ರೆಬಲ್ ಸ್ಟಾರ್ ‘ತ್ರಾಟಕ’ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು
“ತ್ರಾಟಕ’ ಚಿತ್ರದ ಶೀರ್ಷಿಕೆ ಹಾಗೂ ಕಥಾ ಹಂದರದ ವಿಭಿನ್ನತೆ ಯೊಂದಿಗೆ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ “ತ್ರಾಟಕ” ಚಿತ್ರ ತಂಡದವರು ಕೂಡ ಮುಂಚೂಣಿಯಲ್ಲಿದ್ದಾರೆ.ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಬಹಳ ಅದ್ಧೂರಿಯಾಗಿ ಆಯೋಜಿಸಿದ್ದರು. ಈ ಚಿತ್ರದ ಬಗ್ಗೆ ನಿರ್ದೇಶಕ ಶಿವಗಣೇಶ್ ಮಾತನಾಡುತ್ತಾ ಯೋಗಾಸನದ ಒಂದು ಭಂಗಿಯ ಹೆಸರನ್ನು ಚಿತ್ರದ ಶೀರ್ಷಿಕೆಗೆ ಇಡಲಾಗಿದೆ. ಅದುವೇ ‘ತ್ರಾಟಕ’.
ಯೋಗದಲ್ಲಿ ಏಕಾಗ್ರತೆಯಿಂದ ಧ್ಯಾನ ಮಾಡಿದಲ್ಲಿ ಮನುಷ್ಯನ ಮನಸ್ಸು, ಬುದ್ದಿಯು ಹತೋಟಿಗೆ ಬರುತ್ತದಂತೆ. ಇದನ್ನು ಮೂರನೇ ಕಣ್ಣು ಎಂದು ಕರೆಯುವುದುಂಟು.ಸಿನಿಮಾದಲ್ಲಿ ಪೋಲೀಸ್ ಆಧಿಕಾರಿಯು ಅಪರಾಧಿಗಳನ್ನು ಹುಡುಕುವ ಸಂದರ್ಭದಲ್ಲಿ ಸಮಸ್ಯೆಗಳು ಬರುತ್ತವೆ, ಮುಂದೆ ತ್ರಾಟಕದಿಂದ ಎಲ್ಲವನ್ನು ಪರಿಹರಿಸಿಕೊಂಡು, ಚಮತ್ಕಾರದಿಂದ ಅಪರಾಧಿಗಳನ್ನು ಹೇಗೆ ಬಂದಿಸುತ್ತಾರೆ ಎಂಬುದನ್ನು ಮರ್ಡರ್ ಮಿಸ್ಟರಿ, ಥ್ರಿಲ್ಲರ್ ರೂಪದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಎಂದರು. ಜಯಂತ್‍ಕಾಯ್ಕಣಿ, ಡಾ.ನಾಗೇಂದ್ರಪ್ರಸಾದ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಅರಣ್ ಸುರಧಾ ಸಂಗೀತವನ್ನು ಒದಗಿಸಿದ್ದಾರೆ.
ರಾಹುಲ್ ಐನಾಪುರ ಚೂಚ್ಚಲಬಾರಿಗೆ ನಾಯಕನಾಗಿ ಅಭಿನಯಿಸುವುದರ ಜೊತೆಗೆ ನಿರ್ಮಾಪಕರಾಗಿದ್ದಾರೆ.
ಅಜಿತ್ ಜಯರಾಜ್ ಎರಡನೇ ನಾಯಕನಾಗಿ ಅಭಿನಯಿಸುತ್ತಿದ್ದು , ನಾಯಕಿಯಾಗಿ ಒರಟ ಐ ಲವ್ ಯು ಚಿತ್ರದಲ್ಲಿ ನಟಿಸಿದ್ದ ಹೃದಯ ಹಲವು ವರ್ಷಗಳ ನಂತರ ನಾಯಕಿಯಾಗಿ ನಟಿಸಿದರೆ. ಪೋಲೀಸ್ ಪಾತ್ರ ಮಾಡಿರುವ ದಿಶಾಪೂವಯ್ಯ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.ಸಿಡಿ ಬಿಡುಗಡೆ ಮಾಡಿದ ಅಂಬರೀಷ್ ಮಾತನಾಡಿ ಹೊಸ ಕಲಾವಿದರು, ಪ್ರತಿಭೆಗಳು, ನಿರ್ದೇಶಕರು, ತಂತ್ರಜ್ಞರು ಕನ್ನಡ ಚಿತ್ರರಂಗಕ್ಕೆ ನೂತನ ಚಿತ್ರಗಳನ್ನು ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಕಲಾವಿದರ ಸಂಘದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸ ತಂದಿದೆ. ನಿರ್ಮಾಪಕರ ತಂದೆ ರಾಜಕೀಯದಲ್ಲಿ ಸಹದ್ಯೋಗಿಗಳಾಗಿದ್ದಾರೆ. ನಮ್ಮ ಕಾಲ ಮುಗೀತು. ಇನ್ನೇನಿದ್ದರೂ ಹೊಸಬರ ಹವಾ ಶುರುವಾಗಲಿ ಎಂದು ತಂಡಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕೆ.ಮಂಜು, ಸಿನಿ ಗಣ್ಯರು ಸೇರಿದಂತೆ ಬಿಜಾಪುರದ ನೂತನ ಶಾಸಕ, ವಿಧಾನ ಪರಿಷತ್ ಸದಸ್ಯರು ಉಪಸ್ತಿತರಿದ್ದರು.ಈ ಒಂದು ಸಮಾರಂಭ ಬಹಳ ಅದ್ದೂರಿಯಾಗಿ ನೆರವೇರಿದು , ಚಿತ್ರವು ಅತಿ ಶೀಘ್ರದಲ್ಲಿ ತೆರೆ ಮೇಲೆ ಬರಲಿದೆಯಂತೆ.