‘ಫೋರ್ ವಾಲ್ಸ್’ ಚಿತ್ರತಂಡದಿಂದ ಅಚ್ಯುತ್ ಕುಮಾರ್ ಅವರಿಗೆ ಟೀಸರ್ ಗಿಫ್ಟ್

Published on

425 Views

ಎಸ್ ವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಟಿ. ವಿಶ್ವನಾಥ್ ನಾಯ್ಕ್ ನಿರ್ಮಿಸಿ, ಎಸ್ ಎಸ್ ಸಜ್ಜನ್ ರಚಿಸಿ ನಿರ್ದೇಶಿಸಿರುವ ‘ಫೋರ್ ವಾಲ್ಸ್’ ಚಿತ್ರದ ಟೀಸರ್ ಅಚ್ಯುತ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ
ಬರ್ತ್ ಡೇ ಟೀಸರ್ ಬಿಡುಗಡೆಯಾಗಿದೆ. ಇದು ಸಿನೆಮಾದ ಮೊದಲ ಟೀಸರ್.

ಅಚ್ಯುತ್ ಕುಮಾರ್ ಜೊತೆ ತಾರಾಗಣದಲ್ಲಿ ದತ್ತಣ್ಣ,ಸುಜಯ್ ಶಾಸ್ತ್ರಿ,ಡಾ.ಪವಿತ್ರ,ಡಾ.ಜಾನವ್ಹಿ ಜ್ಯೋತಿ,ಭಾಸ್ಕರ್ ನೀನಾಸಂ,ಶ್ರೇಯಾ ಶೆಟ್ಟಿ, ಆಂಚಲ್ ಮುಂತಾದವರಿದ್ದು, ಟೀಸರ್ ನಲ್ಲಿ ಹೊಸತನ ಎದ್ದು ಕಾಣುತ್ತಿದೆ. ಚಿತ್ರಕ್ಕೆ ಆನಂದ್ ರಾಜಾ ವಿಕ್ರಮ ಸಂಗೀತ, ವಡ್ಡೆ ದೇವೆಂದ್ರ ರೆಡ್ಡಿ ಛಾಯಾಗ್ರಹಣ ಮತ್ತು ಸತೀಶ್ ಸಂದೇಶ್ ಸಂಕಲನವಿದೆ.

ಮಂತ್ರಂ ಮತ್ತು ಮೃತ್ಯುಂಜಯ ಚಿತ್ರಗಳ ನಂತರ ವಿಭಿನ್ನ ಮತ್ತು ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಗಾಗಿ ಅಚ್ಯುತ್ ಕುಮಾರ್ ಅವರನ್ನು ಮೊದಲ ಬಾರಿಗೆ ಕಮರ್ಷಿಯಲ್ ಹೀರೋ ಮಾಡಿದ್ದಾರೆ ನಿರ್ದೇಶಕ ಎಸ್ ಎಸ್ ಸಜ್ಜನ್. ಅಚ್ಯುತ್ ಕುಮಾರ್ ಅವರಿಗಾಗಿಯೇ ವಿಶೇಷ ಹಾಡುಗಳಿವೆ. ಎರಡು ಶೇಡ್ ನ ಪಾತ್ರವಿದೆ ಒಂದು ಲವ್ ಸಾಂಗ್ ಕೂಡ ಇದ್ದು ವಿಜಯ್ ಪ್ರಕಾಶ್ ಹಾಡಿದ್ದಾರೆ. ಈಗಾಗಲೇ ಸೆನ್ಸಾರ್ ಮುಗಿಸಿ ರೆಡಿ ಇರುವ ಚಿತ್ರತಂಡ ಒಳ್ಳೆಯದಿನಗಳಾಗಿ ಎದುರುನೋಡುತ್ತಿದ್ದು ಶೀಘ್ರದಲ್ಲೇ ಜನರನ್ನು ತಲುಪುವ ಖುಷಿಯಲ್ಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com