ರಿಷಬ್ ಶೆಟ್ಟಿ‌ ಅಭಿನಯದ ‘ಬೆಲ್ ಬಾಟಮ್-2’ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆ

Published on

741 Views

ರಿಷಬ್ ಶೆಟ್ಟಿ ಮತ್ತು ತಾನ್ಯ ಹೋಪ್ ಅಭಿನಯದ ಹಾಸ್ಯಮಯ ಚಿತ್ರ ‘ಬೆಲ್ ಬಾಟಮ್-2’ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆಯಾಗಿದ್ದು, ಜಯತೀರ್ಥ ನಿರ್ದೇಶನದ ‘ಬೆಲಬಾಟಮ್’ ಚಿತ್ರದ ಮುಂದುವರಿದ ಭಾಗವಾಗಲಿದೆ. ‘ಬೆಲ್ ಬಾಟಮ್-2’ ಚಿತ್ರವನ್ನು ಜಯತೀರ್ಥ ರವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟ್ಯಾಗ್ ಲೈನ್ ಅಡ್ವೆಂಚರ್‌ ಆಫ್ ಡಿಟೆಕ್ಟಿವ್‌ ದಿವಾಕರ್ ಎಂದು‌ ಹಾಕಲಾಗಿದೆ.

ಸ್ಯಾಂಡಲ್‌ವುಡ್ ನಲ್ಲಿ‌ ನಟನೆಯ ಜೊತೆಗೆ ಸಿನಿಮಾಗಳನ್ನು‌ ನಿರ್ದೇಶಿಸಿ ಯಶಸ್ಸು ಕಂಡಿರುವ ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ‌ ಅಭಿನಯಿಸುತ್ತಿದ್ದು, ಇದು 80ರ ದಶಕದಲ್ಲಿ ನಡೆದ ನೈಜ‌ ಘಟನೆ ಆಧರಿಸಿದ ಸಿನಿಮಾವಾಗಿದ್ದು, ಚಿತ್ರದ ಚಿತ್ರೀಕರಣ ಮೈಸೂರು, ಚಾಮರಾಜನಗರ ‌ಮತ್ತು ಉತ್ತರ‌ ಕರ್ನಾಟಕದಲ್ಲಿ ನಡೆಯಲಿದೆ.


ಪ್ರಮುಖ ‌ಪಾತ್ರಗಳಲ್ಲಿ ಹರಿಪ್ರಿಯಾ, ಪ್ರಮೋದ್ ಶೆಟ್ಟಿ, ಯೋಗರಾಜ್ ಭಟ್, ಪಿಡಿ ಸತೀಶ್ ಚಂದ್ರ, ಸುಜಯ್ ಶಾಸ್ತ್ರಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶಕರಾಗಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಾಹಕರಾಗಿದ್ದಾರೆ. ಬೆಲ್ ಬಾಟಮ್ ಚಿತ್ರಕ್ಕೆ‌ ಬಂಡವಾಳ‌ ಹೂಡಿದ್ದ ಸಂತೋಷ್ ಕುಮಾರ್ ಈ ಚಿತ್ರದ ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com