ಟಾಲಿವುಡ್ ಗೆ ಬಿಗ್ ಎಂಟ್ರಿ ಕೊಟ್ಟ ‘ಯೂಟರ್ನ್ ‘ ಬೆಡಗಿ

Published on

457 Views

ಶ್ರದ್ಧಾ ಶ್ರೀನಾಥ್ ದೊಡ್ಡ ಮಟ್ಟದಲ್ಲಿ ತೆಲುಗು ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಯಶಸ್ವಿ ನಾಯಕ ನಾನಿ ಗೆ ನಾಯಕಿ ಆಗುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ‘ಮಳ್ಳಿರಾವಾ’ ಚಿತ್ರ ನಿರ್ದೇಶಿಸಿದ ಗೌತಮ್ ತಿನ್ನನೋರಿ ನಿರ್ದೇಶನದ ‘ ಜೆರ್ಸಿ’ ಚಿತ್ರಕ್ಕೆ ಯೂಟರ್ನ್ ಬೆಡಗಿ ನಾಯಕಿಯಾಗಿದ್ದಾಳೆ. ಕನ್ನಡ , ತಮಿಳು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಈಗ ತೆಲುಗು ಇಂಡಸ್ಟ್ರಿ ಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಬರೆಯಲು ಹೊರಟಿದ್ದಾರೆ ಶ್ರದ್ಧಾ. ಕನ್ನಡದ ‘ಯೂಟರ್ನ್’ ತೆಲುಗಿಗೆ ರಿಮೇಕ್ ಆಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಈಗ‌ ‘ಯೂಟರ್ನ್’ ಬೆಡಗಿ ತೆಲುಗು ಇಂಡಸ್ಟ್ರಿ ಗೆ ಎಂಟ್ರಿ ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ. ಈಗಾಗಲೇ ನಾನಿನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಈ ಚಿತ್ರದಲ್ಲಿ ನಾನಿ ಕ್ರಿಕೆಟ್ ರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಪಾತ್ರದ ಬಗ್ಗೆ ಮಾತ್ರ ಚಿತ್ರತಂಡ ಮಾತ್ರ ಇನ್ನು ಬಾಯಿ ಬಿಟ್ಟಿಲ್ಲ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com