ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ನಟಿಸಿರುವ ಕಾಗೆ ಮೊಟ್ಟೆ ಚಿತ್ರದ ಹಾಡುಗಳು ಇದೇ ತಿಂಗಳಲ್ಲಿ ಬಿಡುಗಡೆಯಾಗಲಿವೆ

Published on

393 Views

ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಜಗ್ಗೇಶ್
ನಾಯಕನಾಗಿ ನಟಿಸಿರುವ “ಕಾಗೆಮೊಟ್ಟೆ” ಎಂಬ ಭಿನ್ನ ಶೀರ್ಷಿಕೆಯ
ಚಿತ್ರವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿದೆ.

ಚಿತ್ರದ‌ ಹಾಡುಗಳು ಮತ್ತು ಟ್ರೈಲರ್ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿವೆ. ಬಿ.ಕೆ.ಚಂದ್ರಹಾಸ್ ಅವರು ನಿರ್ಮಿಸಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ನಾಯಕನಾಗಿ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿಳ್ಳ ಗೋವಿ ಕೃಷ್ಣನ್ ಕಥೆ ಎಂಬ ಅಡಿಬರಹವಿದ್ದು ಚಿತ್ರದ ಮೇಲೆ ಕುತೂಹಲ ಸೃಷ್ಟಿಸುವಂತಿದೆ.‌ ಉಳಿದಂತೆ ಪಿ.ಎಲ್. ರವಿ ಅವರ ಛಾಯಾಗ್ರಹಣ, ಶ್ರೀವತ್ಸ ಅವರ ಸಂಗೀತ ಸಂಯೋಜನೆ, ವಿ.ನಾಗೇಂದ್ರ ಪ್ರಸಾದ್ ಅವರ ಸಂಭಾಷಣೆ,ಕೆ.ಎಂ.ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ. ಮತ್ತೊಂದು ವಿಶೇಷವೇನೆಂದರೆ ನವರಸ ನಾಯಕ ಜಗ್ಗೇಶ್ ಅವರು ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದಾರೆ. ಇವರ ಜೊತೆಗೆ ಉಳಿದ ಗೀತೆಗಳನ್ನು ಜಯಂತ್ ಕಾಯ್ಕಿಣಿ, ಕವಿರಾಜ್ ಅವರು ಬರೆದಿದ್ದಾರೆ.
ಚಿತ್ರವು ಹೊಸ ವರ್ಷದಲ್ಲಿ ತೆರೆಗೆ ಬರಲಿದೆ. ಸ್ಕೈಲೈನ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಂದ್ರಹಾಸ್ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸುಬ್ಬರಾಯುಡು ಅವರು ಸಹ ನಿರ್ಮಾಪಕರಾಗಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com