ಟೈಮ್ ಟ್ರಾವೆಲ್ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ “ಬ್ಲಿಂಕ್”!! – ಏನಿದರ ಸ್ಟೋರಿ?
“ಬ್ಲಿಂಕ್” ಸಿನಿಮಾ ಸ್ಯಾಂಡಲ್ ವುಡ್ ನ ಬಹಳ ವಿಶಿಷ್ಟವಾದ ಸಿನಿಮಾ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಬಹಳ ಸಂಚಲನವನ್ನು ಸೃಷ್ಟಿಸಿದೆ. ಒಂದೇ ಶೈಲಿಯ ಸಿನಿಮಾಗಳನ್ನು ನೋಡಿ ಬೇಜಾರಾಗಿದ್ದ ವೀಕ್ಷಕರಿಗೆ “ಬ್ಲಿಂಕ್” ಸಿನಿಮಾ ಹೊಸತನವನ್ನು ತಂದಿದೆ. ಈ ಸಿನಿಮಾ ಸಂಪೂರ್ಣ ಭಿನ್ನ ಅನುಭವವನ್ನು ನೀಡುತ್ತದೆ.
“ಬ್ಲಿಂಕ್” ಸಿನಿಮಾವನ್ನು ರವಿಚಂದ್ರ ಎ.ಜೆ ರವರು ನಿರ್ಮಾಣ ಮಾಡಿದ್ದು, ಶ್ರೀನಿಧಿರವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ದೀಕ್ಷಿತ್ ಶೆಟ್ಟಿ ರವರು ನಟಿಸಿದ್ದರೆ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ, ಸುರೇಶ್ ಅನಗಳ್ಳಿ, ವಜ್ರಧೀರ್ ಜೈನ್ ಮತ್ತು ಮಂದಾರ ಬಟ್ಟಲಗಳ್ಳಿ ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ಲಿಂಕ್ ಚಿತ್ರದ ಟ್ರೈಲರ್ ಇಲ್ಲಿದೆ:
“ಬ್ಲಿಂಕ್” ಚಿತ್ರದ ಹೊಸ ಪ್ರಯತ್ನ ಹಾಗೂ ಸಿನಿಮಾದಲ್ಲಿ ಟೈಮ್ ಟ್ರಾವೆಲಿಂಗ್ ಸೋರಿ ಜೊತೆಗೆ “ಈಡಿಪಸ್ ರೆಕ್ಸ್” ಗ್ರೀಕ್ ನ ನಾಟಕದ ಕಥೆಯನ್ನು ಸಿನಿಮಾದಲ್ಲಿ ಬಹಳ ಸೊಗಸಾಗಿ ಅಳವಡಿಸಿದ್ದಾರೆ. ಚಿತ್ರದಲ್ಲಿ ಪಾತ್ರವಹಿಸಿದ ಕಲಾವಿದರು ರಂಗಭೂಮಿಯ ಪ್ರತಿಭೆಯಾದ್ದರಿಂದ, ಕಥೆಯಲ್ಲಿ ನಾಟಕ ಶೈಲಿಯೂ ಬಹಳ ಚೆನ್ನಾಗಿ ಬೆರೆತಿದೆ.
“ಬ್ಲಿಂಕ್” ಸಿನಿಮಾ ಸಸ್ಪೆನ್ಸ್ ಹಾಗೂ ಟೈಮ್ ಟ್ರಾವೆಲ್ ಸಿನಿಮಾವಾಗಿದ್ದು, ಸಿನಿಮಾ ಕಾಲ್ಪನಿಕ ಜಗತ್ತಿನ ಮೇಲೆ ಆಸಕ್ತಿ ಇರುವವರಿಗೆ ಬಹಳ ಥ್ರಿಲ್ ಸಿಗುತ್ತದೆ. ಚಿತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ ಅವರ ಪಾತ್ರ ಪ್ರಮುಖವಾದದ್ದು ಹಾಗೂ ಸವಾಲಿನ ಪಾತ್ರ. ಈ ಪಾತ್ರವನ್ನು ಅವರು ಬಹಳ ಸಮರ್ಥವಾಗಿ ಹಾಗೂ ಸೊಗಸಾಗಿ ನಿರ್ವಹಿಸಿದ್ದಾರೆ. ದೀಕ್ಷಿತ್ ಶೆಟ್ಟಿಗೆ ಜೋಡಿಯಾಗಿ ಮಂದಾರ ಬಟ್ಟಲಹಳ್ಳಿ ಅವರು ನಟಿಸಿದ್ದಾರೆ.
ಈ ಚಿತ್ರದಲ್ಲಿ ರೆಟ್ರೋ ಸನ್ನಿವೇಶಗಳು ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ ಹಾಗೂ ರಂಗಭೂಮಿ ಪ್ರತಿಭೆಗಳಿಂದ ಕೆಲವು ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಸಿನಿಮಾಟೋಗ್ರಾಫಿಯನ್ನು ಅವಿನಾಶ್ ಶಾಸ್ತ್ರಿ, ಸಂಗೀತ ನಿರ್ದೇಶಕರಾಗಿ ಪ್ರಸನ್ನ ಕುಮಾರ್ ರವರು ಕೆಲಸ ಮಡಿದ್ದಾರೆ. ಒಟ್ಟಾರೆಯಾಗಿ ಸಿನಿಮಾದ ಬಗ್ಗೆ ಹೇಳುವುದಾದರೆ, ಈ ಸಿನಿಮಾ ಪ್ರೇಕ್ಷಕರಿಗೆ ವಿಶೇಷ ಅನುಭವವನ್ನು ನೀಡುತ್ತದೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.