ಖ್ಯಾತ ನಟಿಯರು ಮಾಲ್ಡೀವ್ಸ್ ಗೆ ಹೋಗಿದ್ದರ ಹಿಂದಿನ ಗುಟ್ಟು ರಟ್ಟು.. ಹೀಗೂ ಉಂಟು…
ಲಾಕ್ಡೌನ್ ನಂತರ ಮನೆಯಿಂದ ಹೊರಬಂದ ನಟಿಯರ ದೊಡ್ಡ ದಂಡೇ ಸಾಲುಸಾಲಾಗಿ ಮಾಲ್ಡೀವ್ಸ್ ನ ಸುಂದರವಾದ ಕಡಲಿನ ಬೀಚ್ ಗಳಲ್ಲಿ ಬಿ ಕಿ ನಿ ಗಳನ್ನು ಧರಿಸಿರುವ ಫೋಟೋಗಳೊಂದಿಗೆ ಕಾಣಿಸಿಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾ ಗಳಲ್ಲಿ ಈ ನಟಿಯರು ತುಂ ಡು ಉಡುಗೆಗಳನ್ನು ತೊಟ್ಟು ಬೀಚಿನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಪಡ್ಡೆಹುಡುಗರಿಗೆ ನಿದ್ದೆಗೆಡಿಸುತ್ತಿದೆ. ಸಾಲು ಸಾಲಾಗಿ ನಟಿಯರು ಮಾಲ್ಡೀವ್ಸ್ ನಲ್ಲೇ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಅನೇಕರ ಮನಸ್ಸಿನಲ್ಲಿ ಎಲ್ಲಾ ನಟಿಯರ ಆಯ್ಕೆ ಕೂಡಾ ಮಾಲ್ಡೀವ್ಸ್ ಮಾತ್ರವೇ ಏಕೆ? ಇನ್ನಾವುದೂ ಸ್ಥಳ ಸಿಗಲಿಲ್ವಾ ?ಎನ್ನುವ ಪ್ರಶ್ನೆಗಳು ಕೂಡಾ ಮೂಡಿತ್ತು. ಕೆಲವರು ಬಹುಶಃ ಅಲ್ಲೇನಾದ್ರು ಡಿಸ್ಕೌಂಟ್ ಇದೆಯಾ ಎಂದು ಹಾಸ್ಯ ಮಾಡಿದ್ದರು ಕೂಡಾ.
ಇದೀಗ ಹಲವರನ್ನು ಕಾಡಿದ್ದ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ನಟಿಮಣಿಯರ ಮಾಲ್ಡೀವ್ಸ್ ಭೇಟಿಯ ಹಿಂದಿನ ಅಸಲಿ ಕಥೆ ಅನಾವರಣಗೊಂಡಿದೆ. ಇದ್ದಕ್ಕಿದ್ದಂತೆ ನಟಿಮಣಿಯರ ಮಾಲ್ಡೀವ್ಸ್ ಪ್ರವಾಸದ ಹಿಂದೆ ಇರುವ ಕಾಣದ ಕೈ ಮತ್ತಾರೂ ಅಲ್ಲ ಅದು ಮಾಲ್ಡೀವ್ಸ್ ನ ಪ್ರವಾಸೋದ್ಯಮ ಎನ್ನಲಾಗಿದೆ. ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ ಪ್ರಮುಖ ಆದಾಯ ಮೂಲ ಪ್ರವಾಸೋದ್ಯಮ. ಆದರೆ ಕೊರೋನಾ ನೀಡಿದ ಹೊ ಡೆ ತ ದಿಂದಾಗಿ ಪ್ರವಾಸೋದ್ಯಮ ಸಾಕಷ್ಟು ನಲುಗಿತ್ತು. ಲಾಕ್ ಡೌನ್ ನಂತರ ವಿದೇಶ ಪ್ರಯಾಣಕ್ಕೆ ಅವಕಾಶ ಸಿಕ್ಕರೂ ಕೂಡಾ ಜನ ಅದಕ್ಕೆ ಆಸಕ್ತಿ ತೋರುತ್ತಿಲ್ಲ. ಇದೇ ಕಾರಣದಿಂದ ತಮ್ಮ ಪ್ರವಾಸೋದ್ಯಮವನ್ನು ಮೇಲೆತ್ತಲು ಮಾಲ್ಡಿವ್ಸ್ ಮಾಡಿದ ಉಪಾಯ ಭಾರತೀಯ ನಟಿಯರ ಮೂಲಕ ಮಾಲ್ಡಿವ್ಸ್ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡುವುದು.
