ಟಾಮ್ ಅಂಡ್ ಜೆರ್ರಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿರೋ ಚಿತ್ರತಂಡ

Published on

345 Views

ಕನ್ನಡ ಸಿನಿಮಾ ಇಂಡಸ್ಟ್ರೀಗೆ ಹೊಸ ಪ್ರತಿಭೆಗಳು ಬರ್ತಾರೆ, ಹೋಗ್ತಾರೆ. ಅವಕಾಶದ ಜೊತೆ ಅದೃಷ್ಟ, ಟ್ಯಾಲೆಂಟ್ ಇದ್ದವರು ಗಟ್ಟಿಯಾಗಿ ನೆಲೆಯೂರ್ತಾರೆ.‌‌ ನಾವೀಗ ಅಂತಹ ಪ್ರತಿಭೆಯ ಕನಸಿನ ಸಿನಿಮಾದ ಬಗ್ಗೆ ಹೇಳ್ತಿದ್ದೇವೆ. ಅವರೇ‌ ನಿರ್ದೇಶಕ ರಾಘವ್ ವಿನಯ್ ಶಿವಗಂಗೆ. ಕೆಜಿಎಫ್ ಸಿನಿಮಾದ ಭೇಟೆಗಾರರ ಭೇಟೆಯಾಡೋ ರಣಭೇಟೆಗಾರ ಬಂದ ಅನ್ನೋ ಡೈಲಾಗ್ ನೀವ್ ಕೇಳೇ ಇರ್ತಿರಾ. ಆ ಪವರ್ ಫುಲ್ ಡೈಲಾಗ್ ಕರ್ತೃ ಇವರೇ. ಇದೇ ರಾಘವ್ ಇದೀಗ ಡೈರೆಕ್ಟರ್ ಗ್ಯಾಪ್ ತೊಟ್ಟು ಸಿನಿಮಾ ನಿರ್ದೇಶನ ಮಾಡ್ತಿರೋದು ಗೊತ್ತೇ ಇದೆ. ಮಕ್ಕಳ‌ ಫೇವರೇಟ್ ಟಿವಿ ಶೋ ಟಾಮ್ ಅಂಡ್ ಜೆರ್ರಿ ಅನ್ನೋ ಟೈಟಲ್ ನಡಿ‌ ಸಿನಿಮಾ ನಿರ್ದೇಶನ‌ ಮಾಡ್ತಿದ್ದಾರೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂಧವಿಲ್ಲ‌ ಅನ್ನುತ್ತಿದೆ ಸಿನಿಮಾ ಟೀಂ.

ಸದ್ಯ ಟಾಮ್ ಅಂಡ್ ಜೆರ್ರಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿರೋ ಚಿತ್ರತಂಡ, ಕುಂಬಳಕಾಯಿ ಹೊಡೆದು, ತೆರೆಮೇಲೆ ತರೋ ಪ್ರಯತ್ನದಲ್ಲಿದೆ.

ಇನ್ನೂ ಗಂಟುಮೂಟೆ ಸಿನಿಮಾದಲ್ಲಿ ನಟಿಸಿದ್ದ ನಿಶ್ಚಿತ್ ಕೊರೋಡಿ ಹೀರೋ ಆಗಿ ಬಣ್ಣ ಹಚ್ಚಿದ್ದು, ನಿಶ್ಚಿತ್ ಗೆ ಜೋಡಿಯಾಗಿ ಜೋಡಿಹಕ್ಕಿ ಸೀರಿಯಲ್ ಖ್ಯಾತಿಯ ಚೈತ್ರಾ ರಾವ್ ಕಾಣಿಸಿಕೊಂಡಿದ್ದಾರೆ. ಇನ್ನೂ ಉಳಿದಂತೆ ಜೈ ಜಗದೀಶ್, ತಾರಾ ಅನುರಾಧ, ರಂಗಾಯಣ ರಘು, ಪ್ರಶಾಂತ್, ಪದ್ಮಜಾ ರಾವ್, ಕಡ್ಡಿ ಪುಡಿ ಚಂದ್ರು‌ ಮುಂದಾದವರು ನಟಿಸಿದ್ದಾರೆ.

ಅಂದಹಾಗೇ ಚಿತ್ರಕ್ಕೆ ರಾಜು ಶೇರಿಗಾರ ಬಂಡವಾಳ ಹೂಡಿದ್ದು, ಮನು ಮ್ಯಾಥ್ಯೂಸ್ ಮ್ಯೂಸಿಕ್ , ಸಂಕೇತ್‌ ಕ್ಯಾಮರ ಕೈಚಳಕ ಚಿತ್ರದಲ್ಲಿದೆ. ಹೊಸಬರ ಹೊಸ ಪ್ರಯತ್ನದೊಂದಿಗೆ ಬರ್ತಿರೋ ಟಾಮ್ ಅಂಡ್ ಜೆರ್ರಿ ಸಕ್ಸಸ್ ಆಗಲಿ ಅನ್ನೋದು‌ ಎಲ್ಲರ ಆರೈಕೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com