ಚಂದನವನಕ್ಕೆ ಪ್ರಮೋದ್ ಬೋಪಣ್ಣ ಎಂಬ ಪ್ರತಿಭೆ ಗ್ರಾಂಡ್ ಎಂಟ್ರಿ

Published on

338 Views

ಗಾಂಧಿನಗರದಲ್ಲಿ‌ ಬದುಕು ಕಟ್ಟಿಕೊಳ್ಳಬೇಕು. ಸ್ಟಾರ್ ಹೀರೋ ಆಗಿ ಮಿಂಚ್ಬೇಕು.ಥಿಯೇಟರ್ ಮುಂದೆ ದೊಡ್ಡ ಕಟೌಟ್ ನಿಲ್ಲಿಸಿ ಹಾರ ಹಾಕಿಸಿಕೊಳ್ಳಬೇಕು ಅನ್ನುವ ಕನಸು ಕಟ್ಕೊಂಡು ದಿನನಿತ್ಯ ಈ ಬಣ್ಣದ ದುನಿಯಾಕ್ಕೆ ಎಂಟ್ರಿ‌ ಕೊಡ್ತಾರೆ.‌ ಆದ್ರೆ ಈ ಕನಸು ನನಸು ಆಗೋದು ಪ್ರತಿಭೆ ಮತ್ತು ಅವಕಾಶಗಳು ಸಿಕ್ಕಾಗ. ಇದೇ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಟ್ಯಾಲೆಂಟ್ ಇರೋ ಹುಡ್ಗ ಒಬ್ಬ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅವರೇ ಪ್ರಮೋದ್ ಬೋಪಣ್ಣ.

ಮ‌ೂಲತಃ ಕೊಡಗಿನ‌ ಮಡಿಕೇರಿಯವರಾದ ಇವ್ರು ಒಂಬತ್ತು ವರ್ಷಗಳ ಕಾಲ ನ್ಯೂಸ್ ರೀಡರ್ ಆಗಿ ಉದಯ ಟಿವಿಯಲ್ಲಿ ಕೆಲಸ ಮಾಡಿದ್ರು. ಆ ಬಳಿಕ ಪ್ರಮೋದ್ ಅವರಿಗೆ ಬಣ್ಣದ ಜಗತ್ತು ಆಕರ್ಷಿಸಿತು. ನ್ಯೂಸ್ ರೀಡಿಂಗ್ ಕೆಲಸ ಬಿಟ್ಟು ಕಿರುತೆರೆಗೆ ಎಂಟ್ರಿ ಕೊಟ್ರು. ರಾಘವೇಂದ್ರ ಮಹಿಮೆ, ಸಮರ್ಥ, ಸದ್ಗುರು ಸಾಯಿಬಾಬಾ, ಸುಕನ್ಯ ಸೀರಿಯಲ್ ಗಳಲ್ಲಿ ನಟಿಸಿದ್ರು. ನಂತ್ರ ಪ್ರಮೋದ್ ದೊಡ್ಡ ಪರದೆಯ ಮೇಲೆ ಮಿಂಚೋ ಕಾಲ ಕೂಡಿ ಬಂತು. ಒಳ್ಳೆ ಕಥೆ ಇರೋ ಸಿನಿಮಾಗಳು ಅವರನ್ನ ಹರಸಿ ಬಂದ್ವು. ಅಂದುಕೊಂಡಂತೆ, ಮರೆಯದೆ ಕ್ಷಮಿಸು, ಬಳೇಪೇಟೆ ಸಿನಿಮಾಗಳಲ್ಲಿ ನಟಿಸಿದ್ದು, ಈ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಇಷ್ಟೇ ಅಲ್ಲದೇ ಇನ್ನೂ ಎರಡು ಸಿನಿಮಾಗಳ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ.

ಇವೆಲ್ಲದರ ಜೊತೆಗೆ ನಟಿ ಅನಿತ್ ಭಟ್ ಪ್ರೊಡಕ್ಷನ್ ಹೌಸ್ ನಲ್ಲಿ ರೆಡಿಯಾಗ್ತಿರುವ ಶಾರ್ಟ್ ಫಿಲ್ಮಂನಲ್ಲೂ ಮೇನ್ ಲೀಡ್ ರೋಲ್ ಮಾಡಿದ್ದಾರೆ. ಅಲ್ಲದೇ H2U water plus ಎನ್ನುವ ಅಡ್ವೈಸ್ ನಲ್ಲೂ ನಟಿಸಿದ್ದಾರೆ.

ಒಟ್ನಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಸ್ಟಾರ್ ಹೀರೋ ಆಗಿ‌ ಮಿಂಚೋ ನಾಯಕ್ವದ ಗುಣ ಪ್ರಮೋದ್ ಬೋಪಣ್ಣನಲ್ಲಿವೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com