ತುಳು ಚಿತ್ರದ ಚಿತ್ರೀಕರಣದ ವೇಳೆ ನಟಿಗೆ ಹಿಗ್ಗಾಮುಗ್ಗಾ ಥಳಿಸಿದ ನಟ…!!
ಬ್ರಹ್ಮಾವರ ಸೂರಾಲು ಸಮೀಪ ಚಿತ್ರೀಕರಿಸುತ್ತಿರುವ “ಎರೆಗಾವು ಕಿರಿ ಕಿರಿ” ತುಳು ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ಅದೇ ಸಿನಿಮಾದಲ್ಲಿ ನಟಿಸುತ್ತಿರುವ ಮುಂಬೈ ಮೂಲದ ನಟಿ ಐಶ್ವರ್ಯ ಜೊತೆ ಕಿರಿ ಕಿರಿ ಮಾಡಿಕೊಂಡು ನಟ ನೈಮ್ ನಟಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ನಡೆದಿದೆ. ಮುಂಬೈ ಮೂಲದ ರೋಶನ್ ನಿರ್ಮಾಣದ ಮತ್ತು ರಾಮ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಮುಸ್ಲಿಂ ಯುವಕ ನೈಮ್ ಮೊದಲ ಬಾರಿಗೆ ಹೀರೋವಾಗಿ ನಟಿಸುತ್ತಿದ್ದಾನೆ.
ಚಿತ್ರೀಕರಣದ ಮೊದಲ ದಿನದಿಂದಲೂ ನಟ ನಟಿಯ ನಡುವೆ ಕಿರಿಕ್ ನಡೆಯುತ್ತಿದ್ದು, ಆದರೆ ನಟ ನಿನ್ನೆ ಸಂಜೆ ನಟಿಯನ್ನು ಎಳೆದಾಡಿ ಕೈ ಮುರಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ನಟಿಯನ್ನು ಬ್ರಹ್ಮಾವರ ಸಮೀಪದ ಅಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆದಿದ್ದಾರೆ. ಇದೇ ಚಿತ್ರದಲ್ಲಿ ಮಂಗಳೂರಿನ ನವೀನ್ ಪಡೀಲ್ ನಟಿಸುತ್ತಿದ್ದು, ಪಡೀಲ್ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾಯಿತಿ ನಡೆದಿದ್ದು, ಸಿನಿಮಾ ನಿರ್ಮಾಪಕರಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ.
ಆದರೆ ನಟ ಮಾತ್ರ ಮಂಗಳೂರಿನ ಗೂಂಡಾಗಳನ್ನ ತನ್ನ ಅಕ್ಕಪಕ್ಕದಲ್ಲಿರಿಸಿಕೊಂಡು ಬೆದರಿಸಿದ್ದಾನೆ ಎನ್ನಲಾಗಿದೆ. ಒಂದು ಮೂಲದ ಪ್ರಕಾರ ನಟಿಯು ನಟನಿಗೆ ಅವ್ಯಾಚ ಶಬ್ದಗಳಿಂದ ನಟನ ಮನೆಯವರಿಗೆ ಬೈದಿದ್ದಾಳೆ, ಅದಕ್ಕೆ ಕೋಪಗೊಂಡ ನಟ ಅವಳಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾನೆ ಎಂದು ತಿಳಿದುಬಂದಿದೆ. ನಟಿಯ ಬಗ್ಗೆ ಕೂಡ ಕೆಲವೊಂದು ಆರೋಪಗಳಿವೆ. ಮಾನಸಿಕವಾಗಿ ಕುಗ್ಗಿ ಹೋಗಿರುವ ನಟಿ ಭಯಗೊಂಡಿದ್ದು ,ಅಕೆಯ ಅಣ್ಣಾನಿಗೆ ಕರೆ ಮಾಡಿದ್ದಾಳೆ. ಆಕೆಯ ಅಣ್ಣಾ ಮತ್ತು ಗೆಳೆಯರು ಚಿತ್ರೀಕರಣದ ಸೆಟ್ ಗೆ ಭೇಟಿಕೊಟ್ಟು ವಿಷಯ ಕೇಳಿದಾಗ, ನಟ ಮತ್ತೆ ಗೂಂಡಾಗಿರಿ ಮಾಡಿದ್ದು ವಿಚಾರಿಸಲು ಬಂದವರ ಮುಂದೆಯೇ ಮತ್ತೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಸುಮಾರು ಗೂಂಡಾಗಳನ್ನು ಇಟ್ಟುಕೊಂಡು ಬೆದರಿಸಿದ್ದಾನೆ ಎನ್ನಲಾಗಿದೆ. ಆದರೆ ಗೂಂಡಾಯಿಸಂ ಗೆ ಬೆದರದ ಯುವಕರು ನಟನಿಗೆ ಬಾರಿಸಲು ಮುಂದಾದಾಗ ನಿರ್ಮಾಪಕರು ಕ್ಷಮೆ ಕೇಳಿದ್ದಾರೆ ಸಿನಿಮಾಕ್ಕೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದು ಸಿನಿಮಾ ಶೂಟಿಂಗ್ ಮುಗಿಯೋವರೆಗೂ ತಾಳ್ಮೆಯಿಂದರಲೂ ವಿನಂತಿಸಿದ್ದಾನೆ. ಆದರೆ ಏನೇ ಆಗಲಿ ಹೆಣ್ಣಿನ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎನ್ನುತ್ತಾರೆ ಕೆಲವರು.ಕೆಲವು ಪೋಷಕ ನಟರರು ನಾಯಕನಿಗೆ ಬೆಂಬಲಿಸಿದ್ದಕೆ ನಾಯಕಿಯ ಕಡೆಯವರು ಕೋಪಗೊಂಡಿದ್ದಾರೆ. ವಿಚಾರಿಸಲು ಬಂದವರ ಬಳಿಯೂ ಅನುಚಿತವಾಗಿ ವರ್ತಿಸಿ ನಟ ದರ್ಪ ತೋರಿಸಿದ್ದಾನೆ ಎನ್ನಲಾಗಿದೆ.
ಇದರಿಂದ ನಟಿಯ ಸಂಭಂಧಿಕರು ಸಿನಿಮಾ ಮುಗಿದ ಕೂಡಲೇ ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದಾರೆ. ”ಎರೆಗಾವು ಕಿರಿ ಕಿರಿ” ಚಿತ್ರ ಈಗ ಜನರ ಬಾಯಿಯಲ್ಲಿ “ಎರೆಗ್ ಬೋಡು ಕಿರಿ ಕಿರಿ’ ಎಂದು ಹೇಳುವಂತಾಗಿದೆ. ತುಳು ಚಿತ್ರರಂಗ ಸಣ್ಣ ಚಿತ್ರರಂಗ. ಇತ್ತೀಚಿನ ದಿನಗಳಲ್ಲಿ ತುಳು ಚಿತ್ರರಂಗ ಬೆಳೆಯುತ್ತಿದೆ. ಈ ಸಮಯದಲ್ಲಿ ಇಂತಹ ಘಟನೆಗಳು ನಡೆದರೆ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡಲು ಮುಂದೆ ಬರುವುದಿಲ್ಲ. ತುಳು ಚಿತ್ರರಂಗ ಉಳಿಯಬೇಕು, ತುಳುವಿನಲ್ಲಿ ಒಳ್ಳೆ ಒಳ್ಳೆಯ ಚಿತ್ರಗಳು ಮೂಡಿಬರಬೇಕು. ಇಂತಹವರಿಂದ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಇನ್ನು ಮುಂದೆ ಈ ರೀತಿಯಾಗದಾಗೆ ಎಚ್ಚರವಹಿಸಬೇಕು.