ಸಾಮಾನ್ಯ ಜನರು ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ
ಶ್ರೀಮಂತರು ಮಾತ್ರ ವಿಮಾನದಲ್ಲಿ ಪ್ರಯಾಣ ಮಾಡಬಹುದೆಂಬ ಪ್ರತೀತಿ ಇದೆ. ನಿಜ ಎನ್ನುವಂತೆ ಸಾಮಾನ್ಯರು ಇದರಲ್ಲಿ ಪ್ರಯಾಣಿಸಬಹುದು. 2007ರಲ್ಲಿ 10 ಕಾರುಗಳೊಂದಿಗೆ ಪ್ರಾರಂಭವಾದ ಎಲ್.ವಿ.ಟ್ರಾವಲ್ಸ್ ಇಂದು 40 ಟೆಕ್ಕಿ ಕಂಪೆನಿಗಳಿಗೆ ಕಾರುಗಳನ್ನು ಸರಬರಾಜು ಮಾಡುತ್ತಾ 1800 ವಾಹನಗಳನ್ನು ಹೊಂದಿದೆ. ಇದರ ಮಾಲೀಕರಾದ ಪರಮಶಿವಯ್ಯ ಒಮ್ಮೆ ವಿಮಾನ ನಿಲ್ದಾಣದಿಂದ ಮನೆಗೆ ಬರುವ ಸಂದರ್ಭದಲ್ಲಿ ಚಾಲಕನೊಂದಿಗೆ ಹಾಗೇ ಸುಮ್ಮನೆ ಚರ್ಚೆ ಮಾಡಿದ್ದಾರೆ. ಆತ ನಮ್ಮಂತವರಿಗೆ ಏರೋಪ್ಲೇನ್‍ನಲ್ಲಿ ಹೋಗುವುದು ಆಗದ ಕೆಲಸವೆಂದು ಖೇದ ವ್ಯಕ್ತಪಡಿಸಿದ್ದಾನೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಇಂತಹವರಿಗಂತಲೇ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲು ಚಿಂತಿಸಿದ್ದಾರೆ.
ಅದರಂತೆ ವಿದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನವರು ನಾವು ಇಂಡಿಯಾದಿಂದ ಬಂದವೆಂದು ಪರಿಚಯಿಸಿಕೊಂಡರೆ, ದೆಹಲಿ, ಚೆನ್ನೈ, ಬಾಂಬೆ ಹೆಸರನ್ನು ಸೂಚಿಸುತ್ತಾರೆ. ಇದರಿಂದ ರೋಷಗೊಂಡು ಕರ್ನಾಟಕ, ಬೆಂಗಳೂರು ಹೇಳುವಂತೆ ಮಾಡಲು ಪ್ರಪಂಚದಾದ್ಯಂತ 14 ಶಾಖೆಗಳನ್ನು ತೆರೆದು ರಾಜ್ಯದ ಬಗ್ಗೆ ಗಮನ ಸೆಳೆಯುವಂತೆ ಮಾಡುವಲ್ಲಿ ಸಪಲರಾಗಿದ್ದಾರೆ. ಇದೆಲ್ಲಾ ಬೆಳವಣಿಗೆಯಿಂದ ಜನರಿಗೆ ಸುಲಭವಾಗಿ ಮಾಹಿತಿ ಸಿಗುವಂತೆ ಆ್ಯಪ್ ಶುರು ಮಾಡಿದ್ದಾರೆ. ಸದರಿ ಆ್ಯಪ್‍ನ್ನು ಚಂದನವನದ ತಾರೆಯರಾದ ವಿಜಯ್‍ರಾಘವೇಂದ್ರ, ಸೋನುಗೌಡ ಚಾಲನೆ ನೀಡಿ ಶುಭ ಹಾರೈಸಿದರು. ಹೆಚ್ಚಿನ ವಿವರಗಳಿಗೆ Flytripnow. com ನ್ನು ನೋಡಬಹುದು.
