ಅರ್ಧ ಶತಕ ಬಾರಿಸಿ ಮುನ್ನಡೆಯುತ್ತಿರುವ ತಾರಕಸುರ
ರಥಾವರ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ
ನಿರ್ದೇಶಕರಾದ ಚಂದ್ರಶೇಖರ್ ಬಂಡಿಯಪ್ಪ ನಂತರ ಅವರು
ಯುವ ನಟನನ್ನು ಹಾಕಿಕೊಂಡು “ತಾರಕಸುರ” ಚಿತ್ರವನ್ನು ನಿರ್ದೇಶನ
ಮಾಡಿ ಚಿತ್ರವನ್ನು ತೆರೆಗೆ ತಂದರು ಆ ಸಿನಿಮಾ ಈಗ “50” ದಿನಗಳನ್ನು ಸಂಭ್ರಮದಿಂದ ಪೂರೈಸಿದೆ. ಬುಡುಬುಡಿಕೆ ಜನಾಂಗದ ಕುರಿತ
ಕಥೆಯನ್ನು ಅದ್ಬುತವಾಗಿ ತೆರೆಯ ಮೇಲೆ ತಂದು ನೋಡುವ ಪ್ರೇಕ್ಷಕನಿಗೆ
ಭರಪೂರ ಮನೋರಂಜನೆ ನೀಡಿರುವ ತಾರಕಸುರ ಚಿತ್ರವು ರಾಜ್ಯಾದ್ಯಂತ
ಯಶಸ್ವಿ “ಐವತ್ತು ದಿನಗಳ ಪ್ರದರ್ಶನ ಕಂಡು ಮುನ್ನುಗುತ್ತಿದೆ.
ವೈಭವ್ ಮೊದಲಬಾರಿಗೆ ನಾಯಕನಾಗಿ ನಟಿಸಿದ್ದರು ಅನುಭವಿ ನಟನಂತೆ ನಟಿಸಿ ಈ ಕನ್ನಡ ಚಿತ್ರರಂಗದ ಭರವಸೆಯ ನಾಯಕನಾಗಿದ್ದಾರೆ. ಈ ಗೆಲುವಲ್ಲಿ ಧರ್ಮವಿಶ್ ಅವರು ಸಂಗೀತ ಸಂಯೋಜನೆ ಮಾಡಿರುವ ಹಾಡುಗಳ ಪಾಲು ಸಹ ಇದೆ. ಶಿವರಾಜ್ ಕುಮಾರ್ ಹಾಡಿರುವ ಕನ್ನಡ ಕಲಿಯೋ ಕನ್ನಡ ಕಲಿಯೋ ಹಾಡು ಸೇರಿದಂತೆ ಹಲವು ಹಾಡುಗಳು ಕೇಳುಗರ ಮೆಚ್ವುಗೆ ಪಡೆದುಕೊಂಡಿದ್ದವು.
ಓಂ ಬಾಲಾಜಿ ಎಂಟರ್ ಪ್ರೈಸೆಸ್ ಬ್ಯಾನರ್ ಅಡಿಯಲ್ಲಿ ವೈಭವ್ ಅವರ ತಂದೆ ನರಸಿಂಹುಲು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.