ಓಟಿಟಿಯಲ್ಲಿ ಬಿಡುಗಡೆಯಾಗಿ, ಮೆಚ್ಚುಗೆ ಗಳಿಸಿದ ಭ್ರಮೆ

Published on

314 Views

ಕೊರೋನಾ ಮಹಾಮಾರಿ ಸಿನಿಮಾ ರಂಗಕ್ಕೆ ಶಾಪವಾಗಿ ಕಾಡುತ್ತಿದೆ .. ದೊಡ್ಡ ದೊಡ್ಡ ಸಿನಿಮಾ ತೆರೆ ಕಾಣದೇ ಹೋಗಿದೆ..ಹೊಸಬರ ಚಿತ್ರಗಳು ಓಟಿಟಿ ಪ್ಲ್ಯಾಟ್ ಫಾರಂ ನಂಬಿಕೊಂಡಿವೆ ಅಮೇಜಾನ್ ಪ್ರೈಮ್ ವೀಡಿಯೋ,ನೆಟ್ ಫ್ಲಿಕ್ಸ್ , ಇವೆಲ್ಲದರ ಜೊತೆ ಕನ್ನಡ ಚಿತ್ರಗಳಿಗೆಂದೇ ಮೀಸಲಾಗಿರುವ ನಮ್ಮ ಫ್ಲಿಕ್ಸ್  ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ನೆರವಾಗುತ್ತಿದೆ. ನಮ್ಮ ಫ್ಲಿಕ್ಸ್ ಮೂಲಕ ಬಿಡುಗಡೆ ಮಾಡಲಾಗಿರುವ ಭ್ರಮೆ ಚಿತ್ರ ಹೊಸದೊಂದು ಸಂಚಲನ ಮುಡಿಸಿದೆ.  ಓಟಿಟಿ ಮೂಲಕ ಚಿತ್ರ ಬಿಡುಗಡೆ ಮಾಡಿದೆ .. ಚೆನ್ನಾಗಿ ಪ್ಲಾನ್ ಮಾಡಿಕೊಂಡು ಟಿಕೇಟ್ ಹಂಚಿಕೆ ಮಾಡಿತು .. ನಿರ್ಮಾಪಕ ನಿರ್ದೇಶಕ ಚರಣ್ ರಾಜ್ ಮತ್ತು ತಂಡ ಇಡೀ ಕರ್ನಾಟಕ ತಿರುಗಿ ಟಿಕೇಟ್ ಮಾರಾಟ ಮಾಡಿತು.. ಅನೇಕರು ಚಿತ್ರವನ್ನು ಪ್ರೋತ್ಸಾಹಿಸಲು ತಾವಾಗಿಯೇ ಮುಂದೆ ಬಂದು ಖರೀದಿಸಿದರು.. ಹತ್ತು ಸಾವಿರ ಟಿಕೆಟ್ ಮಾರಾಟವಾಗಿದೆಯಂತೆ..ಹೊಸಬರ ಪ್ರಯತ್ನ ಸಫಲವಾಗಿದೆ..ಹೊಸ ಸಿನಿಮಾ ಮಾಡುವ ಉತ್ಸಾಹ ಬಂದಿದೆ ಎನ್ನುತ್ತಾರೆ ನಿರ್ದೇಶಕ , ನಿರ್ಮಾಪಕ ಚರಣ್ ರಾಜ್.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com