ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗ ಆಗಿದ್ದೆ ಅನ್ನಿಸುತ್ತೆ…!! ಗಾಯಕ ಸೋನು ನಿಗಮ್

Published on

360 Views

ಬೆಂಗಳೂರು 12ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸೋನು ನಿಗಮ್ ಮಾತನಾಡಿ, ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗ ಆಗಿದ್ದೆ ಅನ್ನಿಸುತ್ತೆ ನಾನು ಇಷ್ಟು ವರ್ಷ ಎಷ್ಟೋ ಹಾಡುಗಳನ್ನು ಹಾಡಿದ್ದೀನಿ, ನಾನು ಹಾಡಿದ ಕನ್ನಡ ಹಾಡುಗಳು ನನಗೆ ತೃಪ್ತಿ ಕೊಟ್ಟಿದೆ. ಕನ್ನಡ ನನಗೆ ಲೈಫ್ ಕೊಟ್ಟಿದೆ. ಮುಂದಿನ‌ ಜನ್ಮದಲ್ಲಿ ಕನ್ನಡದಲ್ಲೇ ಹಾಡಬೇಕು ಅಂತಾ ಬಯಸುತ್ತೇನೆ ಅಂತಾ ತಿಳಿಸಿದರು. ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗ ಆಗಿದ್ದೆ ಅನ್ನಿಸುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ಮುಂಗಾರು ಮಳೆ ಹಾಡು ಹಾಡಿ ರಂಜಿಸಿದರು. ಈ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್​ವೈ, ರಾಕಿಂಗ್ ಸ್ಟಾರ್ ಯಶ್, ಅದಿತಿ ಪ್ರಭುದೇವ, ಹಿರಿಯ ನಟಿ ಜಯಪ್ರದ, ನಿರ್ಮಾಪಕ ಬೋನಿ ಕಪೂರ್ ಭಾಗಿಯಾಗಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com