ನಟಿ ಉಮಾಶ್ರೀ ಮನೆಯಲ್ಲಿ ‌ಕಳ್ಳತನ..!!

Published on

334 Views

ನಟಿ, ಮಾಜಿ ಸಚಿವೆ ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನ‌ ನಡೆದಿದೆ. ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮನೆಯಲ್ಲಿ ಈ‌ ಘಟನೆ‌ ನಡೆದಿದೆ. ಮನೆಯ ಬಾಗಿಲು ಮುರಿದು ಒಳ ನುಗ್ಗಿದ‌ ಕಳ್ಳರು ಅಪಾರ ಪ್ರಮಾಣದ ‌ವಸ್ತು ಮತ್ತು ಹಣವನ್ನು‌ ಕದ್ದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ‌ ಸಿಪಿಐ ಕರುಣೇಸಿಗೌಡ ಮತ್ತು ಪಿಎಸ್ಐ‌ ವಿಜಯಕುಮಾರ್ ಕಾಂಬಳೆ ಪರಿಶೀಲನೆ ‌ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ. ತೇರದಾಳ ಪೊಲೀಸ್‌ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com