ಪ್ರಶಾಂತ್ ನೀಲ್ ನಿರ್ದೇಶನದ ಟಾಲಿವುಡ್ ಸ್ಟಾರ್ ಪ್ರಭಾಸ್ ನಾಯಕನಾಗಿರುವ ‘ಸಲಾರ್’ ಸಿನಿಮಾದ ಪೋಸ್ಟರ್ ಬಿಡುಗಡೆ…

ಹೊಂಬಾಳೆ ಫಿಲ್ಮ್ಸ್ ತನ್ನ ಸಂಸ್ಥೆಯಿಂದ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದರು. ಇಂದು (ಡಿ.2) ರಂದು ಸೋಶಿಯಲ್ ಮೀಡಿಯಾದ ಮೂಲಕ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಜೊತೆ ಹೊಸ ಸಿನಿಮಾ ಮಾಡುವ ಬಗ್ಗೆ ಮಾಹಿತಿ ನೀಡಿದ್ದು, ಈ ಪಾನ್ ಇಂಡಿಯಾ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶಕರಾಗಲಿದ್ದಾರೆ. ಆ ಚಿತ್ರಕ್ಕೆ ‘ಸಲಾರ್’ ಎಂದು ಟೈಟಲ್ ಇಟ್ಟು, ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು.
ಪ್ರಭಾಸ್ ರವರ ಫಸ್ಟ್ ಲುಕ್ ಗೆ ಪ್ರಭಾಸ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಕನ್ನಡ ಮಾತ್ರವಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಮೂಡಿಬರಲಿದೆ ‘ಸಲಾರ್’. ಪೋಸ್ಟರ್ ಬಿಡುಗಡೆ ಮಾಡಿದ ಪುನೀತ್ ‘ನಮ್ಮ ಕನ್ನಡ ನಾಡಿಗೆ ನಿಮ್ಮನ್ನು ಸ್ವಾಗತಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. 2021ರ ಜನವರಿಯಲ್ಲಿ ‘ಸಲಾರ್’ ಸೆಟ್ಟೇರಲಿದ್ದು, ಪ್ರಭಾಸ್ ರವರ ‘ರಾಧೆ ಶ್ಯಾಮ್’ ಚಿತ್ರದ ಬಿಡುಗಡೆ ನಂತರ ‘ಸಲಾರ್’ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಹೊಂಬಾಳೆ ಫಿಲ್ಮ್ಸ್. ‘ಸಲಾರ್’ ಗೆ ನಾಯಕಿ ಯಾರು ಎಂಬುದು ಮಾತ್ರ ಇನ್ನು ಬಹಿರಂಗವಾಗಿಲ್ಲ. ಅದರೆ ಈ ವಿಷಯವಾಗಿ ಕೆಲ ಕನ್ನಡಿಗರು ಮಾತ್ರ ಬೇಸಾರ ವ್ಯಕ್ತಪಡಿಸಿದ್ದು, ಪರಭಾಷೆಯ ನಟನಿಗಿಂತ ಕನ್ನಡದ ನಟನಿಗೆ ಅವಕಾಶ ಕೊಡಬಹುದಿತ್ತು ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.