ತುಳು ಚಿತ್ರ ‘ಉಮಿಲ್’ ತೆರೆಗೆ ಸಿದ್ಧ…
ಪ್ರಪ್ರಥಮ ಬಾರಿಗೆ ತುಳುವಿನಲ್ಲಿ ವಿಭಿನ್ನವಾಗಿ ಮೂಡಿ ಬರಲಿರುವ ‘ಉಮಿಲ್’ ಚಿತ್ರ.
‘ಉಮಿಲ್’ ಚಿತ್ರದ ಹೆಸರೆ ವಿಚಿತ್ರವಾಗಿದೆ. ವಿಭಿನ್ನ ರೀತಿಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಕೊಂಡು ತಯಾರಾಗಿರುವ ತುಳು ಚಿತ್ರ ‘ಉಮಿಲ್’. ತುಳುವಿನಲ್ಲಿ 101 ನೆಯ ಚಿತ್ರ ’ಉಮಿಲ್’ ಡಿ.7ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಚಿತ್ರವನ್ನು ರಂಜಿತ್ ಸುವರ್ಣ ನಿರ್ದೇಶನ ಮಾಡಿದ್ದಾರೆ. ಅನೇಕ ಕನ್ನಡ ಚಿತ್ರಗಳನ್ನು ಸಂಕಲನ ಮಾಡಿದ ಹರೀಶ್ ಕೊಟ್ಪಾಡಿ ಈ ಚಿತ್ರಕ್ಕೆ ವಿಶೇಷವಾಗಿ ಗ್ರಾಫಿಕ್ಸ್ ಬಳಸಿ ಮೊದಲ ಬಾರಿಗೆ ತುಳುವಿನಲ್ಲಿ ಹೆಚ್ಚು ಬಜೆಟ್‌ನಲ್ಲಿ ಚಿತ್ರವನ್ನು ತಯಾರಿಸಿದ್ದಾರೆ. ಪುನೀತ್ ರಾಜ್ ಕುಮಾರ್ ತುಳುವಿನಲ್ಲಿ ಮೊದಲ ಬಾರಿಗೆ ಈ ಚಿತ್ರಕ್ಕೆ ಹಾಡಿದ್ದಾರೆ. ಹಿಂದಿಗೆ ಡಬ್ ಆದ ಮೊದಲ ತುಳು ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈಗಾಗಲೇ ಚಂದನವನದಲ್ಲಿ ಹವಾ ಸೃಷ್ಟಿಸಿರುವ ರವಿ ಬಸ್ರೂರುರವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕರುಣಾಕರ್ ಶೆಟ್ಟಿ ,ಪ್ರಜ್ವಲ್ ಶೆಟ್ಟಿ ,ಪ್ರಜ್ನೇಶ್ ಶೆಟ್ಟಿ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ರಂಜಿತ್ ಸುವರ್ಣ ಈ ಚಿತ್ರಕ್ಕೆ ತುಂಬಾ ಶ್ರಮ ಪಟ್ಟಿದ್ದಾರೆ. ‘ಚಿತ್ರ ನಿರ್ಮಾಪಕರ ಸಹಕಾರ ಮತ್ತು ಚಿತ್ರ ತಂಡದ ಪರಿಶ್ರಮ ‘ಉಮಿಲ್’ ಚಿತ್ರವನ್ನು ವಿಭಿನ್ನ ರೀತಿಯಲ್ಲಿ ತಯಾರಿಸಲಾಯಿತು’ ಎಂದು ಚಿತ್ರದ ನಿರ್ದೇಶಕರ ರಂಜಿತ್ ಸುವರ್ಣ ಹೇಳುತ್ತಾರೆ.
ಚಿತ್ರದ ನಾಯಕರಾಗಿ ಉಮೇಶ್ ಮಿಜಾರ್, ನಾಯಕಿಯಾಗಿ ಪೂಜಾ ಶೆಟ್ಟಿ , ನವ್ಯ ಪೂಜಾರಿ, ಹಾಸ್ಯ ಪಾತ್ರದಲ್ಲಿ ಅರವಿಂದ್ ಬೊಳಾರ್, ನವೀನ್ ಪಡೀಲ್,ಬೋಜರಾಜ್ ವಾಮಂಜೂರು,ಸತೀಶ್ ಬಂದಲೆ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ತುಳುವಿನ ಹೆಚ್ಚಿನ ಹಾಸ್ಯ ನಟರು ಪಾತ್ರ ಮಾಡಿದ್ದಾರೆ. ತುಳುವಿನ ಚಿತ್ರದಲ್ಲಿ ಬಹಳ ಸದ್ದು ಮಾಡಿದ ‘ಉಮಿಲ್’ ಚಿತ್ರ ತೆರೆ ಕಾಣಲು ರೆಡಿಯಾಗಿ ನಿಂತಿದೆ. ಬಹು ವೆಚ್ಚದಲ್ಲಿ ಮೊದಲ ಬಾರಿಗೆ ತುಳುವಿನಲ್ಲಿ ಹಾಸ್ಯಮಯ ಗ್ರಾಫಿಕ್ಸ್ ಸಿನಿಮಾ ಬಿಡುಗಡೆಯಾಗಲಿದೆ. ಹಾಸ್ಯ ಚಿತ್ರವನ್ನೇ ಮೆಚ್ಚುವ ತುಳು ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚುತ್ತಾರೆ ಎಂಬ ನಂಬಿಕೆ ಈ ಚಿತ್ರ ತಂಡದವರಿಗೆ ಇದೆ..