ಕೆಜಿಎಫ್-2 ಅಧೀರನಾಗಿ ಮಿಂಚುತ್ತಿರುವ ತಮಿಳು ಸ್ಟಾರ್ಸ್ ವಿಕ್ರಂ, ಸೂರ್ಯ, ಅಜಿತ್

Published on

320 Views

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಟ್ರೆಂಡ್ ನಿರ್ಮಿಸಿದ ಚಿತ್ರ ಕೆಜಿಎಫ಼್ ಸ್ಯಾಂಡಲ್ ವುಡ್ ಇನ್ನೊಂದು ಹಂತದಲ್ಲಿ ಮಿಂಚುವಂತೆ ಮಾಡಿತ್ತು. ಇನ್ನೂ ಕೆಜಿಎಫ಼್-2 ಕೂಡ ಚಿತ್ರೀಕರಣ ಆರಂಭವಾದ ದಿನದಿಂದಲೂ ಸಿನಿರಸಿಕರನ್ನ ಬಹಳಷ್ಟು ಕೂತೂಹಲಕ್ಕೆ ಎಡೆಮಾಡಿತ್ತು.ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇದೇ ಅಕ್ಟೋಬರ್ ಅಲ್ಲಿ ಕೆಜಿಎಫ಼್-೨ ತೆರೆಕಾಣುತ್ತಿತ್ತು.

ಕೆಜಿಎಫ಼್-2 ಅಲ್ಲಿ ನಾಯಕ ಯಶ್ ಎದುರು ವಿಲನ್ ಆಗಿ ಮಿಂಚುವುವರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದ್ದು, ಮೊನ್ನೆ ಬಾಲಿವುಡ್ ನಟ ಸಂಜಯ್‍ದತ್‍ರ ಹುಟ್ಟುಹಬ್ಬದಂದು ಹೊಂಬಾಳೆ ಫಿಲಂಸ್ ಬಿಡುಗಡೆಗೊಳಿಸಿರುವ ಅಧೀರನ ಪೋಸ್ಟರ್ ಎಲ್ಲಾ ಕುತೂಹಲಕ್ಕೆ ತೆರೆ ಎಳೆದಿದೆ. ಕೆಜಿಎಫ಼್-೨ ಚಿತ್ರಿಕರಣ ಆರಂಭವಾದ ದಿನದಿಂದಲೂ ಅಧೀರನ ಪಾತ್ರದ ವೈಭವದ ಬಗ್ಗೆ ಪ್ರಶಾಂತ್ ನೀಲ್ ತುಂಬಾ ಕಾತುರತೆ ಮೂಡಿಸಿದ್ದರು.

ಆದರೆ ಈಗ ಎಲ್ಲರಿಗೂ ಈಗ ಗೊಂದಲ ಮಾಡಿರುವ ಸಂಗತಿ ಏನೆಂದರೆ ತಮಿಳು ಸ್ಟಾರ್ಸ್ ವಿಕ್ರಂ, ಸೂರ್ಯ, ಅಜಿತ್ ಅಧೀರನ ಪಾತ್ರ ಮಾಡುತ್ತಿದ್ದರಾ ಎಂದು. ಆದರೆ ಅದ್ರ ಬಗ್ಗೆ ಈಗ ನಾವು ಸ್ಪಷ್ಟನೆ ನೀಡ್ತಿವಿ ಕೇಳಿ.ಅಧೀರನ ಲುಕ್ ಬಗ್ಗೆ ಸಕ್ಕತ್ ಕ್ರೇಝ್ ತಮಿಳು ಪ್ರೇಕ್ಷಕರೂ ಅಧೀರನ ಗೆಟಪ್ನಲ್ಲಿ ತಮ್ಮ ನೆಚ್ಚಿನ ನಟರ ಮುಖವನ್ನು ಎಡಿಟ್ ಮಾಡಿ ಶೇರ್ ಮಾಡ್ತಿದ್ದಾರೆ. ಸದ್ಯ ತಮಿಳು ನಟರ ಎಡಿಟೆಡ್ ಪೋಸ್ಟರ್ಗಳು ರಿಯಲ್ ಅನ್ನುವಷ್ಟರ ಮಟ್ಟಿಗೆ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೆಜಿಎಫ಼್-೨ ನ ಕ್ರೇಜ್ ಸಕ್ಕತ್ತಾಗೆ ಹಿಟ್ ಆಗ್ತಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com