ಟಾಮ್ ಅಂಡ್ ಜೆರ್ರಿ ನಿರ್ಮಾಪಕ ರಾಜು ಶೆರಿಗಾರ್ ಕನ್ನಡ ಪ್ರೇಮ

Published on

431 Views

ಸಿನಿಮಾ ಅನ್ನೋದು‌ ಕೆಲವರಿಗೆ ಬದುಕು. ಮತ್ತೆ ಕೆಲವರಿಗೆ ಅದು‌‌ ಪ್ಯಾಷನ್. ಇದೇ ಸಿನಿಮಾ ಪ್ಯಾಷನ್ ಇರೋ ಹೊಸ ನಿರ್ಮಾಪಕರೊಬ್ಬರು ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಕಾಲಿಟ್ಟಿದ್ದಾರೆ ಅವರೇ ರಾಜು ಶೆರೆಗಾರ್. ಕನ್ನಡದವರಾದ ಇವರು ಗುಜರಾತ್ ನಲ್ಲಿಂದು ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಕನ್ನಡದ ಮೇಲೆ ಅಪಾರ ಪ್ರೇಮ, ಕನ್ನಡ ಸಿನಿಮಾ ಅಂದ್ರೆ ಅಚ್ಚುಮೆಚ್ಚು. ಅಲ್ಲದೆ ತಾವು ಒಂದು ಸಿನೆಮಾ ನಿರ್ಮಾಣ ಮಾಡುಬೇಕೆನ್ನುವ ಉದ್ದೇಶದಿಂದ ರಿದ್ಧಿ ಸಿದ್ಧಿ ಫಿಲಂಸ್ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿ, ಉತ್ತಮ ಸಿನಿಮಾ ಮಾಡಬೆಕೆನ್ನುವ ಕನಸು ಕಂಡಿದ್ದಾರೆ. ಅಲ್ಲದೆ ಸಾಕಷ್ಟು ಕಥೆ ಕೆಳಿ ಆಕರ್ಷಿತರಾಗಿದ್ದು, ಟಾಮ್ ಅಂಡ್ ಜೆರ್ರಿ ಸಿನಿಮಾ‌ ಕಥೆ ಇಷ್ಟಪಟ್ಟು ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಲ್ಲಿ ಟಾಮ್ ಆಂಡ್ ಜೆರ್ರಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ . ಸದ್ಯ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೊಸ್ಟ್ ಪ್ರೊಡಕ್ಷನ್ಸ್ ಹಂತದ್ದಲ್ಲಿದೆ.

ಅಂದಹಾಗೇ ರಾಜು ಶೆರೆಗಾರ್ ಅವರು ಮೂಲತಃ ಗಂಗ್ಗೊಳ್ಳಿಯವರು. ಹೊಸನಗರದಲ್ಲಿ ಹುಟ್ಟಿ, ಬೆಳೆಯುತ್ತಾ ಗುಜರಾತ್ ನಲ್ಲಿ ಸೆಟಲ್ಡ್ ಆದ್ರು. ಟ್ರಾನ್ಸ್ ಗ್ರೂಪ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರಾಗಿದ್ದು, ಇವರು ಪ್ರಾಮಾಣಿಕ, ನೇರ, ದೂರ ದೃಷ್ಟಿ ವ್ಯಕ್ತಿತ್ವ ಇರುವ ಗುಣದವರು. ಇವರ ಪತ್ನಿ ಸುಷ್ಮಾ ಶೆರೆಗಾರ್ ಅವರು
ಟ್ರಾನ್ಸ್ ಗ್ರೂಪ್ ನ ಡೈರೆಕ್ಟರಾಗಿದ್ದಾರೆ.
ಇನ್ನು ಇವರಿಗೆ ಇಬ್ಬರು ಮಕ್ಕಳು ರಿದ್ಧ್ವಿನ್, ಸಿದ್ಧ್ವಿನ್.
ರಿದ್ಧ್ವಿನ್ ಟಾಮ್ ಅಂಡ್ ಜೆರ್ರಿ ಸಿನಿಮಾದಲ್ಲಿ ಮೊದಲ ಬಾರಿ ಬಣ್ಣಹಚ್ಚಿ ನಟಿಸಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದಿರೋ ಹೊಸ ನಿರ್ಮಾಪಕರು ರಾಜು ಶೆರೆಗಾರ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ಸಿನಿಮಾಗಳನ್ನ‌‌‌ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ರಾಜು ಶೆರೆಗಾರ್ ಉತ್ತಮ‌ ಚಲನಚಿತ್ರ ಮಾಡಬೆಕೆನ್ನುವ ಹೆಬ್ಬಯಕೆ ಅವರದ್ದಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com