ಈ ವಾರ ತೆರೆಯ ಮೇಲೆ ಬಹುನಿರೀಕ್ಷೀತ “ತ್ರಯಂಬಕಂ”
ದಯಾಳ್ ಪದ್ಮನಾಭನ್ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ
ಮಾಡಿರುವ ಬಹುನಿರೀಕ್ಷೀತ ತ್ರಯಂಬಕಂ ಚಿತ್ರವು ಈ ವಾರ ತೆರೆಗೆ
ಬರುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ಆರ್.ಜೆ.ರೋಹಿತ್,ಅನುಪಮ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ತ್ರಯಂಬಕಂ ಚಿತ್ರವು ಟ್ರೈಲರ್ ಮೂಲಕ ಕುತೂಹಲ ಹುಟ್ಟಿಸಿದೆ.
ಬಹಳ ವರ್ಷಗಳ ನಂತರ ಮತ್ತೆ ನಟನೆಗೆ ಮರಳಿರುವ ರಾಘವೇಂದ್ರ ರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ಕೃಷ್ಣ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಗಣೇಶ್ ನಾರಯಣನ್ ಅವರು
ಸಂಗೀತ ಸಂಯೋಜನೆ ಮಾಡಿದ್ದಾರೆ. ಫ್ಯೂಚಲ್ ಎಂಟರ್ಟೈನ್ಮೆಂಟ್ ಫಿಲಂಸ್ ಬ್ಯಾನರ್ ನವರು ಅವಿನಾಶ್ ಯು ಶೆಟ್ಟಿ ಅವರ ಸಹ ನಿರ್ಮಾಣದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ಬಿ.ರಾಕೇಶ್ ಅವರ ಛಾಯಗ್ರಹಣ, ಶ್ರೀ ಕ್ರೇಜಿಮೈಂಡ್ ಅವರ ಸಂಕಲನ ಈ ಚಿತ್ರಕ್ಕಿದೆ.