ಸರ್ಪ್ರೈಸ್ ನ್ಯೂಸ್ ಹೇಳಲಿರುವ ಬಹುನಿರೀಕ್ಷಿತ ಕಬ್ಜ ಚಿತ್ರತಂಡ..!

Published on

493 Views

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಕೆಲವೊಂದಿಷ್ಟು ಚಿತ್ರಗಳು ತನ್ನದೇ ಆದ ವಿಶಿಷ್ಟ ವಿನೂತನ ಶೈಲಿಯ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದು, ಸಾಕಷ್ಟು ಹಿಟ್ ಮೇಲೆ ಹಿಟ್ ಚಿತ್ರಗಳು ಕಾಣಿಸಿಕೊಂಡಿವೆ. ಇದೆಲ್ಲದರ ಜೊತೆ ಇತ್ತೀಚಿಗೆ ನಮ್ಮ ಕೆಜಿಎಫ್ ಸಿನಿಮಾ ಕೂಡ ಯಾವ ಮಟ್ಟಿಗೆ ಸದ್ದು ಮಾಡಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಮೊನ್ನೆಯಷ್ಟೇ ಬಿಡುಗಡೆಯಾದ ಕೆಜಿಎಫ್ 2 ಟೀಸರ್ ಈಗಾಗಲೇ 100 ಮಿಲಿಯನ್ ವೀಕ್ಷಣೆ ಪಡೆದಿದ್ದು, ಎಲ್ಲ ದಾಖಲೆಗಳನ್ನು ಮುರಿದು ಹಾಕಿ ಮುನ್ನುಗ್ಗುತ್ತಿದೆ.

ಇದೇ ನಿಟ್ಟಿನಲ್ಲಿ ಕಬ್ಜ ಸಿನಿಮಾ ಕೂಡ ಮೂಡಿ ಬರಲಿದ್ದು, ಅಂಡರ್ವರ್ಲ್ಡ್ ಇದ್ದರೆ ಹೀಗೆ ಇರಬೇಕು ಎನ್ನುವ ಹಾಗೆ ಚಿತ್ರೀಕರಣ ಮಾಡಲಾಗಿದೆ. ಮತ್ತು ಚಿತ್ರದ ಕೆಲ ಸ್ಟೀಲ್ಸ್ ಗಳು ಈಗಾಗಲೇ ಅಭಿಮಾನಿಗಳ ಹೃದಯವನ್ನು ಕದ್ದು, ಚಿತ್ರದ ಮೇಲೆ ಇನ್ನಷ್ಟು ನಿರೀಕ್ಷೆ ಮೂಡುವಂತೆ ಮಾಡಿವೆ. ಹಾಗೆ ನಮ್ಮ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಉಪೇಂದ್ರರವರು ಕೂಡ ಈ ಕಬ್ಜ ಚಿತ್ರದಲ್ಲಿ ನಾಯಕ ನಟನಾಗಿದ್ದು, ಇವರ ಅಭಿನಯ ಹೇಗಿರಬಹುದೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮತ್ತು ನಿರ್ದೇಶಕ ಆರ್ ಚಂದ್ರು ಅವರ ನಿರ್ದೇಶನದಲ್ಲಿ, ಈ ಕಬ್ಜ ಮೂಡಿ ಬರುತ್ತಿದ್ದು, ಕಬ್ಜಾ ಸಿನಿಮಾ ಇನ್ನೊಂದು ಕೆಜಿಎಫ್ ರೀತಿಯೇ ಅನುಭವವನ್ನು ನೀಡಲು ಸಜ್ಜಾಗಿದೆ.

ಕನ್ನಡದ ಹೆಮ್ಮೆಯ ಇನ್ನೊಂದು ಚಿತ್ರ ಈ ಕಬ್ಜ ಆಗಿದ್ದು, ಬಿಡುಗಡೆಗೆ ಎಲ್ಲ ತಯಾರಿಯನ್ನು ನಡೆಸಿಕೊಂಡಿದೆ, ಹಾಗೂ ಇದೇ ಜನವರಿ 14ಕ್ಕೆ ಸಂಕ್ರಾಂತಿ ಹಬ್ಬದ ಪ್ರಯುಕ್ತ, ಚಿತ್ರತಂಡವೂ ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿಯೊಂದನ್ನು ನೀಡಲು ರೆಡಿಯಾಗಿದೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಆ ಸುದ್ದಿ ಎನಿರಬಹುದು ಎಂದು ನೀವು ಕಮೆಂಟ್ ಮಾಡಿ ತಿಳಿಸಿ. ಹಾಗೆ ಪ್ಯಾನ್ ಇಂಡಿಯಾ ಕಬ್ಜ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಕೋರಿ ಧನ್ಯವಾದಗಳು…

Copyright ©2026 . All Rights Reserved. privacy | terms Whatsapp: 9538193653 Email: hello@flixoye.com