ಮುಂದಿನ ತಿಂಗಳು ನಡೆಯಲಿದೆ ರಣವೀರ್ – ದೀಪಿಕಾ ಮದುವೆ

Published on

352 Views

ಬಾಲಿವುಡ್ ನಟಿ‌ ದೀಪಿಕಾ‌ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ನಡುವೆ ಕೆಲವು ಗಾಸಿಪ್ ಗಳ ನಡುವೆಯೂ ಅವರಿಬ್ಬರ ಮದುವೆ ವಿಷಯ ಕೂಡ ಇತ್ತೀಚಿಗೆ ಕೇಳಿ ಬರುತ್ತಿತ್ತು. ಈಗ ತಮ್ಮ ವಿವಾಹದ ದಿನವನ್ನು ಘೋಷಿಸುವುದರ ಮೂಲಕ ಇದೆಲ್ಲದಕ್ಕೂ ತೆರೆ ಎಳೆದಿದ್ದಾರೆ. ರಣವೀರ್ ಮತ್ತು ದೀಪಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ನವೆಂಬರ್‌ 14 ಮತ್ತು 15 ರಂದು ನಮ್ಮ ಮದುವೆ ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ.


ಬಾಲಿವುಡ್ ನ ಟಾಪ್ ತಾರೆಯರ ಈ ಮದುವೆ ಸಮಾರಂಭದಲ್ಲಿ ಇಡೀ ಬಾಲಿವುಡ್ ಸಾಕ್ಷಿಯಾಗುವುದು ಮಾತ್ರ ಪಕ್ಕಾ. ಮದುವೆ ದಿನಾಂಕವನ್ನು ಪಕ್ಕಾ ಮಾಡಿರುವ ಜೋಡಿ ತಮ್ಮ ವಿವಾಹ ನಡೆಯುವ ಜಾಗವನ್ನು ಮಾತ್ರ ಬಹಿರಂಗ ಮಾಡಿಲ್ಲ. ಈ ಜೋಡಿಯ ಮದುವೆ‌ ಬಗ್ಗೆ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com