ಮಮ್ಮಿ ನಿರ್ದೇಶಕರ “ದೇವಕಿ” ಜೂನ್ ತಿಂಗಳಲ್ಲಿ ಬರಲಿದ್ದಾಳೆ

Published on

609 Views

ಸ್ಯಾಂಡಲ್ ವುಡ್ ನಲ್ಲಿ ಮಮ್ಮಿ ಚಿತ್ರದ ಮೂಲಕ ಗಮನ ಸೆಳೆದ
ಯಂಗ್ ನಿರ್ದೇಶಕ ಲೋಹಿತ್ ಕುಮಾರ್ ಪ್ರಿಯಾಂಕ ಉಪೇಂದ್ರ
ಅವರ ಅಭಿನಯದಲ್ಲಿ “ದೇವಕಿ” ಚಿತ್ರವನ್ನು ಮಾಡಿ ಮುಂದಿನ ತಿಂಗಳಲ್ಲಿ
ತೆರೆಗೆ ತರುತ್ತಿದ್ದಾರೆ. ಕಿಶೋರ್ ಅವರು ಈ ಚಿತ್ರದಲ್ಲಿ ಪೋಲಿಸ್
ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ ವಾಗಿದೆ.
ಈ ಹಿಂದೆ ‘ಹೌರಾಬ್ರಿಡ್ಜ್’ ಎಂಬ ಶೀರ್ಷಿಕೆಯಡಿ ಪ್ರಾರಂಭವಾದ
ಈ ಚಿತ್ರಕ್ಕೆ ಈಗ ದೇವಕಿ ಎಂಬ ಮರು ಶೀರ್ಷಿಕೆಯನ್ನು ಇಡಲಾಗಿದೆ.
ಪ್ರಿಯಾಂಕ ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,
ಈ ಚಿತ್ರದಲ್ಲಿ ಪ್ರಿಯಾಂಕ ಅವರ ಮಗಳು ಐಶ್ವರ್ಯ ಸಹ ನಟಿಸಿದ್ದಾರೆ‌.
ಈಗಾಗಲೇ ಟ್ರೈಲರ್ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರುವ
ಈ ಚಿತ್ರವು ಕನ್ನಡ ಮತ್ತು ತಮಿಳು ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ
ತೆರೆಗೆ ಬರಲಿದೆ. ಡಯಾನಹೌಸ್ ಖ್ಯಾತಿಯ ನಾಬಿನ್ ಪೌಲ್ ಅವರು
ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಸಿ.ಎಸ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ರವೀಶ್ ಹಾಗೂ ಅಕ್ಷಯ್ ಎಂಬುವವರು ಈ ಚಿತ್ರವು ನಿರ್ಮಾಣ ಮಾಡಿದ್ದಾರೆ. ನೀಲಾಮ್ ಗಾಂಧಿ ಹಾಗೂ ಲತಾ ಅರುಣ್ ಕುಮಾರ್ ಅವರು ಈ ಚಿತ್ರದ ಸಹ ನಿರ್ಮಾಪಕರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com