ತಿಮ್ಮಯ್ಯ ಎಂಡ್ ತಿಮ್ಮಯ್ಯ ಎನ್ನೋ ಅನಂತ@ರೂಪಕ!
ತಿಮ್ಮಯ್ಯ ಎಂಡ್ ತಿಮ್ಮಯ್ಯ!
-ಇಂಥದೊಂದು ಕಥೆಯನ್ನ ಕೈಗೆತ್ತಿಕೊಳ್ಳುವ ಮುನ್ನ ದೊಡ್ಡ ಧೈರ್ಯವೇ ಬೇಕು. ನಿರ್ದೇಶಕ ಸಂಜಯ್ ಶರ್ಮಾ ಅದನ್ನು ಅಕ್ಷರಶಃ ಪ್ರೂವ್ ಮಾಡಿದ್ದಾರೆ, ಅವರಿಗೆ ಇರುವ ಧೈರ್ಯದ ಕಿವೋ ವ್ಯಾಟ್ಸ್ ಎಷ್ಟು ಎನ್ನುವುದನ್ನು ಸಿನೆಮಾದ ಫ್ಲೋನಲ್ಲೇ ಹೇಳಿಬಿಟ್ಟಿದ್ದಾರೆ!
ಹೌದು, ತಿಮ್ಮಯ್ಯ ಮತ್ತು ತಿಮ್ಮಯ್ಯ ಎನ್ನೋ ಮನಮೋಹಕ ಜರ್ನಿಯೇ ಅಂಥದ್ದು. ಕೂರ್ಗ್ ಕುಟುಂಬವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಕಲರ್ಫುಲ್ ಕಥಾಹಂದರವೇ ಡಬಲ್ ತಿಮ್ಮಯ್ಯ!
ಇಲ್ಲಿ ಸಿನೆಮಾ ಟೈಟಲ್ ಡಬಲ್ ಹೇಗೋ…ಸಿನೆಮಾದಲ್ಲಿನ ಪಾತ್ರಗಳ ಔಟ್ ಪುಟ್ ಕೂಡ ಡಬಲ್. ಸಂಗೀತದ ಮಾಧುರ್ಯ ಡಬಲ್, ಸಿನೆಮಾದ ಓಘ ಮತ್ತು ವೇಘದ ಗತಿಯೂ ಅಷ್ಟೇ ಡಬಲ್…!
ಒಂದು ಪ್ಲೆಸೆಂಟ್ ಸಿನೆಮಾ ಹೇಗಿರಬೇಕು ಮತ್ತು ಕುಟುಂಬ ಸಮೇತವಾಗಿ ನೋಡುವ ಕ್ವಾಲಿಟಿ ಆಫ್ ಸಿನೆಮಾ ಹೇಗಿರಬೇಕು ಎನ್ನುವುದನ್ನು ನಿರ್ದೇಶಕರು ಸ್ಕ್ರಿಪ್ಟ್ ಮಾಡುವ ಮುನ್ನವೇ ನಿರ್ಧರಿಸಿರುವುದು ಆರಂಭದ ಹತ್ತು ನಿಮಿಷದಲ್ಲೇ ಗೊತ್ತಾಗಿಬಿಡುತ್ತದೆ. ಅನಂತನಾಗ್ ಮತ್ತು ದಿಗಂತ್ ಪಾತ್ರಗಳನ್ನ ಅವರು ಆಯ್ಕೆ ಮಾಡಿಕೊಂಡ ದಿನವೇ ಅಂಥದೊಂದು ಸಮಯೋಚಿತ ಮತ್ತು ಪ್ರಚಲಿತ ಕಥೆಗೆ ಕನ್ನಡಿ ಹಿಡಿದಿರುವುದು ಗೊತ್ತಾಗುತ್ತದೆ. ಜನರೇಷನ್ ಗ್ಯಾಪ್ ಎನ್ನೋ ವಿಷಯವನ್ನು ಇಬ್ಬರು ಯಶಸ್ವೀ ಕಲಾವಿದರನ್ನು ಇಟ್ಟುಕೊಂಡು ವಿಧವಿಧವಾಗಿ ನಿರೂಪಿಸುವುದು ಸುಲಭಕ್ಕೆ ಒಲಿಯುವ ಕಲೆಯಲ್ಲ. ಆಡ್ ಮೇಕಿಂಗ್ ವಿಭಾಗದಲ್ಲಿ ವಿಶ್ವಖ್ಯಾತಿ ಪಡೆದಿರುವ. ಸಾಕಷ್ಟು ಜಾಹೀರಾತುಗಳನ್ನು ಹಡೆದಿರುವ ಸಂಜಯ್ ಇಲ್ಲಿ ಒಂದು ವೆರೈಟಿ ವಿಶುವಲ್ ಟ್ರೀಟ್ ಕೊಡುತ್ತಾ ಹೋಗುತ್ತಾರೆ. ಎಲ್ಲಿಯೂ ಕಥೆಯ ಫ್ಲೋ ಗೆ ತೊಂದರೆ ಕೊಡದಂತೇ, ಯಾವ ಪಾತ್ರದ ತೂಕವೂ ಕಡಿಮೆ ಆಗದಂತೇ ಸಾಗುವ ಚಿತ್ರಕಥೆ ತಿಮ್ಮಯ್ಯ ಎಂಡ್ ತಿಮ್ಮಯ್ಯ ಚಿತ್ರದ ಪ್ಲಸ್ ಮತ್ತು ಪಾಸಿಟಿವ್ ಪಾಯಿಂಟ್ ಹಾಗೂ ಎಜರ್ನಿ!
ಅನಂತನಾಗ್ ಫ್ರೇಮ್ ಮೇಲೆ ಇದ್ದರೇ ಒಂದು ಸೊಗಸು-ಸೊಬಗು!
ಬೆರಗು ಮೂಡಿಸುವ ನಟರು ಬೆರಳೆಣಿಕೆಯಷ್ಟು ಎಂದಾದರೆ ಅದರಲ್ಲಿ ಹಿರಿಯ ಬೆರಳು ನಮ್ಮ ಅನಂತನಾಗ್! ನೋಟದಲ್ಲೇ ಸಹಸ್ರಾರು ವಿಷಯಗಳನ್ನ ವಿಶುವಲೈಸ್ ಮಾಡಬಲ್ಲ ಯೋಗ್ಯತೆ ಪ್ಲಸ್ ತಾಕತ್ತು ಇರುವ ಪ್ರಚಲಿತ ನಟ ಮತ್ತು ಅಪ್ ಡೇಟೆಡ್ ನಟ ನಮ್ಮ ಅನಂತನಾಗ್!
ಅಂಥ ಮೇರು ಪರ್ವತಕ್ಕೆ ಮೇರು ಪಾತ್ರವನ್ನೇ ಹೆಣೆದಿರುವ ಶರ್ಮಾ ಅವರು, ಅವರಿಂದ ವಯೋಸಹಜ ಸಂಘರ್ಷ ಮತ್ತು ಸಂಪ್ರೀತಿಯನ್ನು ಹೊರಹಾಕಿಸುತ್ತಾ ಹೋಗುತ್ತಾರೆ. ಮಡಿಕೇರಿಯ ಕಾನನದ ಕೇರಿಯಲ್ಲಿ ಓಡಾಡುವ ಅವರ ನಡವಳಿಕೆಯೇ ಒಂದು ವಿಶ್ವವಿದ್ಯಾನಿಲಯ ಗಾತ್ರದ ತಿಳುವಳಿಕೆ. ಎಲ್ಲಕ್ಕಿಂತ ಹೆಚ್ಚಾಗಿ ಅನಂತನಾಗ್ ನಡೆದರೂ ಅಂದ, ನಿಂತರೂ ಚಂದ, ನೋಡುತ್ತಲೇ ನಿಂತರೂ ಪರಮಾನಂದ…!
ಅಂಥ ಅನಂತನಾಗ್ ಇಲ್ಲಿ ಸೀನಿಯರ್ ತಿಮ್ಮಯ್ಯ. ತನ್ನ ಮೊಮ್ಮಗನ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಕಟ್ಟುನಿಟ್ಟಾಗಿ ಬದುಕುವ ವಿಲಾಸಿ ಮನಸಿನ ವಿಚಿತ್ರ ತಾತಯ್ಯನಾಗಿ ಅವರು ಬೇರೆ ಲೆವೆಲ್ ನಟನೆಯನ್ನೇ ಮಾಡಿದ್ದಾರೆ…ಅವರ ಪಾತ್ರಕ್ಕೆ ಕೆಲವೊಮ್ಮೆ ತದ್ವಿರುದ್ಧವಾಗಿ ವಾಗ್ಯುದ್ಧ ಮಾಡುವ ದಿಗಂತ್ ಇಲ್ಲಿ ತಮ್ಮದೇ ಆದ ಶೈಲಿಯಲ್ಲಿ ಸ್ಕೋರ್ ಮಾಡುತ್ತಾ ಹೋಗುತ್ತಾರೆ. ಅನಂತ್ ಅವರ ಅನಂತ ನಟನೆಯ ಜೊತೆಜೊತೆಗೆ ಬೆಸೆದುಕೊಂಡ ಭಾವವಾಗುತ್ತಾರೆ. ಬದುಕಾಗುತ್ತಾರೆ. ಯಂಗ್ ಬ್ಲಡ್ ಮೊಮ್ಮಗನಾಗಿ ಕೊನೆಗೂ ಅವರ ಮಹದಾಸೆಯನ್ನ ಪೂರೈಸುತ್ತಾರಾ? ಅದಕ್ಕೆ ಉತ್ತರೋತ್ತರ ಉತ್ತರ ನೀವು ನೋಡಲೇಬೇಕಾದ ತಿಮ್ಮಯ್ಯ ಎಂಡ್ ತಿಮ್ಮಯ್ಯ!
