ನೆನಪಿರಲಿ ಪ್ರೇಮ್ 25 ನೇ ಸಿನಿಮಾಕ್ಕೆ‌ ಟೈಟಲ್ ಫಿಕ್ಸ್

Published on

449 Views

‘ಪ್ರಾಣ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಪ್ರೇಮ್, ನೆನಪಿರಲಿ ಚಿತ್ರದ ಗೆಲುವಿನ‌ ನಂತರ ‘ನೆನಪಿರಲಿ ಪ್ರೇಮ್’ ಎಂದೇ ಜನಪ್ರಿಯ ಪಡೆದರು. ನಂತರ ಪ್ರೇಮ್ ಲಕ್ಷಾಂತರ ಅಭಿಮಾನಿಗಳು‌ ಪಡೆದು ಲವ್ಲಿ ಸ್ಟಾರ್ ಆಗಿ ಮಿಂಚಿದರು. ‘ನೆನಪಿರಲಿ’, ‘ಪಲ್ಲಕ್ಕಿ’, ‘ಸವಿಸವಿನೆನಪು’, ‘ ಗೌತಮ್’, ‘ಧನ್ ಧನಾ ಧನ್’, ‘ಚಾರ್ ಮಿನಾರ್’, ‘ಚೌಕ’, ‘ಲೈಫ್ ಜೊತೆ ಒಂದು ಸೆಲ್ಫೀ’.. ಹೀಗೆ 17 ವರ್ಷಗಳಲ್ಲಿ 24 ಸಿನಿಮಾದಲ್ಲಿ ನಟಿಸಿದ ಪ್ರೇಮ್ ತನ್ನ 25ನೇ ಸಿನಿಮಾದಲ್ಲಿ‌ ಅಪರೂಪದ ಪಾತ್ರದಲ್ಲಿ ಮಿಂಚಲು‌ ರೆಡಿಯಾಗಿದ್ದಾರೆ. 25ನೇ

ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ಚಿತ್ರಕ್ಕೆ ‘ಪ್ರೇಮಂ ಪೂಜ್ಯಂ’ ಎಂದು‌ ಟೈಟಲ್ ನೀಡಲಾಗಿದೆ. ಈ ಚಿತ್ರದಲ್ಲಿ ಪ್ರೇಮ್ ನಾಲ್ಕು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫಸ್ಟ್ ಲುಕ್ ನಲ್ಲಿ ವಿಭಿನ್ನ ಗೆಟಪ್ ಮೂಲಕ ಕಾಣಿಸಿಕೊಂಡ ಪ್ರೇಮ್ ಮೆಚ್ಚುಗೆಯನ್ನು ಪಡೆದಿದ್ದಾರೆ.ಫಸ್ಟ್ ಲುಕ್ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದು, ಚಿತ್ರದ ಬಗ್ಗೆ ಹೆಚ್ಚಿನ‌ ಮಾಹಿತಿಯನ್ನು ಚಿತ್ರ ತಂಡ ಬಿಟ್ಟು‌ಕೊಟ್ಟಿಲ್ಲ. ಪ್ರೇಮ್ 25ನೇ ಸಿನಿಮಾವನ್ನು ಹೊಸ ನಿರ್ದೇಶಕರು ‌ನಿರ್ದೇಶನ ಮಾಡುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com