ಮೂರು‌ ನಾಯಕಿಯರ ‘ಖೈಮರಾ’…

Published on

326 Views

ಸ್ಯಾಂಡಲ್ವುಡ್ ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿದ್ದು, ಅದರ ಜೊತೆ ಸೇರ್ಪಡೆ ಆಗಿರುವ ಮತ್ತೊಂದು ಚಿತ್ರ ಮೂವರು ನಾಯಕಿಯರ ಎಂಟ್ರಿ ಕೊಡುತ್ತಿರುವ ಹಾರರ್ ಸಿನಿಮಾ ‘ಖೈಮರಾ’.

ಕಾಲಿವುಡ್ ನಿರ್ದೇಶಕ ಗೌತಮ್ ವಿ.ಪಿ ಆ್ಯಕ್ಷನ್‌ ಕಟ್‌ ಹೇಳುವ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ‌ ಕೊಡುತ್ತಿದ್ದಾರೆ. ಇದೊಂದು‌ ಸೈಕಾಲಜಿಕಲ್ ಥ್ರಿಲ್ಲರ್ ‌ಸಿನಿಮಾವಾಗಿದ್ದು, ಇದರಲ್ಲಿ ನಟಿ ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್ ನಟಿಸಲಿದ್ದಾರೆ. ‘ಖೈಮರಾ’ ಚಿತ್ರದಲ್ಲಿ ಈ ಮೂವರು ಬೇರೆ ಬೇರೆ‌ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾ ಪ್ರಸ್ತುತ ‌ಕಾಲಘಟ್ಟದ ಜೊತೆಗೆ 1960ರ ದಶಕದ ಕಥೆಯನ್ನು‌ ಒಳಗೊಂಡಿದ್ದು, ಪಾತ್ರಗಳು ‌ಎರಡು‌ ಶೇಡ್ ಗಳಲ್ಲಿ‌ ಮೂಡಿಬರಲಿದೆ. ಚಿತ್ರದ‌ ಟೈಟಲ್‌ ಇಂದು ಬಿಡುಗಡೆಯಾಗಿದ್ದು, ನವೆಂಬರ್ 17 ರಂದು ಚಿತ್ರದ ಚಿತ್ರೀಕರಣ ಬೆಂಗಳೂರು ಮತ್ತು ಕೊಡಗಿನಲ್ಲಿ ನಡೆಸಲು ಸಿನಿಮಾ ತಂಡ ಪ್ಲಾನ್ ಮಾಡಿದೆ. ಚಿತ್ರದಲ್ಲಿ ಶಿವಾಜಿ‌ ಸುರತ್ಕಲ್‌ ಖ್ಯಾತಿಯ ನಟ ವಿನಯ್ ಗೌಡ ಪ್ರಮುಖ ಪಾತ್ರದಲ್ಲಿ ‌ನಟಿಸಲಿದ್ದಾರೆ. ಇಂದು‌ ಸಿನಿಮಾದ ಟೈಟಲ್‌ ಬಿಡುಗಡೆ ಸಮಾರಂಭದಲ್ಲಿ ನಟ‌ ಉಪೇಂದ್ರ ಮತ್ತು ಗುರುಕಿರಣ್ ಅತಿಥಿಯಾಗಿ ಭಾಗವಹಿಸಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com