ವಿವಾದಗಳ ಸುಳಿಯಲ್ಲಿ ‘ದಿ ವಿಲನ್’

Published on

410 Views

ಬಿಡುಗಡೆಯ ಮೊದಲೇ ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿದ ‘ದಿ ವಿಲನ್’ ಗುರುವಾರದಂದು ಅದ್ಧೂರಿ ಯಾಗಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲೇ ಸ್ಟಾರ್ ವಾರ್ ಪುನಃ ಶುರುವಾಗಿದೆ. ಶಿವಣ್ಣನ ಅಭಿಮಾನಿಗಳು ಸಿನಿಮಾ ನೋಡಿ‌, ಸಿನಿಮಾ ನಿರೀಕ್ಷೆಯ ಮಟ್ಟಕ್ಕಿಲ್ಲ ಎಂದು ಮುನಿಸಿಕೊಂಡಿದ್ದಾರೆ. ಶಿವಣ್ಣನ ಅಭಿಮಾನಿಗಳು ನಿರ್ದೇಶಕ ಪ್ರೇಮ್ ಶಿವಣ್ಣನಿಗೆ ಸರಿಯಾದ ಪಾತ್ರ ಕೊಟ್ಟಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ‘ದಿ ವಿಲನ್’ ಮಲ್ಟಿ ಸ್ಟಾರ್ ಸಿನಿಮಾ ಇದರಲ್ಲಿ ಇಬ್ಬರಿಗೂ ಸಮಾನ ಪಾತ್ರ ಕೊಡಬೇಕಿತ್ತು. ಶಿವಣ್ಣನ ಪಾತ್ರ ಗೆಸ್ಟ್ ರೋಲ್ ತರ ಇದೆ. ಸುದೀಪ್ ಅವರನ್ನು ಸ್ಟೈಲಿಶ್ ಆಗಿ ತೋರಿಸಿ, ಶಿವಣ್ಣನ ಲೋಕಲ್ ಲುಕ್ ನಲ್ಲಿ ತೋರಿಸಿದ್ದಾರೆ. ಸುದೀಪ್ ಶಿವಣ್ಣನಿಗೆ ಹೊಡೆಯುವ ದೃಶ್ಯ ಅನಾವಶ್ಯಕ. ಸಿನಿಮಾದ ಕೊನೆಯಲ್ಲಿ ಶಿವಣ್ಣನಿಗೆ ತಾಯಿಯೂ ಸಿಗಲ್ಲ, ನಾಯಕಿಯೂ ಸಿಗಲ್ಲ. ಪ್ರೇಮ್ ತಮ್ಮ ಅನುಕೂಲಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ ಎಂದು ಪ್ರೇಮ್ ವಿರುದ್ಧ ಶಿವಣ್ಣನ ಅಭಿಮಾನಿಗಳು ಬೆಂಗಳೂರಿನ‌ ನರ್ತಕಿ ಚಿತ್ರಮಂದಿರದಲ್ಲಿ‌ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದೇ‌ ಕಾರಣಗೋಸ್ಕರ ನಿರ್ದೇಶಕರು‌ ಮಲ್ಟಿ ಸ್ಟಾರ್ ಸಿನಿಮಾ ಮಾಡುವ ಮೊದಲು ತುಂಬ‌ ಯೋಚನೆ‌ ಮಾಡಬೇಕಾಗುತ್ತದೆ. ಸಿನಿಮಾನ ಸಿನಿಮಾ ತರ ನೋಡಿದ್ರೆ ಇಂತಹ ತಪ್ಪುಗಳು ಗೋಚರಕ್ಕೆ ಬರಲ್ಲ. ಇಲ್ಲಿ ಅವರವರ ಅಭಿಮಾನಿಗಳು ತಮ್ಮ ನಾಯಕನಿಗೋಸ್ಕರ ಸಿನಿಮಾ ನೋಡಲು ಬಂದಾಗ ಸಿನಿಮಾ ತಮ್ಮ ನಿರೀಕ್ಷೆಯ ಮಟ್ಟಕ್ಕೆ ಇಲ್ಲವೆಂದಾಗ ಅಭಿಮಾನಿಗಳು‌ ಅಕ್ರೋಶಗೊಳ್ಳುವುದು ಸಹಜ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com