ರಂಗಭೂಮಿ ಕಲಾವಿದೆ, ಹಿರಿಯ ನಟಿ ಕಿಶೋರಿ ಬಲ್ಲಾಳ ನಿಧನ…!!

Published on

390 Views

ರಂಗಭೂಮಿ ಕಲಾವಿದೆ, ಹಿರಿಯ ನಟಿ ಕಿಶೋರಿ ಬಲ್ಲಾಳ ನಿಧನ…!!
ಇಂದು ಬೆಳಿಗ್ಗೆ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದಾಗಿ ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನರಾಗಿದ್ದಾರೆ.


1960ರಲ್ಲಿ ‘ಇವಳೆಂಥ ಹೆಂಡತಿ’ ಸಿನಿಮಾ ಮೂಲಕ ಕಿಶೋರಿ ಚಿತ್ರರಂಗ ಪ್ರವೇಶ ಮಾಡಿದ್ದರು. 72 ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಕಿಶೋರಿಗೆ ಸಲ್ಲುತ್ತದೆ. ‘ಸ್ವದೇಶ್’ ಸಿನಿಮಾದಲ್ಲಿ ಶಾರುಖ್ ಖಾನ್‌ ಜೊತೆ ಕಿಶೋರಿ ನಟಿಸಿದ್ದರು. ಹಲವಾರು ಹಿಂದಿ ಸಿನಿಮಾ, ಜಾಹೀರಾತಿನಲ್ಲಿ ಕಿಶೋರಿ ಬಲ್ಲಾಳ್ ಅಭಿನಯಿಸಿದ್ದರು. ‘ಕಹಿ, ನಾನಿ, ರಿಂಗ್ ರೋಡ್, ಗಲಾಟೆ, ಅಯ್ಯ, ಕೆಂಪೇ ಗೌಡ, ನಮ್ಮಣ್ಣ’ ಸಿನಿಮಾದಲ್ಲಿ ಕಿಶೋರಿ ನಟಿಸಿದ್ದರು.
‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ಕಿಶೋರಿ ಬಲ್ಲಾಳ್ ನಟಿಸಿದ್ದರು. ಮೂಲತಃ ದಕ್ಷಿಣ ಕನ್ನಡದ ಮಂಗಳೂರಿನವರಾದ ಇವರು ಭರತನಾಟ್ಯ ಕಲಾವಿದ ಶ್ರೀಪತಿ ಬಲ್ಲಾಳರನ್ನು ಮದುವೆಯಾಗಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com