ಇಂದು ನಾಲ್ಕು ಚಿತ್ರಗಳು ತೆರೆಗೆ
ರ್‍ಯಾಂಬೋ 2
ಲಡ್ಡು ಸಿನಿಮಾ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಮತ್ತೊಂದು ಕಾಮಿಡಿ ಕಥಾನಕ ಹೊಂದಿರೊ ರ್ಯಾಂಬೋ-2 ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಹಿಂದೆ ತೆರೆಕಂಡಿದ್ದ ರ್ಯಾಂಬೋ ಚಿತ್ರದ ಕಥೆಗೂ ಈ ಚಿತ್ರದ ಕಥೆಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೂ ಚಿತ್ರದ ಹಾಡುಗಳು ಈಗಾಗಲೇ ವೈರಲ್ ಆಗಿದ್ದು ಚಿತ್ರದ ನಿರೀಕ್ಷೆಯನ್ನು ದ್ವಿಗುಣಗೊಳಿಸಿವೆ. ಅನಿಲ್‍ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಶರಣ್ ಜಿ.ಕೆ. ಹಾಗೂ ಅಟ್ಲಾಂಟ ನಾಗೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಉದಯ್ ಹಾಗೂ ತರುಣ್ ಸುಧೀರ್ ಈ ಚಿತ್ರದ ಕಥೆ ರಚಿಸಿದ್ದು, ಅನಿಲ್ ಸಂಭಾಷಣೆ ಹೆಣೆದಿದ್ದಾರೆ. ಸುಧಾಕರ್ ಎಸ್.ರಾಜ್ ಈ ಚಿತ್ರದ ಛಾಯಾಗ್ರಾಹಕರಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ, ಭೂಷಣ್ ನೃತ್ಯ ನಿರ್ದೇಶನ ರವಿವರ್ಮ ಸಾಹಸ ನಿರ್ದೇಶನ, ಮೋಹನ್ ಬಿ.ಕೆರೆ ಕಲಾನಿರ್ದೇಶನ ಈ ಚಿತ್ರಕ್ಕಿದೆ. ಶರಣ್, ಆಶಿಕಾ ರಂಗನಾಥ್, ಚಿಕ್ಕಣ್ಣ, ಸಾಧುಕೋಕಿಲ, ರವಿಶಂಕರ್, ಕುರಿಪ್ರತಾಪ್, ತಬಲನಾಣಿ, ಲಕ್ಷ, ನಿಹಾಲ್, ನಂದಿನಿ ವಿಠಲ್, ನಿಹಾಲ್, ವಿದ್ಯು ಲೇಖನ್, ಕರಿಸುಬ್ಬು, ವಿನಯ್, ಸಚಿನ್, ಜಯಂತ್, ಜಹಂಗೀರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ
************************************
ಸದ್ದು
ತಶಾ ಪ್ರೊಡಕ್ಷನ್ಸ್ ಹಾಗೂ ಕಾರ್ತೀಕ್ ಅಂಡ್ ವಿಯಾನ್ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ವಚನ್ ಶೆಟ್ಟಿ ಹಾಗೂ ಡಿ. ಕೃಷ್ಣ ಚೈತ್ಯನ್ಯ ನಿರ್ಮಾಣ ಮಾಡಿರುವ ಚಿತ್ರ ಸದ್ದು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಡಲತೀರದ ಬಹುತೇಕ ಹೊಸ ಪತ್ರಿಭೆಗಳ ಸಂಗಮದಲ್ಲಿ ತಯಾರಾದ ಈ ಚಿತ್ರಕ್ಕೆ ಅರುಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕುತೂಹಲಕರವಾದ ಥ್ರಿಲ್ಲರ್ ಕಥೆಯಿದ್ದು, ಶಬ್ಧದ ಆಕರ್ಷಣೆಗೆ ಒಳಗಾಗಿ ಅದರ ಹಿಂದೆ ನಾವು ಹೋದಾಗ ಏನೇನೆಲ್ಲ ಪರಿಣಾಮ ಉಂಟಾಗುತ್ತದೆ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಪರಿಸರದ ಮೇಲಿನ ಕಾಳಜಿಯನ್ನು ಬಿಂಬಿಸುವ ಮಹಿಳಾ ಪ್ರಧಾನ ಕಥಾನಕವನ್ನು ಈ ಚಿತ್ರ ಒಳಗೊಂಡಿದೆ. ಈ ಚಿತ್ರಕ್ಕೆ ವೀರೇಶ್ ಛಾಯಾಗ್ರಹಣ, ಚೇತನ್ ಸಂಗೀತ, ಮುತ್ತುರಾಜ್ ಸಂಕಲನ, ಅಶೋಕ್, ಆನಂದ್ ಅವರ ಸಹನಿದೇಶನವಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಅಶೋಕ್ ಕಾರ್ಯನಿರ್ವಹಿಸಿದ್ದಾರೆ. ನಿಖಿತಾ ಸ್ವಾಮಿ, ಭರತ್, ಭಾಗ್ಯ, ಭೋಜರಾಜ, ವಾಮಂಜೂರು, ಹರೀಶ್, ಆನಂದ್, ವಿಷ್ಣು, ಪೂಜಾ, ಆಶ್ರಿತಾ ಮುಂತಾದ ಕಲಾವಿದರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