ಫ್ಲೈ ಟ್ರಿಪ್ ನೌ ಕಂಪನಿಗೆ ಪ್ರಪಂಚದಾದ್ಯಂತ ಗ್ರಾಹಕರಿದ್ದಾರೆ. ನಮ್ಮ ದೇಶದಿಂದ ಹೊರಗೆ ಹೋಗುವವರು, ಅಲ್ಲಿಂದ ಇಲ್ಲಿಗೆ ಬರುವವರು ಎಲ್ಲರಿಗೂ ಫ್ಲೈ ಟ್ರಿಪ್ ನೌ ಕಂಪನಿ ಅಂದ್ರೆ ಅಚ್ಚು ಮೆಚ್ಚು. ಯಾಕಂದ್ರೆ ಫ್ಲೈ ಟ್ರಿಪ್ ನೌ ಕಂಪನಿ ತನ್ನ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಸೇವೆಯನ್ನು ಒದಗಿಸುತ್ತದೆ. ಹಾಗಂತೆ ಕ್ವಾಲಿಟಿ ವಿಷಯದಲ್ಲಿ ಕಾಂಪ್ರೊಮೈಸ್ ಆಗಬೇಕಾಗುತ್ತೆ ಅಂತ ನೀವಂದುಕೊಂಡರೆ ಅದು ತಪ್ಪು. ಫ್ಲೈ ಟ್ರಿಪ್ ನೌ ಕಂಪನಿ ತನ್ನ ವಿಶ್ವದರ್ಜೆಯ ಸೇವೆಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಹನಿಮೂನ್ ಪ್ಯಾಕೇಜುಗಳಿಂದ ಹಿಡಿದು, ಕಾರ್ಪೊರೇಟ್ ಮೀಟಿಂಗ್ ಗಳು, ಎಂಪ್ಲಾಯಿ ಮೋಟಿವೇಷನ್ ಪ್ರೋಗ್ರಾಮ್ ಗಳು, ವರ್ಕ್ ಶಾಪ್ ಗಳು, ಅಂತರಾಷ್ಟ್ರೀಯ ವ್ಯವಹಾರ ಮೇಳಗಳ ವಿಸಿಟ್ , ಅವಾರ್ಡ್ ಪ್ರೋಗ್ರಾಮ್ ಗಳನ್ನು ಆಯೋಜಿಸುವುದನ್ನು ಈ ಕಂಪನಿ ಮಾಡುತ್ತದೆ.
ಅದಲ್ಲದೆ ಫಾರಿನ್ ಕಂಪನಿಗಳ ರಾಯಭಾರಿಗಳ ಜೊತೆ ಮಾತುಕತೆ ಮತ್ತು ಆ ಸಮಯದಲ್ಲಿ ಭಾಷಾಂತರ ತಜ್ಞರನ್ನು ಏರ್ಪಾಡು ಮಾಡುವ ಕೆಲಸವನ್ನೂ ಈ ಕಂಪನಿ ಸಮರ್ಥವಾಗಿ ಮಾಡುತ್ತದೆ. ಫ್ಲೈಟ್, ಫ್ಲೈಟ್ ಮತ್ತು ಹೊಟೇಲ್, ಬಸ್ ವ್ಯವಸ್ಥೆ, ಹಾಲಿಡೇಸ್ ಪ್ರೋಗ್ರಾಮ್ ಹೀಗೆ ಎಲ್ಲದರಲ್ಲೂ ನಿಮಗೆ ಬೇಕಾದ ಫ್ಲೆಕ್ಸಿಬಲ್ ಆಯ್ಕೆಗಳು ಈ ಕಂಪನಿಯಲ್ಲಿ ಲಭ್ಯ. ಕ್ಯಾನ್ಸಲೇಷನ್ ಮತ್ತು ರೀಫಂಡ್ ಗಳ ವಿಚಾರಗಳಲ್ಲೂ ಫ್ಲೈ ಟ್ರಿಪ್ ನೌ ಕಂಪನಿ ಫ್ಲೆಕ್ಸಿಬಲ್ ಆಗಿದೆ. ಅಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಪ್ರೋಮೋಕೋಡ್ ಗಳು, ಕಾಲ ಕಾಲಕ್ಕೆ ವಿಶೇಷ ಸಮಯಗಳಲ್ಲಿ ಡಿಸ್ಕೌಂಟ್ ಗಳೂ ಲಭ್ಯವಿವೆ.
ಒಟ್ಟಿನಲ್ಲಿ ಇಂದು ಚಾಲ್ತಿಯಲ್ಲಿರುವ ದೊಡ್ಡ ದೊಡ್ಡ ಕಂಪನಿಗಳ ಟ್ರಾವೆಲ್ ಮತ್ತು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗಳಿಗೆ ಹೋಲಿಸಿದರೆ ದರ ಮತ್ತು ಸೇವೆಯಲ್ಲಿ ಫ್ಲೈ ಟ್ರಿಪ್ ನೌ ಕಂಪನಿ ಎಷ್ಟೇ ಮೆಟ್ಟಿಲು ಮೇಲಿದೆ. ಹಾಗಾಗಿಯೇ ಫ್ಲೈ ಟ್ರಿಪ್ ನೌ ಕಂಪನಿಗೆ ಅಷ್ಟೊಂದು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಪ್ರಪಂಚದ ಶೇಕಡಾ 90ರಷ್ಟು ಹೊಟೇಲುಗಳಲ್ಲಿ ತಮ್ಮ ಗ್ರಾಹಕರಿಗೆ ತಂಗಲು ವ್ಯವಸ್ಥೆ ಮಾಡಿಕೊಡುವಷ್ಟು ಸಾಮರ್ಥ್ಯ ಹೊಂದಿರುವ ಫ್ಲೈ ಟ್ರಿಪ್ ನೌ ಕಂಪನಿ ಗ್ರಾಹಕರ ಅಚ್ಚು ಮೆಚ್ಚಿನ ಕಂಪನಿ ಆಗಿರುವುದರಲ್ಲಿ ಯಾವ ಸಂದೇಹವೂ ಇಲ್ಲ..