ಸಖತ್ ಸಸ್ಪೆನ್ಸ್… ಸೂಪರ್ ಥ್ರಿಲ್ಲರ್… “ಚಿತ್ರಕಥಾ” ಟ್ರೈಲರ್…!!!

Published on

446 Views

ಬರ್ತಿದೆ ನಾನಾ ಭಾವಗಳ ಚಿತ್ತಾರ “ಚಿತ್ರಕಥಾ”
ದೊಡ್ಡ ನಿರೀಕ್ಷೆ ಹುಟ್ಟಿಸಿದೆ ಚಿತ್ರಕಥಾ ಟ್ರೈಲರ್
ಜುಲೈ 12ಕ್ಕೆ ನಿಮ್ಮುಂದೆ ಸಸ್ಪೆನ್ಸ್ + ಹಾರರ್ + ಥ್ರಿಲ್ಲರ್ ಚಿತ್ರಕಥಾ
ಚಿತ್ರಕಥಾ… ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ಸೆನ್ಸೆಷನ್ ಕ್ರಿಯೇಟ್ ಮಾಡೋದಕ್ಕೆ ಸಜ್ಜಾಗಿರೋ ಹೊಸ ಪ್ರಯತ್ನ.ಟೈಟಲ್ಲೇ ಹೇಳೋ ಹಾಗೇ. ಇದೊಂದು ಚಿತ್ರಪಟದಂತಿರೋ ಭಾವನೆಗಳ ಗುಚ್ಚ.. ಮನುಷ್ಯನ ಸ್ಮೃತಿಯ ವಿವಿಧತೆಯಿಂದ ಬದುಕಲ್ಲಾಗುವ ಏರುಪೇರುಗಳ ಮೇಲೆ ಚಿತ್ರಿತವಾಗಿರೋ ವಿಶಿಷ್ಠವಾದ ಕಥೆ. ಈಗಾಗ್ಲೇ ರಿಲೀಸ್ ಆಗಿರೋ ಈ ಟ್ರೈಲರ್ ಕನ್ನಡ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಕ್ವಾಲಿಟಿ ಮೇಕಿಂಗ್, ಸಸ್ಪೆನ್ಸ್ ಸ್ಕ್ರೀನ್ ಪ್ಲೇ, ಅನುಭವಸ್ಥ ತಾರಾಗಣ ಸಿನಿಮಾ ಮೇಲಿನ ಭರವಸೆಯನ್ನ ಹೆಚ್ಚಿಸಿದೆ. ಹೊಸ ನಿರೀಕ್ಷೆ ಹುಟ್ಟಿಸಿದೆ.

ಚಿತ್ರಕಥಾ ಸಿನಿಮಾದಲ್ಲಿ ಸುಜೀತ್ ರಾಥೋಡ್, ಸುಧಾರಾಣಿ, ದಿಲೀಪ್ ರಾಜ್, ಬಿ. ಜಯಶ್ರೀ, ತಬಲಾ ನಾಣಿ, ಅನುಶಾ ರಾವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನಲ್ಲಿ ಕಾಣೋ ಈ ಎಲ್ಲಾ ಪಾತ್ರಗಳೂ ಕ್ಯೂರಿಯಸ್ ಆಗಿವೆ. ಅಂದ್ಹಾಗೆ ಈ ಚಿತ್ರವನ್ನ ಯಶಸ್ವಿ ಬಾಲಾದಿತ್ಯ ನಿರ್ದೇಶಿಸಿದ್ದಾರೆ. ತನ್ವಿಕ್ ಛಾಯಾಗ್ರಹಣ ಮತ್ತು ಚೇತನ್ ಕುಮಾರ್ ಸಂಗೀತ ಚಿತ್ರಕ್ಕಿದೆ. ಪ್ರಜ್ವಲ್ ಎಮ್ ರಾಜ ಚಿತ್ರಕಥಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಹುತೇಕ ಹೊಸ ತಂತ್ರಜ್ಢರೇ ಕೂಡಿ ಮಾಡಿರೋ ಚಿತ್ರಕಥಾ ಸಿನಿಮಾ ಎಲ್ಲಾ ಆಂಗಲ್ ನಿಂದ್ಲೂ ಪಾಸಿಟೀವ್ ಆಗಿ ಕಾಣ್ತಿದ್ದು, ಇದೇ ತಿಂಗಳ 12ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗ್ತಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com