ಬರೋಬ್ಬರಿ ಮೂರು ಘಂಟೆಗಳ ಕಾಲ ನಡೆಯಲಿದೆ ಬಹುನಿರೀಕ್ಷೀತ “ಕುರುಕ್ಷೇತ್ರ”

Published on

388 Views

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ
ಹೈ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ರೆಬಲ್‌ ಸ್ಟಾರ್‌ ಅಂಬರೀಶ್‌, ಕ್ರೇಜಿಸ್ಟಾರ್‌ ರವಿಚಂದ್ರನ್‌, ಅರ್ಜುನ್‌ ಸರ್ಜಾ, ನಟಿ ಭಾರತಿ ವಿಷ್ಣುವರ್ಧನ್, ನಿಖಿಲ್ ಕುಮಾರ್‌ ಹರಿಪ್ರಿಯಾ, ಮೇಘನಾ ರಾಜ್‌, ಸಾಯಿಕುಮಾರ್‌, ರವಿಶಂಕರ್‌, ಸೋನು ಸೂದ್‌, ಸೇರಿದಂತೆ ಬಹುದೊಡ್ಡ ತಾರಬಳಗ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾದ ಅವಧಿ ಎರಡು ಅಥವಾ ಎರಡು ಕಾಲು ಘಂಟೆಗಳ ಅವಧಿಯಲ್ಲಿಯೇ ಬರುತ್ತಿವೆ. ಆದರೆ ಕುರುಕ್ಷೇತ್ರ ಚಿತ್ರವು ಹಿಂದಿನ ಕಾಲದ ಸಿನಿಮಾಗಳಂತೆ ಬರೊಬ್ಬರಿ 3ಘಂಟೆ 5ನಿಮಿಷಗಳ ಕಾಲ ಇರಲಿದೆಯಂತೆ.

ಹೇಳಿ ಕೇಳಿ ಇದು ಪೌರಾಣಿಕ ಚಿತ್ರವಾಗಿರುವುದರಿಂದ ಚಿತ್ರದ ಅವಧಿ ಇಂದಿನ ಚಿತ್ರಗಳಿಗಿಂತ ಅರ್ಧ ಮುಕ್ಕಾಲು ಘಂಟೆ ಹೆಚ್ಚೆ ಇರಲಿದೆ. ಚಿತ್ರಕ್ಕೆ ಸೆನ್ಸಾರ್ ಮುಗಿದಿದ್ದು ಸೆನ್ಸಾರ್ ಮಂಡಳಿಯು ಚಿತ್ರವನ್ನು ನೋಡಿ ಮೆಚ್ಚಿ ಯು/ಎ ಸರ್ಟಿಫಿಕೇಟ್ ನೀಡಿದೆ. ಚಿತ್ರಕ್ಕೆ ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದು ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ. ಮುನಿರತ್ನ ಅವರು ಅದ್ದೂರಿಯಾಗಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ನಾಗಣ್ಣ ಅವರು ನಿರ್ದೇಶನ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com