ಮಾಲ್ಡೀವ್ಸ್ ತನ್ನ ಪ್ರವಾಸೋದ್ಯಮವನ್ನು ಮತ್ತೆ ಮೇಲೆತ್ತಲು ಅಲ್ಲಿನ ರೆಸಾರ್ಟ್ ಮಾಲೀಕರ ಜೊತೆ ಸೇರಿ ಮಾಡಿದ ಯೋಜನೆಯ, ಕಸರತ್ತು ನಟಿಯರ ಮಾಲ್ಡೀವ್ಸ್ ಭೇಟಿಯ ಹಿಂದಿನ ಗುಟ್ಟಾಗಿದೆ. ಅಲ್ಲಿನ ರೆಸಾರ್ಟ್ ಗಳ ಮಾಲೀಕರು ಭಾರತೀಯ ನಟಿಯರ ಮ್ಯಾನೇಜರ್ಗಳು ಪಿ ಆರ್ ಓ ಗಳನ್ನು ಸಂಪರ್ಕ ಮಾಡಿ ಅವರು ಮೂಲಕ,, ಬಾಲಿವುಡ್, ಟಾಲಿವುಡ್ ಹಾಕು ಸ್ಯಾಂಡಲ್ವುಡ್ನ ನಟಿಮಣಿಯರಿಗೆ ಆಹ್ವಾನವನ್ನು ನೀಡಿದ್ದಾರೆ. ಅಷ್ಟೇ ಅಲ್ಲ ನಟಿಯರ ಖರ್ಚುವೆಚ್ಚವನ್ನು ಕೂಡಾ ಅವರೇ ಭರಿಸಿದ್ದಾರೆ ಎನ್ನಲಾಗಿದ್ದು, ಇದು ಒಂದು ರೀತಿಯಲ್ಲಿ ಪ್ರವಾಸೋದ್ಯಮಕ್ಕೆ ನೀಡಿದ ಜಾಹೀರಾತೇ ಆಗಿದೆ.
ನಟಿ ಮಣಿಯರ ಮಾಲ್ಡೀವ್ಸ್ ಭೇಟಿಯ ಹಿಂದೆ ಇಂತಹುದೊಂದು ಕಾರಣವಿದೆ ಎನ್ನುವ ಈ ವಿಷಯವನ್ನು ಬಾಲಿವುಡ್ ನಟರೊಬ್ಬರು ಬಯಲು ಮಾಡಿದ್ದು, ಈ ವಿಷಯ ಬಿ ಟೌನ್ ಮಾತ್ರವೇ ಅಲ್ಲದೇ ಈಗ ಎಲ್ಲೆಡೆ ಕೂಡಾ ಹಾಟ್ ಹಾಟ್ ಸುದ್ದಿಯಾಗಿದೆ. ನಟನು ನೀಡಿರುವ ಈ ಮಾಹಿತಿ ನಿಜವೋ ಅಥವಾ ಸು ಳ್ಳೋ ಎನ್ನುವುದನ್ನು ಮಾತ್ರ ಮಾಲ್ಡೀವ್ಸ್ ಗೆ ಹೋಗಿ ಎಂಜಾಯ್ ಮಾಡಿ ಬಂದಿರುವ ನಟಿಯರಷ್ಟೇ ತಿಳಿಸಬೇಕಿದೆ.