ಅದ್ಧೂರಿಯಾಗಿ ‌ನೆರವೇರಿದ ‘ಸಲಾರ್’ ಚಿತ್ರದ ಮುಹೂರ್ತ ಸಮಾರಂಭ

Published on

592 Views

ಕೆಜಿಎಫ್ ನಿರ್ದೇಶಕ ಪ್ರಶಾಂತ್ ‌ನೀಲ್ ನಿರ್ದೇಶನದ ‘ಸಲಾರ್’ ಚಿತ್ರದ ಮುಹೂರ್ತ ‌ಸಮಾರಂಭ ಅದ್ಧೂರಿಯಾಗಿ ಹೈದರಾಬಾದ್ ನಲ್ಲಿ ಇಂದು ಬೆಳಿಗ್ಗೆ ನೆರವೇರಿತು. ಚಿತ್ರದ ನಾಯಕ‌ ಪ್ರಭಾಸ್,‌ ವಿಶೇಷ ಅತಿಥಿ ಯಶ್, ರಾಜ್ಯದ ಉಪಮುಖ್ಯಮಂತ್ರಿ‌ ಡಾ.ಸಿ.ಎನ್‌.ಅಶ್ವಥ್ ‌ನಾರಾಯಣ ಹಾಗೂ ತೆಲುಗು ಮತ್ತು‌ ಕನ್ನಡ ಚಿತ್ರರಂಗದ ಗಣ್ಯರು ಭಾಗವಹಿಸಿ, ಚಿತ್ರತಂಡಕ್ಕೆ ಶುಭಕೋರಿದರು. ‘ಸಲಾರ್’ ಸಿನಿಮಾ‌ ಮುಹೂರ್ತ‌ದ ಸುದ್ದಿ ಸೋಶಿಯಲ್ ‌ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.


ಹೊಂಬಾಳೆ ‌ಫಿಲ್ಮ್ಸ್ ಮೂಲಕ ಮೂಡಿಬರುತ್ತಿರುವ ‘ಸಲಾರ್’ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ‌ ಹಿಂದಿಯಲ್ಲಿ ಏಕಕಾಲಕ್ಕೆ‌ ತಯಾರಾಗುತ್ತದೆ. ಬಾಹುಬಲಿ‌ ಚಿತ್ರದಿಂದ ಕನ್ನಡ ಅಭಿಮಾನಿಗಳಿಗೆ‌ ಹತ್ತಿರವಾಗಿರುವ ಪ್ರಭಾಸ್ ‘ಸಲಾರ್’ ಮೂಲಕ‌ ಕನ್ನಡ ನಿರ್ದೇಶಕನ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಮತ್ತಷ್ಟು‌ ಹತ್ತಿರವಾಗಿದ್ದಾರೆ.‌ ‘ಸಲಾರ್’ ಸಿನಿಮಾದ ಪೋಸ್ಟರ್ ನೋಡಿದ ಅಭಿಮಾನಿಗಳು ಪ್ರಭಾಸ್‌ ರವರ ‘ಸಲಾರ್’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ‘ಸಲಾರ್’ ಚಿತ್ರಕ್ಕೆ ಇಂದು ರಾಮಾನಾಯ್ಡು ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com