ಗುಡ್, ಗುಡ್ಡರ್, ಗುಡ್ಡೆಸ್ಟ್ ಸಿನಿಮಾಕ್ಕೆ ಸಾಥ್ ಕೊಟ್ಟ ಸಂಸದ ತೇಜಸ್ವಿ ಸೂರ್ಯ

ಗುಡ್, ಗುಡ್ಡರ್, ಗುಡ್ಡೆಸ್ಟ್ ಸಿನಿಮಾಕ್ಕೆ ಸಾಥ್ ಕೊಟ್ಟ ಸಂಸದ ತೇಜಸ್ವಿ ಸೂರ್ಯ
ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸಬರು ಎಂಟ್ರಿಯಾಗುತ್ತಿದ್ದಾರೆ. ಪಕ್ಕಾ ತಯಾರಿಯೊಂದಿಗೆ ಒಂದಷ್ಟು ಪ್ರಯೋಗದ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಈಗ ಗುರುತಿಸಿಕೊಳ್ಳಲು ಬರುತ್ತಿರೋ ಹೊಸ ನಿರ್ದೇಶಕ ಯುವಧೀರ, ಹೌದು ಈ ಯುವಧೀರ ಅವರಿಗೆ ಸಿನಿಮಾ ಹೊಸದಲ್ಲ. ಕಳೆದ ಒಂದುವರೆ ದಶಕದಿಂದಲೂ ಸಿನಿಮಾರಂಗದಲ್ಲಿ ಹಲವಾರು ಸಿನಿಮಾಗಳಿಗೆ ಸಂಭಾಷಣೆಕಾರನಾಗಿ, ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ಕಾಮಿಡಿ ಕಿಲಾಡಿ, ಡ್ರಾಮ ಜೂನಿಯರ್, ಕಲನಲ್ಲಿ ಮೂಡಿ ಬರುತ್ತಿರುವ ಮಜಾಭಾರತ ಇನ್ನು ಹಲವು ಶೋಗಳಿಗೆ ಇವರೇ ಬರಹಗಾರರು. ಈಗ ವಿಷಯ ಏನೆಂದರೆ ಸಿನಿಮಾದ ಟೈಟಲ್‌ನ ನಾಮಕರಣ ಹೀಗೂ ಮಾಡ್ಡಹುದು ಎಂದು ಸಿನಿಮಾ ನಿರ್ದೇಶಕರು ತೋರಿಸಿಕೊಟ್ಟಿದ್ದಾರೆ. ಹೌದು ಪ್ರಥಮ ಬಾರಿಗೆ ಟೈಟಲ್‌ಗೆ ಅಂತಾನೆ ಒಂದು ಟೀಸರನ್ನ ಮಾಡಿದ್ದಾರೆ. ಟೈಟಲ್‌ಗೆ ಟೀಸರ್ ಮಾಡುವ ಪ್ರಯೋಗ ಕನ್ನಡದಲ್ಲಿ ಇದು ಮೊಟ್ಟ ಮೊದಲ ಪ್ರಯತ್ನ ಸಾಮಾನ್ಯವಾಗಿ ಒಂದು ಮಗೂಗೆ ಹೆಸರಿಡಬೇಕಾದ್ರೆ ಜೋಹಿಸರತ್ತಿರ ಹೋಗಿ ಜಾತಕ ತೋರಿಸಿ ಹೆಸ್ರು ಬಲ ಕೇಳಿಕೊಂಡು ಅದರ ಆಧಾರದಲ್ಲಿ ಹೆಸರಿಟ್ಟು ನಾಮಕರಣ ಮಾಡುವ ಪ್ರಕ್ರಿಯೆ ಗೊತ್ತೆ ಇದೆ. ಅದೇ ಒಬ್ಬ ಸಿನಿಮಾ ನಿರ್ದೇಶಕನ ದೃಷ್ಟಿಕೋನದಲ್ಲಿ ತನಗೆ ಮಗು ಎಂದರೆ ತನ್ನ ಸಿನಿಮಾವೇ ಎಂದು ತಿಳಿದಿರುತ್ತಾನೆ. ಈ ಕಾನ್ಸೆಪ್ಪನ್ನೇ ಅಳವಡಿಸಿಕೊಂಡು ‘ಗುಡ್ ಗುಡ್ಡರ್ ಗುಡ್ಡೆಸ್ಟ್ ಸಿನಿಮಾದ ನಿರ್ದೇಶಕ ಯುವಧೀರ, ವಿಡಂಬನೆಯೊಂದಿಗೆ ಕಾಮಿಡಿಯಾದ ಅದ್ಭುತವಾದ ಟೀಸರೊಂದನ್ನು ತನ್ನ ಸಿನಿಮಾದ ಟೈಟಲ್ ನಾಮಕರಣಕ್ಕೆ ಮಾಡಿ, ಸಿನಿಮಾ ಟೈಟಲ್‌ನ ಬಿಡುಗಡೆಗೆ ಈ ರೀತಿನೂ ವಿಶೇಷವಾಗಿ ಟೀಸರ್‌ವೊಂದನ್ನು ಬಿಡಬಹುದಾ ಎಂದು ತೋರಿಸಿಕೊಟ್ಟಿದ್ದಾರೆ. ಸಧ್ಯ ಈ ಟೀಸರ್ ಯೂಟ್ಯೂಬ್‌ನಲ್ಲಿ ಟ್ರೆಂಡಿಗ್‌ನಲ್ಲಿರುವುದೇ ವಿಭಿನ್ನತೆಗೆ ಸಾಕ್ಷಿಯಾಗಿದೆ. ಟೇ ಸರನ ಜೊತೆಗೆ. ಇವರ ಟೈಟಲ್‌ನ ಫಸ್ಟ್ಲುಕ್ ಪೋಸ್ಪರನ್ನು ಬೆಂಗಳೂರು ಈ ದಕ್ಷಿಣ ಕ್ಷೇತ್ರದ ಸಂಸದ ಸಿನಿಮಾದ ಹಾಗೂ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರು ಆದ ತೇಜಸ್ವಿ ಸೂರ್ಯರವರು ಬಿಡುಗಡೆ ಮಾಡಿದ್ದಾರೆ.
ಇನ್ನೂ ಶೀರ್ಷಿಕೆ ವಿಚಾರಕ್ಕೆ ಬಂದರೆ ಇಂಗ್ಲೀಷ್‌ನ ವ್ಯಾಕರಣದಲ್ಲಿ ಡಿಗ್ರೀಸ್ ಆಫ್ ಕಂಪೇರಿಷನ್ ಅಂದರೆ ಪಾಸಿಟಿವ್, ಕಂಪೇರಟಿವ್, ಸೂಪಲೇಟಿವ್ ఎంట ಮೂರು ಡಿಗ್ರಿಗಳಿವೆ. ಆದರ ನಿಯಮದಂತೆ Big ಎಂಬ ಪದಕ್ಕೆ Bigger ಎಂಬುದು ಕಂಪೇರಿಟಿವ್. Biggest ಎಂಬುದು ಸೂಪಲೇಟಿವ್ ಆಗುತ್ತದೆ. ಅದೇ ರೀತಿ Great ಎಂಬ ಪದಕ್ಕೆ Greater, Greatest ಎಂತಾಗುತ್ತದೆ. ಆದರೆ Good ಗೆ ಮಾತ್ರ Gooder, Goodest ಆದರೆ, ಅದು ಗ್ರಾಮ್ಯಾಟಿಕಲಿ ತಪ್ಪಾಗುತ್ತದೆ. ಅದಕ್ಕೆ ಸರಿಯಾದ ವ್ಯಾಕರಣ Better, Best ಆಗುತ್ತದೆ. ಈ ತಾರತವ ವ್ಯಾಕರಣವು ಯಾವ ವ್ಯಾಕರಣ ಎಂಬುದು ಮೂಲ ಪ್ರಶ್ನೆ?, ಹಾಗಾಗಿ ಈ ವಿಚಿತ್ರ ವಾದವನ್ನೇ ಟೈಟಲ್ ಮಾಡಬಾರದೇಕೆ ಎಂಬ ಕಾರಣದಿಂದಾಗಿ ಸಿನಿಮಾದ ಶೀರ್ಷಿಕೆಯನ್ನ ‘ಗುಡ್ ಗುಡ್ಡರ್ ಗುಡ್ಡೆಸ್ಟ್’ ಎಂದು ಇಟ್ಟಿದ್ದೇನೆ ಎಂದು ಹೇಳುವ ನಿರ್ದೇಶಕರ ವಾದವನ್ನ ಮೆಚ್ಚುವಂತದ್ದೆ. ಈ ಟೈಟಲ್ ನ ಅರ್ಥ Good ಗೆ ಉತ್ತಮ. Gooder ಗೆ ಅತ್ಯುತ್ತಮ. Goodest ಗೆ ಸರ್ವೋತ್ತಮ ಎಂಬ ಅರ್ಥವಿದೆ, ಈ ಅರ್ಥವು ಕಥೆಯಲ್ಲಿ ಬರುವ ಮೂರು ಹಂತಗಳಿಗೆ ಪೂರಕವಾಗಿದಿಯಂತೆ.
