ಸುವರ್ಣ ಸುಂದರಿ ಚಿತ್ರೀಕರಣ ಸಂಪೂರ್ಣ
`ಸುವರ್ಣ ಸುಂದರಿ’ ಕನ್ನಡ ಸಿನಿಮಾ 600 ವರ್ಷಗಳ ಹಿಂದಿನ ಇತಿಹಾಸಕ್ಕೆ ತೆರಳಿ ಮೂರು ಹಂತಗಳಲ್ಲಿ ಪ್ರೇಕ್ಷಕನಿಗೆ ಮನರಂಜನೆಯನ್ನು ನೀಡಲು ಸಜ್ಜಾಗಿರುವ ಚಿತ್ರ 75 ದಿವಸದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮಾತಿನ ಭಾಗದ ರೆಕಾರ್ಡಿಂಗ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಸುತ್ತಿದೆ. ಇದೊಂದು ಪುನರ್ಜನ್ಮದ ವಿಚಾರವನ್ನು ಸಹ ಒಳಗೊಂಡಿದೆ.
ಬೆಂಗಳೂರು, ವಿಜಾಪುರ, ಹೈದರಾಬಾದ್, ಕೇರಳದ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ ಎಂದು ಚೊಚ್ಚಲ ನಿರ್ದೇಶನ ಮಾಡುತ್ತಿರುವ ಸೂರ್ಯ ಅವರು ತಿಳಿಸುತ್ತಾರೆ. ವಾಹಿನಿಗಳಲ್ಲಿ ಕೆಲಸ ಮಾಡಿ 10 ತೆಲುಗು ಸಿನಿಮಾಗಳಿಗೆ ಕಥೆಯ ರಚನೆಯಲ್ಲಿ ಅನುಭವ ಪಡೆದಿರುವ ಎಂ ಎಸ್ ಎನ್ ಸೂರ್ಯ ಈ `ಸುವರ್ಣ ಸುಂದರಿ’ ಚಿತ್ರವನ್ನ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ವಿಜಯನಗರ ಸಾಮ್ರಾಜ್ಯಕ್ಕೆ ಹೋಗಿ ಇಂದಿನ ಕಾಲಕ್ಕೆ ಸಿನಿಮಾ ಕಥೆ ಬಂದು ನಿಲ್ಲುತ್ತದೆ.
10 ನಿಮಿಷದ ಕಪ್ಪು ಬಿಳುಪು ಸನ್ನಿವೇಶಗಳು, 15 ನಿಮಿಷದ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಚಿತ್ರಕ್ಕೆ ರಾಮ್, ಸಾಕ್ಷಿ, ಪೂರ್ಣ, ಡಾ ಜಯಪ್ರದಾ, ಮಹಮ್ಮದ್ ಖಾನ್, ಸಾಯಿಕುಮಾರ್, ಅವಿನಾಷ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಸಾಯಿ ಕಾರ್ತಿಕ್ ಅವರ ಸಂಗೀತ, ಈಶ್ವರ್ ಅವರ ಛಾಯಾಗ್ರಹಣ, ಎಸ್ ಟೀಮ್ ನಿರ್ಮಾಣ, ಪ್ರವೀಣ್ ಪುಡಿ ಸಂಕಲನ ಈ ಚಿತ್ರ ಒಳಗೊಂಡಿದೆ.