ಚಿರು ಗೆ ನಾಯಕಿಯಾಗಿ ‘ಕಾನ್ಸ್ ಟೇಬಲ್ ಸರೋಜಾ’
ಚಿರು ಗೆ ನಾಯಕಿಯಾಗಿ ‘ಕಾನ್ಸ್ ಟೇಬಲ್ ಸರೋಜಾ’
‘ ಕಾನ್ಸ್ ಟೇಬಲ್ ಸರೋಜಾ’ ಹೆಸರು ಕೇಳಿದ ತಕ್ಷಣ ನೆನಪಾಗುವುದು ‘ಟಗರು’ ಸಿನಿಮಾ. ಹೌದು! ಇತ್ತೀಚಿಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಟಗರು’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ‘ಕಾನ್ಸ್ ಟೇಬಲ್ ಸರೋಜಾ’ ಪಾತ್ರ ಸಣ್ಣದಾದರೂ ಆ ಪಾತ್ರ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಗಮನ ಸೆಳೆಯಿತು. ‘ಕಾನ್ಸ್ ಟೇಬಲ್ ಸರೋಜಾ’ ರವರ ನಿಜವಾದ ಹೆಸರು ತ್ರಿವೇಣಿ ರಾವ್. ಕಿರಾತಕ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ ತ್ರಿವೇಣಿ ನಂತರ ಇತ್ತೀಚೆಗೆ ಬಿಡುಗಡೆಯಾದ ಚಕ್ರವರ್ತಿ ಚಿತ್ರದಲ್ಲಿ ಸೃಜನ್ ಲೋಕೇಶ್ ಹೆಂಡ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ ಟಗರು’ ಸಿನಿಮಾದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದ ತ್ರಿವೇಣಿ ಗೆ ಚಿರಂಜೀವಿ ಸರ್ಜ ನಾಯಕನಾಗಿ ಅಭಿನಯಿಸುತ್ತಿರುವ ‘ರಾಜ ಮಾರ್ತಾಂಡ’ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಬಂದಿದ್ದು, ಟೈಸನ್ ಸಿನಿಮಾವನ್ನು ನಿರ್ದೇಶನ ಮಾಡಿದ ರಾಮ್ ನಾರಾಯಣ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಕಾನ್ಸ್ ಟೇಬಲ್ ಸರೋಜಾ’ ನನ್ನು ಅವರ ಅಭಿಮಾನಿಗಳಿಗೆ ನಾಯಕಿಯಾಗಿ ನೋಡುವ ಅವಕಾಶ ಸಿಕ್ಕಿದಂತಾಯಿತು. ತ್ರಿವೇಣಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಟಾಲಿವುಡ್ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.
ಪೂರಿ ಜಗನ್ನಾಥ್ ರವರ ‘ಮೆಹಬೂಬ್’ ಚಿತ್ರದಲ್ಲಿ ಮಿಲಿಟರಿ ಆಫೀಸರ್ ಆಗಿ ಹಾಗೂ ಇನ್ನೊಂದು ಚಿತ್ರದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೇ ಇನ್ನು ಕೆಲವರಿಗೆ ತಿಳಿಯದ ವಿಷಯಗಳೆಂದರೆ ತ್ರಿವೇಣಿ ಯವರು ರಾಜ್ ಮೌಳಿ ನಿರ್ದೇಶನದ ‘ ಬಾಹುಬಲಿ’ ಚಿತ್ರದಲ್ಲಿ ಶಿವಗಾಮಿ ( ರಮ್ಯಕೃಷ್ಣ) ರವರ ಜೊತೆ ಮಹಿಳೆ ಸೇನಾಧಿಪತಿಯಾಗಿ ಕಾಣಿಸಿಕೊಂಡಿರುವ ತ್ರಿವೇಣಿ ಬಾಹುಬಲಿ ಮತ್ತು ಭಾಗಮತಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಗೆ ಡೂಪ್ ಮಾಡಿದ್ದಾರೆ. ಈ ವಿಷಯವನ್ನು ಒಂದು ಖಾಸಗಿ ವಾಹಿನಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.