ಒಂದು ಕಥೆ ಸಹಜವಾಗಿ ಎರಡು ಅಥವಾ ಮೂರು ಜನರ್‌ಗಳನ್ನ ಹೊಂದಿರುತ್ತದೆ, ಆದರೆ ಈ ಕಥೆ ಶುರುವಿನಲ್ಲಿ ಡಾರ್ಕ್ ಟ್ಯೂಮರ್, ಸೆಟೈರ್ ಕಾಮಿಡಿಯಿಂದ ಓಪನ್ ಆಗಿ, ಅಲ್ಲಿಂದ ಸಾಗುತ್ತಾ ಕವಲುಗಳಾಗಿ, ರೋಮ್ಯಾನ್ಸ್, ಡ್ರಿಲ್ಲರ್, ಡ್ರಾಮ, ಅಕ್ಷನ್, ಸ್ಟಾಪ್ ಸ್ಟಿಕ್, Neo- Noir, ಹೀಗೆ ಹಲವು ಜಾನಕ್ಕಳು ಸೇಪರ್ಡೆಯಾಗುತ್ತವೆ. ಇಷ್ಟು ಜಾನರ್ ಗಳು ಒಂದು ಸಿನಿಮಾದಲ್ಲಿ ಬರುತ್ತಿರುವುದು ಕನ್ನಡದಲ್ಲಿ ಇದೇ ಮೊದಲು ಎಂದು ಹೇಳುತ್ತಾರೆ ನಿರ್ದೇಶಕರು.
ನಾಯಕ ಹಾಗೂ ನಾಯಕಿ ಸೇರಿ ಮುಖ್ಯ ಕಲಾವಿದರು ಆಯ್ಕೆ ಪ್ರಕ್ರಿಯೆಯಲ್ಲಿದೆ. ಇನ್ನು ತಂತ್ರಜ್ಞರ ವಿಚಾರಕ್ಕೆ ಬಂದರೆ ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ಮಾಡುತ್ತಿದ್ದಾರೆ. ಮರೀಸ್ವಾಮಿಯವರ ಸಂಕಲನ, ಕೆ.ಜಿ.ಎಫ್ ಚಿತ್ರದ ಕ್ಯಾಮೆರಮನ್ ಭುವನ್ ಗೌಡರ ಸಹಾಯಕ ಕ್ಯಾಮೆರಮೆನ್ ಕುಮಾರ ಛಾಯಗ್ರಹಕರಾಗಿದ್ದಾರೆ. ಈ ಚಿತ್ರವನ್ನ ಬಿಲ್ಡರ್ ಹಾಗು ಬಿ.ಜೆ.ಪಿ ಮುಖಂಡರಾದ ಸುರೇಶ್ ಬಿ ರವರು ತಮ್ಮ ಶ್ರೀನಿಧಿ ಪಿಕ್ಟರ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವು ಇವರ ಬ್ಯಾನರ್‌ನಡಿಯಲ್ಲಿ ಮೂಡಿ ಬರುತ್ತಿರುವ ಮೊದಲನೇ ಸಿನಿಮಾ.
ಬ್ಯಾನರ್ : ಶ್ರೀನಿಧಿ ಪಿಕ್ಟರ್
ನಿರ್ಮಾಪಕರು : ಸುರೇಶ್.ಬಿ
ನಿರ್ದೇಶಕ : ಯುವಧೀರ
ಸಂಗೀತ : ಶಶಾಂಕ್ ಶೇಷಗಿರಿ
ಸಂಕಲನ : ಮರಿಸ್ವಾಮಿ
ಛಾಯಗ್ರಹಕ : ಕುಮಾರ್