***************************************************************************
ಪಾರ್ಥ ಸಾರಥಿ
ಡಿಜಿಟಲ್ ಪಿಕ್ಸಲ್ ಫಿಲಂಸ್ ಲಾಂಛನದಲ್ಲಿ ರಾಬರ್ಟ್ ನವರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಪಾರ್ಥಸಾರಥಿ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿರ್ದೇಶಕ ರಾಬರ್ಟ್ ನವರಾಜ್ ಅವರೇ ಈ ಚಿತ್ರದ ನಿರ್ಮಾಪಕರೂ ಆಗಿದ್ದಾರೆ. ಪಾರ್ಥ ಎಂಬ ಪೋಲೀಸ್ ಕಾಪ್ ಜೀವನದ ಸುತ್ತ ಹೆಣೆಯಲಾದ ಕಥೆ ಹೊಂದಿರುವ ಈ ಚಿತ್ರಕ್ಕೆ ವಿಕ್ಟರ್ ಲೋಗಿದಸನ್ ಅವರ ಸಂಗೀತ ನಿರ್ದೇಶನ, ನೀಲೇಶ್ ಕೆಣಿ ಅವರ ಕ್ಯಾಮೆರಾ ವರ್ಕ್ ಇದೆ. ಚಿತ್ರದ ಸಹನಿರ್ಮಾಪಕ ಹಾಗೂ ಸಂಕಲನಕಾರರಾಗಿ ಸುಬಜೀತ್ ದತ್ತ ಕೆಲಸ ಮಾಡಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ರಾಘವೇಂದ್ರ ಹೆಚ್. ಹಾಗೂ ಹರ್ಷವರ್ಧನ ರಚಿಸಿದ್ದಾರೆ. ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ರೇಣುಕುಮಾರ್, ಅಕ್ಷತಾ ಶ್ರೀಧರ್, ಪ್ರವೀಣ್ ಶೆಟ್ಟಿ, ಸುಹಾಸ್, ಮಂಜುನಾಥ್ ಭದ್ರಾವತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.
******************************************************************
ರಾಜ ಲವ್ಸ್ ರಾಧೆ ಬಿಡುಗಡೆ
ಹೆಚ್.ಎಲ್.ಎನ್. ಎಂಟರ್‍ಟ್ರೈನರ್ಸ್ ಲಾಂಛನದಲ್ಲಿ ಹೆಚ್.ಎಲ್.ಎನ್.ರಾಜು ನಿರ್ಮಿಸಿರುವ ರಾಜ ಲವ್ಸ್ ರಾಧೆ ಈ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಒಂದು ನವಿರಾದ ಪ್ರೇಮ ಕಥಾನಕ ಹೊಂದಿರುವ ಈ ಚಿತ್ರವನ್ನು ರಾಜಶೇಖರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವಿ.ಸಮರ್ಥ್ ಸಂಗೀತ, ಚಿದಾನಂದ್ ಛಾಯಾಗ್ರಹಣ, ವಿಜಯ ಬರಮಸಾಗರ ಸಂಭಾಷಣೆ, ಕೆ.ಎಂ ಪ್ರಕಾಶ್ ಸಂಕಲನ, ಕಲೈ ಮಾಸ್ಟರ್ ನೃತ್ಯ ನಿರ್ದೇಶನ, ಡಾ|| ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್, ವಿಜಯ ಭರಮಸಾಗರ, ರಾಜಶೇಖರ್ ಸಾಹಿತ್ಯವಿದೆ. ವಿಜಯರಾಘವೇಂದ್ರ, ರಾಧಿಕಾ ಪ್ರೀತಿ, ರವಿಶಂಕರ್, ಶೋಭರಾಜ್, ತಬಲಾನಾಣಿ, ಮಿತ್ರ, ರಾಜೇಶ್ ಅಡಿಗ, ಪೆಟ್ರೋಲ್ ಪ್ರಸನ್ನ, ಶುಭ ಪೂಂಜಾ, ನಿ.ನಾ.ಸಂ, ನಿರಂಜನ್, ಭವ್ಯ, ಮೋಹನ್ ಜುನೇಜಾ, ಮಜಾ ಟಾಕೀಸ್ ಪವನ್, ಪ್ರತಾಪ್, ರಂಗತೇಜ, ಮೂಗ್ ಸುರೇಶ್, ಮುಂತಾದವರ ತಾರಾಬಳಗವಿದೆ.