‘ ಟಗರು’ ನ ಹೊಗಳಿದ ರಾಮ್ ಗೋಪಾಲ್ ವರ್ಮ

Published on

1330 Views

ನಿನ್ನೆ ರಾಮ್ ಗೋಪಾಲ್ ವರ್ಮ ಅವರಿಗೆ ಸಿನಿಮಾದ ವಿಶೇಷ ಪ್ರದರ್ಶನ ವನ್ನು ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಏರ್ಪಡಿಸಲಾಗಿತ್ತು. ಸೂರಿ ನಿರ್ದೇಶನದ ‘ಟಗರು’ ಚಿತ್ರದ ಬಗ್ಗೆ ಬಾಲಿವುಡ್ ಸ್ಟಾರ್ ನಿರ್ದೇಶಕ ವರ್ಮ ಸ್ಕ್ರೀನ್ ಪ್ಲೇಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ನಟಿ ಮಾನ್ವಿತಾ ಹಾಗೂ ಧನಂಜಯ್ ಪಾತ್ರ ಮತ್ತು ನಟನೆಯ ಬಗ್ಗೆ ಹೊಗಳಿದ್ದಾರೆ.

ಸಿನಿಮಾ ನೋಡಿ ಮಾಧ್ಯಮದ ಜೊತೆ ಮಾತಿಗಿಳಿದ ವರ್ಮ ‘ ಇದು ಸಾಮಾನ್ಯ ಸಿನಿಮಾವಲ್ಲ. ಈ ಸಿನಿಮಾ ಪ್ರತಿ ನಿರ್ದೇಶಕನಿಗೆ ಸ್ಪೂರ್ತಿ. ನಾನು ಈ ಟೀಂ ಜೊತೆ ಕೆಲಸ ಮಾಡಲು ಬಯಸುತ್ತೇನೆ. ನನ್ನ ನಿರ್ಮಾಣದ ಸಿನಿಮಾವನ್ನು ಸೂರಿ ಮಾಡಬೇಕು ಎಂದು‌ ಕೇಳಿಕೊಂಡಿದ್ದಾರೆ. ಈ‌ ಹಿಂದೆ ಶಿವರಾಜ್ ಕುಮಾರ್ ಅಭಿನಯದ ‘ಕಿಲ್ಲಿಂಗ್ ವೀರಪ್ಪನ್’ ಸಿನಿಮಾ ನಿರ್ದೇಶನದ ಮೂಲಕ‌ ಕನ್ನಡಕ್ಕೆ ಬಂದ ರಾಮ್ ಗೋಪಾಲ್ ವರ್ಮ ಮತ್ತೆ ಕನ್ನಡ ಸಿನಿಮಾ ಮಾಡುವ ಭರವಸೆ ಕೊಟ್ಟಿದ್ದಾರೆ. ‘ ಟಗರು’ ಸಿನಿಮಾದಲ್ಲಿ ಡಾಲಿ ಧನಂಜಯ್ ಮತ್ತು‌ ಮಾನ್ವಿತಾ ನಟನೆ ಬಗ್ಗೆ ಮಾತನಾಡಿದ ವರ್ಮ ಮಾನ್ವಿತಾಗೆ ನನ್ನ ಸಿನಿಮಾಕ್ಕೆ ಅಡ್ವಾನ್ಸ್ ಮಾಡುತ್ತೇನೆ. ಆಕೆ ಕೇಳುವ ಸಂಭಾವನೆಗಿಂತ ಹತ್ತು‌ಲಕ್ಷ ಹೆಚ್ಚು ಕೊಡುತ್ತೇನೆ. ಎಂದು‌ ತನ್ನ ಟ್ವಿಟ್ಟರ್ ಖಾತೆಯಲ್ಲಿ ವರ್ಮ ಟ್ವಿಟ್ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com