ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆಗಳ “ನಾಟ್ ಔಟ್” ಚಿತ್ರ!!! – ಇಲ್ಲಿದೆ ನೋಡಿ ಚಿತ್ರದ ಸಂಪೂರ್ಣ ಮಾಹಿತಿ
ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆಗಳು ಸೇರಿ ಮಾಡಿರುವ “ನಾಟ್ ಔಟ್” ಸ್ಯಾಂಡಲ್ ವುಡ್ ನಲ್ಲಿ ಬಹಳ ಕುತೂಹಲವನ್ನು ಮೂಡಿಸಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ನೀರಿಕ್ಷೆ ಮೂಡಿಸಿರುವ ಚಿತ್ರಕ್ಕೆ ಬಿಡುಗಡೆಯ ದಿನಾಂಕ ನಿಗದಿಯಾಗಿದೆ.
ನಾಟ್ ಔಟ್ ಸಿನಿಮಾವನ್ನು ಅಂಬರೀಶ್ ಎಂ ರವರು ನಿರ್ದೇಶನ ಮಾಡಿದ್ದು, ಈ ಚಿತ್ರದಲ್ಲಿ ಅಜಯ್ ಪೃಥ್ವಿ ನಾಯಕನಾಗಿ ಹಾಗೂ ರಚನಾ ಇಂದರ್ ರವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಟ್ ಔಟ್ ಚಿತ್ರದಲ್ಲಿ ರವಿಶಂಕರ್, ಕಾಕ್ರೋಚ್ ಸುಧೀರ್, ಪ್ರಶಾಂತ್ ಸಿದ್ಧಿ, ಗೋವಿಂದೇ ಗೌಡ, ಗೋಪಾಲ ಕೃಷ್ಣ ದೇಶಪಾಂಡೆ ರವರಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹಾಗೂ ಇನ್ನೂ ಅನೇಕ ಕನ್ನಡ ಚಿತ್ರರಂಗದ ಪ್ರಮುಖ ತಾರಾಗಣವಿದೆ.
ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದು, ಹಾಲೇಶ್ ಎಸ್ ರವರು ಛಾಯಗ್ರಹಣವನ್ನು ಮಾಡಿದ್ದಾರೆ. ಈ ಸಿನಿಮಾವನ್ನು ವಿ. ರವಿಕುಮಾರ್ ರವರು ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ಹಾಗೂ ಶಂಶುದ್ದೀನ್ ಎ ರವರು ನಿರ್ಮಾಣ ಮಾಡಿದ್ದಾರೆ.
ನಾಟ್ ಔಟ್ ಚಿತ್ರದ ಹಾಡನ್ನು ಚಿತ್ರತಂಡ ಬಹಳ ವಿಶಿಷ್ಟವಾಗಿ ಬಿಡುಗಡೆ ಮಾಡಿದೆ, ಹಾಡನ್ನು ಕಾಕ್ರೋಚ್ ಸುದೀ ಮತ್ತು ನಾಯಕ ಅಜಯ್ ಪೃಥ್ವಿ ಕುಡಿದು ಗಲಾಟೆ ಮಾಡಿ, ಪಬ್ ಒಂದರಲ್ಲಿ ತಮ್ಮ ಚಿತ್ರದ ಹಾಡನ್ನು ಲೀಕ್ ಮಾಡಿದ ವ್ಯಕ್ತಿಯ ಜೊತೆ ಗಲಾಟೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಹಾಡನ್ನು ಬಿಡುಗಡೆ ಮಾಡಿದ್ದಾರೆ.
“ಆರುಮುಗಂ” ಆಗಿ ಇಲ್ಲಿಯವರೆಗೂ ಆರ್ಭಟಿಸಿದ್ದ ರವಿಶಂಕರ್ ರವರು ಈ ಚಿತ್ರದಲ್ಲಿ ಒಂಟಿ ಕೊಪ್ಪಲ್ ದೇವರಾಜರಾಗಿ ಅರ್ಭಟಿಸಲ್ಲಿದ್ದಾರೆ ಎಂದು ಚಿತ್ರತಂಡ ಸಿನಿಮಾದಲ್ಲಿ ರವಿಶಂಕರ್ ನಟನೆಯ ಒಂದು ಸಣ್ಣ ತುಣುಕನ್ನು ಹಂಚಿಕೊಂಡಿದೆ.
ಪ್ರೇಕ್ಷಕರಲ್ಲಿ ಬಹಳ ಕುತೂಹಲ ಮೂಡಿಸಿರುವ “ನಾಟ್ ಔಟ್”” ಚಿತ್ರವೂ ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್ ನ ಚಿತ್ರವಾಗಿದ್ದು, ಇದೇ ತಿಂಗಳ, ಅಂದರೇ ಜುಲೈ 19 ರಂದು ತೆರೆಯಮೇಲೆ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.