100 ನೇ ಸಿನಿಮಾದ ಹೊಸ್ತಿಲಲ್ಲಿ ತುಳುಚಿತ್ರರಂಗ
ತುಳು ಚಿತ್ರರಂಗಕ್ಕೆ ಇದೀಗ ಪರ್ವಕಾಲ ಅನ್ನೋ ಮಾತಿದೆ… 1971 ರಲ್ಲಿ ಎನ್ನ ತಂಗಡಿ ಅನ್ನೋ ಸಿನೆಮಾದಿಂದ ಪ್ರಾರಂಭಗೊಂಡ ತುಳು ಚಿತ್ರರಂಗ ಇತ್ತೀಚಿಗೆ ಬಿಡುಗಡೆಗೊಂಡ ಪಮ್ಮಣ್ಣ ದಿ ಗ್ರೇಟ್ ವರೆಗೂ ಸುಮಾರು 95 ಸಿನಿಮಾಗಳನ್ನ ಬೆಳ್ಳಿಪರದೆಮೇಲೆ ತಂದಿದೆ. ಇಷ್ಟು ವರ್ಷದ ತುಳು ಸಿನಿಮಾದ ಪಯಣದಲ್ಲಿ ಅದೆಷ್ಟೋ ನಿರ್ದೇಶಕರು, ತಂತ್ರಜ್ಞನರು , ನಿರ್ಮಾಪಕರು ತುಳು ಸಿನಿಮಾದ ಏಳಿಗೆಗಾಗಿ ದುಡಿದಿದ್ದು ಇತ್ತೀಚಿನ ದಿನಗಳಲ್ಲಿ ಹೊಸ ನಿರ್ಮಾಪಕರು ಹೊಸ ನಿರ್ದೇಶಕರು ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತಿದ್ದರೆ. ಈ ಸಲಿಗೆ ಇದೀಗ ಮತ್ತೊಂದು ಹೊಸಬರ ತಂಡವು ಸೇರಲಿದೆ ಅನ್ನೋ ಮಾಹಿತಿ ನಮ್ಮಗೆ ಸಿಕ್ಕಿದು, ವಿದೇಶದಲ್ಲಿ ನೆಲೆಯಾಗಿರೋ ಮೂಲತಃ ಮಂಗಳೂರಿನ ವಾಮಂಜೂರಿನ ಲೆನಾರ್ಡ್ ಫೆರ್ನಾಂಡಿಸ್ ಇದೀಗ ತುಳು ಸಿನೆಮಾ ಒಂದನ್ನ ನಿರ್ಮಾಣಮಾಡಲು ಮುಂದಾಗಿದ್ದಾರೆ. ಕಿರು ವಯಸ್ಸಿನ ಇವರು ಇದಾಗಲೇ ಚಲನಚಿತ್ರ ನಿರ್ಮಾಣ ಹಾಗು ನಿರ್ದೇಶನದಲ್ಲಿ D.F.M ಹಾಗು D.F.TECH ಪದವಿ ಮಾಡಿದ್ದು ತುಳುವಿನ ಉಮಿಲ್ ಸಿನಿಮಾ ಹಾಗು ಕನ್ನಡದ ಉದಯ ಟಿವಿ ಯಲ್ಲಿ ಪ್ರಸಾರಗೊಂಡ ಶ್ರೀ ಸಾಯಿ ಕಥಾವ್ರತ ಅನ್ನೋ ಧಾರಾವಾಹಿಯಲ್ಲೂ ಅಭಿನಯಿಸಿದಲ್ಲದೆ ಬಾಲಿವುಡ್ ನ ಹೆಸರಾಂತ ತಂತ್ರಜ್ಞನರು ಹಾಗು ಕಲಾವಿದರೊಂದಿಗೆ ಕೆಲಸ ಮಾಡಿದ್ದು ಇದೀಗ ಹೊಸ ತುಳು ಸಿನೆಮಾವನ್ನು ತಮ್ಮ ಸ್ವಂತ ಬ್ಯಾನರ್ ನಡಿಯಲ್ಲಿ ನಿರ್ಮಾಣ ಮಾಡಲಿದ್ದಾರೆ ಅನ್ನೋದು ತಿಳಿದು ಬಂದಿದೆ. ಈ ಹೊಸ ಸಿನಿಮಾದ ಕಥೆ ಚಿತ್ರಕಥೆಯನ್ನು ವಿಶ್ವನಾಥ್ ಕೋಡಿಕಲ್ ಬರೆದಿದ್ದು ಇವರೇ ಈ ಸಿನೆಮಾವನ್ನು ನಿರ್ದೇಶಿಸಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿರುತ್ತದೆ. ಈ ಹೊಸ ಸಿನಿಮಾದ ಶೂಟಿಂಗ್ ಡಿಸೆಂಬರ್ ನಲ್ಲಿ ಪ್ರಾರಂಭಗೊಳ್ಳಲಿದ್ದು ಸಿನಿಮಾದ ಹೆಸರನ್ನು ಗುಪ್ತವಾಗಿ ಇಡಲಾಗಿದೆಯಂತೆ… 100 ನೇ ಸಿನಿಮಾದ ಹೊಸ್ತಿಲಲ್ಲಿ ಇರೋ ತುಳು ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳು ಚಿತರಂಗಕ್ಕೆ ಕಾಲಿಡುತ್ತಿದ್ದು ಲೆನಾರ್ಡ್ ಫೆರ್ನಾಂಡಿಸ್ ಇವರ ಮುಂದಿನ ಸಿನಿಮಾ ಹೇಗಿರಬಹುದು , ಅದರ ಕಥಾವಸ್ತು ಏನಾಗಿರಬಹುದು ಅನ್ನೋ ಕುತೂಹಲ ಇದೀಗ ಎಲ್ಲ ತುಳು ಚಿತ್ರ ಪ್ರೇಮಿಗಳ ಮನದಲ್ಲಿರೋದಂತೂ ಸತ್ಯ. ಅದೇನೇ ಆದರೂ ಈ ಹೊಸ ತಂಡಕ್ಕೆ ನಿಮ್ಮೆಲರ ಪ್ರೋತ್ಸಾಹ ಸಹಕಾರ ಸದಾ ಇರುತ್ತದೆ ಎಂಬ ನಂಬಿಕೆ ನಮ್ಮದು.