ನಿರ್ದೇಶಕರು ಕಥೆ ಹೇಳುವ ಸ್ಟೈಲ್ ತುಸು ಸ್ಲೋ ಎನಿಸಿದರೂ ಅಲ್ಲಲ್ಲಿ ಬರುವ ಪಾತ್ರಗಳು, ಟ್ವಿಸ್ಟ್ ಗಳು, ಟಂಗ್ ಟ್ವಿಸ್ಟ್ ಗಳು ಇಡೀ ಸಿನೆಮಾದ ಬಾಡಿ ಲಾಂಗ್ವೇಜ್ ಅನ್ನೇ ಹೊಸ ರೂಪದಲ್ಲಿ ಕಟ್ಟಿಕೊಡುತ್ತದೆ. ಇಲ್ಲೆಲ್ಲೋ ಬೋರಾಯಿತು ಎನ್ನುವಷ್ಟರಲ್ಲಿ ಕಾಮಿಡಿ ಖ್ಯಾತಿಯ ಪ್ರಕಾಶ್ ತುಮೀನಾಡ್ ಪ್ರತ್ಯಕ್ಷರಾಗುತ್ತಾರೆ. ಮತ್ತೊಂದು ಕಡೆ ಶುಭ್ರ ಅಯ್ಯಪ್ಪ ಎಂಟ್ರಿ ಕೊಟ್ಟು ಕಥೆಯ ದಿಕ್ಕನ್ನು ಬೇರೆ ಕಡೆ ಬದಲಿಸಿ ಇನ್ನೊಂಚೂರು ರಿಲ್ಯಾಕ್ಸ್ ಮಾಡುತ್ತಾರೆ.
ಈ ಮಧ್ಯೆ ಎಂಟ್ರಿ ಕೊಡುವ ಫಸ್ಟ್ ರೇಟೆಡ್ ಮತ್ತು ಚಿತ್ರದ ಪಾತ್ರದಲ್ಲಿ ಸಿಗರೇಟೆಡ್ ನಟಿ ಐಂದ್ರಿತಾ ರೇ ದಿಗಂತ್ ಜೊತೆ ಒಂದಷ್ಟು ಒಲವ ವಿಸ್ಮಯಗಳನ್ನು ಮಾಡಿ ಮತ್ತೊಂದು ದಿಕ್ಕಿಗೆ ನಮ್ಮನ್ನು ಕರೆದೊಯ್ಯುತ್ತಾರೆ. ಆಂಡಿಯ ಇರುವಿಗೆ ಜನರಿಗೆ ಮೈಂಡ್ ಫ್ರೆಶ್ ಮಾಡುವುದರ ಜೊತೆಗೆ ಕಥೆಗೂ ಸಪೋರ್ಟ್ ಮಾಡುತ್ತದೆ. ಅನಂತನಾಗ್ ಅವರ ಜೊತೆಗೂ ಅವರು ವ್ಯವಹರಿಸುವ ಪರಿ, ಗೌರವಿಸುವ ಪರಿ ಹೃದಯಕ್ಕೆ ಟಚ್ ಆಗುತ್ತದೆ!
ಸಂಗೀತದಲ್ಲಿ ಅನೂಪ್ ಸಿಳೀನ್ ಎಂದಿದ್ದರೂ ಜಂಟಲ್ ಮ್ಯೂಸಿಷಿಯನ್. ಅವರೇ ಹಾಡುವಾಗಲಂತೂ ನಾವೇ ಹಾಡಿದಷ್ಟು ಆಹ್ಲಾದಕರ ಫೀಲ್…ಈ ಎಲ್ಲದರ ನಡುವೆ ಛಾಯಾಗ್ರಾಹಕರು ಒಂದು ಪಾತ್ರವಾಗಿ, ಕಥೆಯ ವಿಭಾಗವಾಗಿ ನಿಲ್ಲುತ್ತಾರೆ. ಮಡಿಕೇರಿಯ ಮಂಜು ಮಿಶ್ರಿತ ರೋಡು ಮತ್ತು ಮೂಡು ಸಿನೆಮಾಗೆ ಸಪೋರ್ಟಿಂಗ್ ರೋಲ್ ರೂಪದಲ್ಲಿ ಓಡಾಡುತ್ತವೆ!
ಒಟ್ಟಾರೇ ತಿಮ್ಮಯ್ಯ ಮತ್ತು ತಿಮ್ಮಯ್ಯ ಒಂದು ಬ್ಯೂಟಿಫುಲ್ ರೈಡ್. ಅಲ್ಲಿ ಅನಂತನಾಗ್ ಎಂಬ ಆಗರ್ಭ ನಟನೇ ನಮ್ಮೆಲ್ಲರ ಗೈಡ್…ಐಂದ್ರಿತಾ ಎಂಡ್ ದಿಗಂತ್ ಅವರ ಸೈಡ್…ಇಂಥ ಸಿನೆಮಾಗಳು ಕನ್ನಡದ ಮಟ್ಟಿಗೆ ನಿಜಕ್ಕೂ ಪ್ರೈಡ್…!