ಆರೋಹಣ ದಲ್ಲಿ ಹಾಡುಗಳ ಪಯಣ
ಹಾರರ್ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ವಿಶೇಷ ನಿರೂಪಣೆಯ ಚಿತ್ರ ಆರೋಹಣ, ಶ್ರೀಧರ್ ಶೆಟ್ಟಿ, ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಹಾಡುಗಳ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್ ಈ ಚಿತ್ರದ ಹಾಡುಗಳನ್ನು ಅನಾವರಣಗೊಳಿಸಿ ಚಿತ್ರವನ್ನು ನಿರ್ಮಾಣ ಮಾಡುವುದು ಸುಲಭದ ಕೆಲಸ. ಆದರೆ ಒಳ್ಳೆಯ ಸಮಯ ನೋಡಿಕೊಂಡು ರಿಲೀಸ್ ಮಾಡಿದರಷ್ಟೆ ನಮ್ಮ ಶ್ರಮಕ್ಕೆ ತಕ್ಕಫಲ. ದೊರಕುವುದು, ಜ್ಯೋತಿಷಿಗಳ ಹಾಗೂ ಇತರರ ಮಾತು ಕೇಳಿ ಸಿನಿಮಾ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾಡು ಹೇಳಿದರು.
ಶ್ರೀಧರ್ ಶೆಟ್ಟಿ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರವಿದು. ಇದಕ್ಕೂ ಮುಂಚೆ ಧಾರವಾಹಿಗಳಿಗೆ ಕೂಡ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ರವಿಶಂಕರ್ ಗೌಡ ಈ ಚಿತ್ರದಲ್ಲಿ ಒಂದು ಹಾಡು ಕೂಡ ಹಾಡಿದ್ದಾರೆ. ಈ ಚಿತ್ರದ ಮೂಲಕ ಸುಶೀಲ್ ಕುಮಾರ್ ನಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಅಲ್ಲದೆ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಇದೊಂದು ತ್ರಿಕೋನ ಪ್ರೇಮ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ನಾಯಕಿಯ ಪ್ರೀತಿಯನ್ನು ಗೆಲ್ಲಲು ಇಬ್ಬರು ಯುವಕರು ನಡೆಸುವ ಪ್ರಯತ್ನವೇ ಆರೋಹಣದ ಮುಖ್ಯ ಎಳೆಯಾಗಿದೆ. ರೋಹಿತ್ ಶೆಟ್ಟಿ ಈ ಚಿತ್ರದಲ್ಲಿ ಮತ್ತೊಬ್ಬ ನಾಯಕನಾಗಿ ಅಭಿನಯಿಸಿದ್ದಾರೆ.
ಪ್ರೀತಿ, ಮೈತ್ರಿ, ದೀಕ್ಷಾ ನಾಯಕಿಯರಾಗಿ ಆಕ್ಟ್ ಮಾಡಿದ್ದಾರೆ. ಈ ಚಿತ್ರದ ಹಾಡೊಂದಕ್ಕೆ ಸಾಹಿತ್ಯ ಬರೆದಿರುವ ಕೆ. ಕಲ್ಯಾಣ್ ಮಾತನಾಡಿ ಈ ಚಿತ್ರದ ನಿರ್ಮಾಪಕ ಸಾಫ್ಟ್ ವೇರ್ ಆಗಿದ್ದರೂ, ಗುಣ ಮಾತ್ರ ಸಾಫ್ಟ್ ವೇರ್ ಆಗಿದೆ ಎಂದು ಹೇಳಿದರು.
ಚಿತ್ರದ ನಾಯಕ ಸುಶೀಲ್ ಕುಮಾರ್ ಮಾತನಾಡಿ ನಾಗತಿ ಹಳ್ಳಿ ಶಾಲೆಯಲ್ಲಿ ಅಭಿನಯ ತರಬೇತಿ ಕಲಿತೆ. ಹಳ್ಳಿಯ ಸೊಗಡಿನಲ್ಲಿ ನಡೆಯುವ ಈ ಕಥೆಯಲ್ಲಿ ಅಪ್ಪ, ಮಗನ ಬಾಂಧವ್ಯ ಹಾಗೂ ನವಿರಾದ ಪ್ರೇಮಕಥೆಯನ್ನು ಹೇಳಿದ್ದೇವೆ. ಮನೆಯಲ್ಲಿ ಒಂದು ಅಹಿತಕರ ಘಟನೆ ನಡೆದಾಗ ಹಿರಿಯ ಮಗನಾದ ನಾನು ಅದನ್ನು ಹೇಗೆ ನಿಭಾಯಿಸಿದೆ ಎಂದು ಚಿತ್ರದ ಮೂಲಕ ಹೇಳಿದ್ದೇವೆ ಎಂದು ಹೇಳಿದರು. ನಾಯಕಿ ಪ್ರೀತಿ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು.