳಿಯ ಸದಸ್ಯರು ಉಲ್ಲೇಖಿಸಿದರು.

“ಅಮೃತ್ ಅಪಾರ್ಟ್ಮಮೆಂಟ್ಸ್” ಚಿತ್ರ ಕುತೂಹಲಕಾರಿ ಕಥೆ ಹೊಂದಿದ್ದು, ಕುಟುಂಬ ಸಮೇತ ಯಾವುದೇ ಮುಜುಗರವಿಲ್ಲದೇ ನೋಡಬಹುದಾಗಿದೆ.
ಚಿತ್ರಮಂದಿರದಲ್ಲಿಯೇ ಸಿನೆಮಾ ನೋಡುವ ಸರಿಯಾದ ವಾತಾವರಣ ಪ್ರೇಕ್ಷಕನಿಗೆ ಸಿಕ್ಕಾಗ, ಚಿತ್ರವನ್ನು ತೆರೆಗೆ ತರಲು ನಿರ್ಮಾಪಕರು ಯೋಚಿಸುತ್ತಿದ್ದಾರಂತೆ.

ಗುರುರಾಜ ಕುಲಕರ್ಣಿ (ನಾಡಗೌಡ) ರಚಿಸಿ ನಿರ್ಮಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ತಾರಕ ಪೊನ್ನಪ್ಪ, ಊರ್ವಶಿ ಗೋವರ್ಧನ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಬಾಲಾಜಿ ಮನೋಹರ ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದ ಪ್ರಮುಖ ಪಾತ್ರ ವರ್ಗದಲ್ಲಿ ಸಂಪತ್ ಕುಮಾರ, ಮಾನಸಾ ಜೋಷಿ, ಸೀತಾ ಕೋಟೆ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ರಂಗಭೂಮಿ ಕಲಾವಿದರಾದ, ಸಿತಾರಾ, ಮಾಲತೇಶ, ರಾಜ ನೀನಾಸಂ, ಜಗದೀಶ ಜಾಲಾ, ರಂಗಸ್ವಾಮಿ, ಶಂಕರ ಶೆಟ್ಟಿ, ವೈಷ್ಣವಿ ಮೊದಲಾದ ಕಲಾವಿದರು ನಟಿಸಿದ್ದಾರೆ.

ಈ ಚಿತ್ರಕ್ಕೆ ಬಿ, ಎಸ್, ಕೆಂಪರಾಜ್ ರವರ ಸಂಕಲನವಿದ್ದು, ಅರ್ಜುನ್ ಅಜಿತ್ ಕ್ಯಾಮರ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಎಸ್. ಡಿ ಅರವಿಂದ್ ಮೂರು ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಎ.ಎಮ್ ಶಾ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸೌಂಡ್ ಡಿಸೈನರ್ ರಾಜನ್ ವಿಶೇಷ ಎಫೆಕ್ಟ್ಸ್ ಗಳನ್ನು ಈ ಚಿತ್ರಕ್ಕಾಗಿಯೇ ಬಳಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com