ದಾಖಲೆಯತ್ತ ಸುಶಾಂತ್ ಸಿಂಗ್ ನಟನೆಯ ಕೊನೆಯ‌ ಚಿತ್ರದ ಟ್ರೈಲರ್!!!

Published on

361 Views

ಬಾಲಿವುಡ್‌ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ನಟನೆಯ ಕೊನೆಯ ಸಿನಿಮಾ ‘ದಿಲ್ ಬೇಚಾರ’ ದ ಟ್ರೈಲರ್ ಬಿಡುಗಡೆಯಾಗಿದ್ದು, ಇದೀಗ ಯೂಟ್ಯೂಬ್ ಇಂಡಿಯಾದಲ್ಲಿ ನಂ.1 ಟ್ರೆಂಡಿಗ್ ನಲ್ಲಿ ಸಾಗುತ್ತಿದ್ದು ವಿಶ್ವದಾಖಲೆಯತ್ತ ಸಾಗುತ್ತಿದೆ. ನಿನ್ನೆಯಷ್ಟೇ ರಿಲೀಸ್ ಆದ ‘ದಿಲ್ ಬೇಚಾರ’ ದ ಟ್ರೈಲರ್ 24 ಗಂಟೆಗಳಲ್ಲಿ ಬರೋಬ್ಬರಿ 1,695,300 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇದುವರೆಗೂ 4 ಕೋಟಿಗಿಂತಲೂ ಹೆಚ್ಚು ಜನರು ವೀಕ್ಷಿಸಿ ಭಾವುಕರಾಗಿದ್ದಾರೆ. ಈ ಮೂಲಕ ‘ದಿಲ್ ಬೇಚಾರ’ ಹಾಲಿವುಡ್‌ನ ಆ್ಯವೆಂಜರ್ಸ್- ಇನ್ಫಿನಿಟಿವಾರ್ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ಆ್ಯವೆಂಜರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾದ 24ಗಂಟೆಗಳಲ್ಲಿ 3.8 ಮಿಲಿಯನ್ ಲೈಕ್ಸ್ ಬಂದಿತ್ತು. ಈ ದಾಖಲೆಯನ್ನು ‘ದಿಲ್ ಬೇಚಾರ’ ಹಿಂದಿಕ್ಕಿದೆ.

ಲೇಖಕ ಜಾನ್ ಗ್ರೀನ್ ಅವರು ಬರೆದಿರುವ ‘ದಿಫಾಲ್ಟಿ ಇನ್ ಅವರ ಸ್ಚಾರ್ಸ್’ ಕಾದಂಬರಿ ಆಧಾರಿತ ಕಥಾಹಂದರವನ್ನು ‘ದಿಲ್ ಬೇಚಾರ’ ಹೊಂದಿದೆ. ಕಿಜಿ‌ ಎಂಬ ಕ್ಯಾನ್ಸರ್ ‌ಪೀಡಿತ ವಿದ್ಯಾರ್ಥಿನಿ ಮತ್ತು ಮ್ಯಾನ್ನಿ ಎಂಬ ವಿದ್ಯಾರ್ಥಿಯ ನಡುವಿನ ಪ್ರೇಮಕಥೆಯನ್ನು ಚಿತ್ರದಲ್ಲಿ ಸುಂದರವಾಗಿ ತೋರಿಸಲಾಗಿದೆ. ನಿರ್ದೇಶಕ ಮುಖೇಶ್ ಛಾಬ್ರಾ ಅವರು ಚಿತ್ರವನ್ನು ನಿರ್ದೇಶಿಸಿದ್ದು, ನಟ ಸುಶಾಂತ್ ಸಿಂಗ್ ಈ ಚಿತ್ರಕ್ಕಾಗಿ ಚಿತ್ರದ ಕಥೆಯನ್ನೇ ಕೇಳದೆ ಒಪ್ಪಿಕೊಂಡರಂತೆ. ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ರವರ ಕೊನೆ ಸಿನಿಮಾ ‘ದಿಲ್ ಬೇಚಾರ’ ಇದೇ ಜುಲೈ 24ರಂದು ಡಿಸಿ ಹೋಸ್ಟಾರ್ ಲ್ಲಿ ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com